ಆ್ಯಪ್ನಗರ

ಪ್ರಿಯಾಂಕಾ ಚೋಪ್ರಾ ನಿಕ್‌ ಮದುವೆಗೆ ಉಮೇದ್‌ ಭವನ್‌ ಅರಮನೆ ಸಜ್ಜು

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕನ್‌ ಗಾಯಕ ನಿಕ್‌ ಜೊನಾಸ್‌ ಮದುವೆಗೆ ಜೋಧ್‌ಪುರದ ಉಮೇದ್‌ ...

Vijaya Karnataka 29 Nov 2018, 5:00 am
ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕನ್‌ ಗಾಯಕ ನಿಕ್‌ ಜೊನಾಸ್‌ ಮದುವೆಗೆ ಜೋಧ್‌ಪುರದ ಉಮೇದ್‌ ಭವನ್‌ ಅರಮನೆ ವಿಶೇಷ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಇಂದಿನಿಂದ ಅಂದರೆ ನವೆಂಬರ್‌ 29 ರಿಂದ ಡಿಸೆಂಬರ್‌ 3 ರವರೆಗೆ ಈ ಅರಮನೆ ಪ್ರಿಯಾಂಕ ಚೋಪ್ರಾ ಕುಟುಂಬಕ್ಕೆ ಬುಕ್‌ ಆಗಿದೆ. ಈ ಅವಧಿಯಲ್ಲಿ ಪ್ರವಾಸಿಗರಿಗೆ ಇಲ್ಲಿ ಯಾವುದೇ ರೂಮ್‌ ಲಭ್ಯವಿರುವುದಿಲ್ಲ ಎಂದು ಉಮೇದ್‌ ಭವನ್‌ ಅರಮನೆ ಪ್ರಕಟಿಸಿದೆ.
Vijaya Karnataka Web priyanka chopra-1


ಈ ಐಷಾರಾಮಿ ಅರಮನೆಯ 64 ಲಗ್ಷುರಿಯಸ್‌ ರೂಮ್‌ಗಳ ಒಂದು ದಿನದ ವೆಚ್ಚವೇ ಸುಮಾರು ಎರಡೂವರೆ ಲಕ್ಷ ಆಗುತ್ತದಂತೆ. ಅಂದರೆ ಐದು ದಿನಗಳ ಕಾಲ ನಡೆಯುವ ಪ್ರಿಯಾಂಕ ಮದುವೆಯ ವಸತಿ ವೆಚ್ಚವೇ ಸುಮಾರು 3.2 ಕೋಟಿ ರೂ. ಆಗುತ್ತದೆ ಎಂದು ಅಂದಾಜಿಸಲಾಗಿದೆ. ಸಂಪೂರ್ಣ ರಾಯಲ್‌ ಶೈಲಿಯಲ್ಲಿಯೇ ನಡೆಯಲಿರುವ ಈ ಮದುವೆಗೆ ಬರುವ ಗಣ್ಯ ಅತಿಥಿಗಳಿಗೆ ಉಮೇದ್‌ ಭವನ್‌ ಒಳಗಡೆಯೇ ಸ್ಪೆಷಲ್‌ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಡಿಸೆಂಬರ್‌ 2 ರಂದು ಮದುವೆ ನಡೆಯಲಿದ್ದು ಇಂದಿನಿಂದ ಮೆಹೆಂದಿ, ಸಂಗೀತ್‌, ಅರಶಿನ ಶಾಸ್ತ್ರ ಕಾರ್ಯಕ್ರಮಗಳು ಆರಂಭವಾಗಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌