ಆ್ಯಪ್ನಗರ

ಅಮಿತಾಭ್‌ ಬಚ್ಚನ್‌ ಸೂಪರ್‌ ಸ್ಟಾರ್‌ ಆಗಿದ್ದೇ ಅಭಿಷೇಕ್‌ ಬಚ್ಚನ್‌ ಪಾಲಿಗೆ ಮುಳುವಾಯ್ತಾ?

ಅಭಿಷೇಕ್‌ ಬಚ್ಚನ್‌ ಇತ್ತೀಚೆಗೆ 'ಬ್ರೀದ್‌' ವೆಬ್‌ ಸಿರೀಸ್‌ ಮೂಲಕ ಯಶಸ್ಸು ಕಂಡರು. ಆದರೂ ಅವರಿಗೆ ಟ್ರೋಲ್‌ ಕಾಟ ತಪ್ಪಿಲ್ಲ. ಅವರ ತಂದೆ ಅಮಿತಾಭ್‌ ಬಚ್ಚನ್‌ ಸೂಪರ್‌ ಸ್ಟಾರ್‌ ಎಂಬುದೇ ಇಷ್ಟಕ್ಕೆಲ್ಲ ಕಾರಣ! ಯಾಕೆ ಹೀಗೆ?

Vijaya Karnataka Web 3 Oct 2020, 1:18 pm
ಹಿಂದಿ ಚಿತ್ರರಂಗದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ನಟ ಅಭಿಷೇಕ್‌ ಬಚ್ಚನ್‌ಗೆ ಪದೇಪದೇ ಎದುರಾಗುವ ಒಂದು ಕಾಟ ಎಂದರೆ ಅದು ಟ್ರೋಲ್‌! ಅವರು ಸ್ಟಾರ್‌ ಕುಟುಂಬದಿಂದ ಬಂದವರು ಎಂಬ ಕಾರಣಕ್ಕಾಗಿಯೇ ಇಷ್ಟೆಲ್ಲ ಟ್ರೋಲ್‌ ಆಗುತ್ತಿದ್ದಾರೆ. ಹಾಗಂತ ಅಭಿಷೇಕ್‌ ಬಚ್ಚನ್‌ ಅದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ತಮ್ಮ ಕಾಲೆಳೆಯಲು ಬಂದವರಿಗೆ ಅಲ್ಲಿಯೇ ಖಡಕ್‌ ಉತ್ತರ ನೀಡುತ್ತಿದ್ದಾರೆ ಅವರು.
Vijaya Karnataka Web ಅಮಿತಾಭ್‌ ಬಚ್ಚನ್‌, ಅಭಿಷೇಕ್‌ ಬಚ್ಚನ್‌


ನೆಪೋಟಿಸಂ ಕಾರಣದಿಂದಲೇ ಅಭಿಷೇಕ್‌ ಬಚ್ಚನ್‌ ಯಶಸ್ಸು ಪಡೆಯುತ್ತಾರೆ ಎಂಬುದು ಹಲವರ ವಾದ. ಆ ಮಾತನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಟ್ವೀಟ್‌ ಮಾಡುವವರೂ ಇದ್ದಾರೆ. ಇತ್ತೀಚೆಗೆ ಒಬ್ಬರು ಮಾಡಿದ ಒಂದು ಟ್ವೀಟ್‌ ಈ ಮಾತಿಗೆ ಸಾಕ್ಷಿ. 'ಹೇ ಅಭಿಷೇಕ್‌.. ನೀವು ನೆಪೋಟಿಸಂನ ಪ್ರಾಡಕ್ಟ್‌. ನೀವು ಕಷ್ಟ ಪಡುತ್ತಿದ್ದೀರಿ ಎಂದಾದರೆ ಅದೇ ರೀತಿಯ ಕಷ್ಟ ಎಲ್ಲರಿಗೂ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಟ್ವಿಟರ್‌ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

'ನಾನು ಮತ್ತು ನನ್ನ ಪತ್ನಿ ಸ್ನೇಹಾ ಯೂಟ್ಯೂಬ್‌ ವಿಡಿಯೋಗಳನ್ನು ಮಾಡುತ್ತೇವೆ. ಇವು ನಿಮ್ಮ ಬಿಗ್‌ ಬ್ಯಾನರ್‌ ಸಿನಿಮಾಗಳಿಂತ ಭಿನ್ನ. ಯಾಕೆಂದರೆ ನಾನು ಇದನ್ನು ಸ್ವಂತವಾಗಿ ಮಾಡುತ್ತೇನೆ. ಶಿಫಾರಸ್ಸು ಮಾಡಿ ಎಂದು ನಾನು ಅಪ್ಪನ ಸಹಾಯ ಪಡೆದುಕೊಳ್ಳುವುದಿಲ್ಲ' ಎಂದು ಆ ವ್ಯಕ್ತಿ ಟ್ವೀಟ್‌ ಮಾಡಿದ್ದಾರೆ. ಇದು ಅಭಿಷೇಕ್‌ಗೆ ಸಹಜವಾಗಿಯೇ ಬೇಸರ ಮೂಡಿಸಿದೆ. ಆದರೆ ಅವರು ಅಷ್ಟೇ ಖಡಕ್‌ ಆಗಿ ಉತ್ತರ ನೀಡಿದ್ದಾರೆ.

also read: 'ಅಮಿತಾಭ್‌ ಕೊರೊನಾದಿಂದ ಸಾಯಲಿ' ಎಂದ ಕಿಡಿಗೇಡಿ! ಆಸ್ಪತ್ರೆಯಲ್ಲೇ ಗಳಗಳನೆ ಅತ್ತ ಬಿಗ್‌ ಬಿ!

'ನಿಮಗೆ ಸರಿಯಾಗಿ ಮಾಹಿತಿ ಇಲ್ಲ. ನೀವು ಪ್ರಬುದ್ಧರಲ್ಲ. ಏನನ್ನೂ ತಿಳಿದುಕೊಂಡಿಲ್ಲ. ತಪ್ಪಾದ ಮತ್ತು ಬೋಗಸ್‌ ಕಥೆಗಳನ್ನು ನಂಬುವುದನ್ನು ಮೊದಲು ನಿಲ್ಲಿಸಿ. ನಿಮ್ಮ ಪತ್ನಿ ಮತ್ತು ಕುಟುಂಬದ ಸಲುವಾಗಿಯಾದರೂ ದಯವಿಟ್ಟು ಆಲೋಚನೆ ಮಾಡಿ' ಎಂದು ಅಭಿಷೇಕ್‌ ಬಚ್ಚನ್‌ ತಿರುಗೇಟು ನೀಡಿದ್ದಾರೆ. ಇದೇ ರೀತಿ ಹಲವಾರು ಟ್ರೋಲ್‌ಗಳು ಅಭಿಷೇಕ್‌ರನ್ನು ಪ್ರತಿದಿನ ಭಾದಿಸುತ್ತವೆ. ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರ ಮಗ ಎಂಬ ಕಾರಣಕ್ಕೆ ಅವರ ಮೇಲೆ ಆಗಾಗ ನೆಪೋಟಿಸಂ ಆರೋಪ ಮಾಡಲಾಗುತ್ತದೆ.

also read: ಅನೇಕ ಸಿನಿಮಾಗಳು ನಟ ಅಭಿಷೇಕ್ ಬಚ್ಚನ್ ಕೈತಪ್ಪಿ ಹೋಗಲು ಕಾರಣ ಮಗಳು ಆರಾಧ್ಯಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌