ಆ್ಯಪ್ನಗರ

ಶ್ರೀದೇವಿ ಬಯೋಪಿಕ್‌ ಸದ್ಯಕ್ಕಿಲ್ಲ

ಸಿನಿ ಪ್ರಿಯರು ಅತ್ಯಂತ ಕಾತರದಿಂದ ಕಾಯುತ್ತಿರುವ ದಿವಂಗತ ಶ್ರೀದೇವಿಯವರ ಬಯೋಪಿಕ್‌ ಸದ್ಯಕ್ಕೆ ಬರುವಂತೆ ಕಾಣುತ್ತಿಲ್ಲ...

Vijaya Karnataka 11 Jan 2019, 5:00 am
ಸಿನಿ ಪ್ರಿಯರು ಅತ್ಯಂತ ಕಾತರದಿಂದ ಕಾಯುತ್ತಿರುವ ದಿವಂಗತ ಶ್ರೀದೇವಿಯವರ ಬಯೋಪಿಕ್‌ ಸದ್ಯಕ್ಕೆ ಬರುವಂತೆ ಕಾಣುತ್ತಿಲ್ಲ. ಶ್ರೀದೇವಿ ಪತಿ ಬೋನಿ ಕಪೂರ್‌ ಈ ಬಯೋಪಿಕ್‌ ನಿರ್ಮಿಸಲಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ಈಗ ಅವರು, ಶ್ರೀದೇವಿ ಬಯೋಪಿಕ್‌ ನಿರ್ಮಿಸುವ ಯಾವುದೇ ಯೋಜನೆಯನ್ನು ನಾನು ಹಾಕಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Vijaya Karnataka Web sridevi


ಶ್ರೀದೇವಿ ಬಯೋಪಿಕ್‌ ಬರಲಿದೆ ಎಂಬ ಸುದ್ದಿಗಳೆಲ್ಲ ಸುಳ್ಳು ಎಂದು ಹೇಳಿರುವ ಬೋನಿ ಕಪೂರ್‌, ನಾನು ಕೇವಲ ಟೈಟಲ್‌ ರಿಜಿಸ್ಟರ್‌ ಮಾಡಿಕೊಂಡಿದ್ದೇನೆ ಮತ್ತು ಆ ಹೆಸರಿನ ಕಾಪಿರೈಟ್‌ ತೆಗೆದುಕೊಂಡಿದ್ದೇನೆ. ಬೇರೆಯವರು ಆ ಹೆಸರನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮಾತ್ರ ಹೀಗೆ ಮಾಡಿದ್ದೇನೆಯೇ ಹೊರತು ಬಯೋಪಿಕ್‌ ನಿರ್ಮಿಸುವುದಕ್ಕೆ ಅಲ್ಲ ಎಂದಿದ್ದಾರೆ. ತಡವಾಗಿಯಾದರೂ ಶ್ರೀದೇವಿ ಬಯೋಪಿಕ್‌ ಬರಲಿದೆಯೇ ಎಂದು ಅವರಲ್ಲಿ ಕೇಳಿದ ಪ್ರಶ್ನೆಗೆ, ಭವಿಷ್ಯದಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಸದ್ಯಕ್ಕಂತು ಶ್ರೀದೇವಿ ಬಯೋಪಿಕ್‌ ಬರುವುದಿಲ್ಲ ಎಂದು ಬೋನಿ ಕಪೂರ್‌ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌