ಮುಂಬರುವ ಹೊಸ ಚಿತ್ರವೊಂದರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಅವರು ಇಮೇಜ್ ಮೇಕ್ಓವರ್ಗೆ ಒಳಗಾಗಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಅವರ ನಟನೆಯ ರಾಬ್ಟಾ ಸಿನಿಮಾ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇದು ಅವರ ಹೊಸ ಸಿನಿಮಾ ಡ್ರೈವ್ನ ಮೇಲೆ ಪರಿಣಾಮ ಬೀರಿದೆ. ಅದಕ್ಕಾಗಿ ಈ ಸಿನಿಮಾದ ನಿರ್ಮಾಪಕರು ಈ ಹೊಸ ಸಿನಿಮಾದಲ್ಲಿ ಸುಶಾಂತ್ಗೆ ಮೇಕ್ಓವರ್ ಮಾಡಲು ನಿರ್ಧರಿಸಿದ್ದಾರಂತೆ. ಆ್ಯಕ್ಷ ನ್ ಸಿನಿಮಾವಾಗಿರುವ ಡ್ರೈವ್ನಲ್ಲಿ ಸುಶಾಂತ್ ಸಿಂಗ್ ರಫ್ ಆ್ಯಂಡ್ ಟಫ್ ಲುಕ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಸುಶಾಂತ್ ಸಿಂಗ್ಗೆ ಇಮೇಜ್ ಮೇಕ್ಓವರ್
ಮುಂಬರುವ ಹೊಸ ಚಿತ್ರವೊಂದರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ...
Vijaya Karnataka Web 29 Jun 2017, 5:30 am