ಆ್ಯಪ್ನಗರ

ಬರಲಿದೆ ತೈಮೂರ್‌ ಹೆಸರಿನ ಸಿನಿಮಾ

ಇತ್ತೀಚೆಗೆ ಆಟಿಕೆ ಕಂಪೆನಿಯೊಂದು ಥೇಟ್‌ ತೈಮೂರ್‌ನನ್ನೇ ಹೋಲುವ ಗೊಂಬೆಯೊಂದನ್ನು ತಯಾರಿಸಿತ್ತು

Vijaya Karnataka 19 Dec 2018, 7:43 am
ಕರೀನಾ ಕಪೂರ್‌ ಮತ್ತು ಸೈಫ್‌ ಆಲಿ ಖಾನ್‌ ದಂಪತಿಯ ಪುಟಾಣಿ ಮಗ ತೈಮೂರ್‌ನ ಜನಪ್ರಿಯತೆ ನೋಡಿ ಖ್ಯಾತ ಸಿನಿಮಾ ನಿರ್ಮಾಪಕ ಮಧುರ್‌ ಭಂಡಾರ್ಕರ್‌ ತಮ್ಮ ಮುಂದಿನ ಸಿನಿಮಾಗೆ ತೈಮೂರ್‌ ಎಂಬ ಟೈಟಲ್‌ ಇಡಲಿದ್ದಾರೆ. ಈಗಾಗಲೇ ಅವರು ಈ ಹೆಸರಿನ ಟೈಟಲನ್ನು ರಿಜಿಸ್ಟರ್‌ ಮಾಡಿಕೊಂಡಿದ್ದಾರೆ. ಆದರೆ ಈ ಸಿನಿಮಾ ಕರೀನಾ-ಸೈಫ್‌ ಪುತ್ರ ತೈಮೂರ್‌ನದ್ದೇ ಆಗಲಿದೆಯೇ ಎಂದು ತಿಳಿದು ಬಂದಿಲ್ಲ.
Vijaya Karnataka Web Gurugram: Bollywood actor Saif Ali Khan, Kareena Kapoor Khan and their son Taimu...
Bollywood actor Saif Ali Khan, Kareena Kapoor Khan and their son Taimur Ali Khan ride a tractor at Pataudi Palace in Gurugram on Tuesday.Photo


ಇತ್ತೀಚೆಗೆ ಆಟಿಕೆ ಕಂಪೆನಿಯೊಂದು ಥೇಟ್‌ ತೈಮೂರ್‌ನನ್ನೇ ಹೋಲುವ ಗೊಂಬೆಯೊಂದನ್ನು ತಯಾರಿಸಿತ್ತು. ಈ ಗೊಂಬೆಗೆ ಎಲ್ಲೆಡೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಪ್ಯಾಪರಾಜಿಗಳು ಕೂಡಾ ಈ ಪುಟಾಣಿ ಹೋದ ಕಡೆಯೆಲ್ಲಾ ಹಿಂಬಾಲಿಸಿ ಫೋಟೊ ತೆಗೆದು ಆ ಫೋಟೊವನ್ನು ಸುಮಾರು ಒಂದೂವರೆ ಸಾವಿರ ರೂಪಾಯಿಗೆಲ್ಲ ಮಾರಾಟ ಮಾಡುತ್ತಾರಂತೆ. ಕೆಲವು ಸಮೀಕ್ಷೆಗಳ ಪ್ರಕಾರ, ಜನಪ್ರಿಯತೆಯ ವಿಷಯದಲ್ಲಿ ತೈಮೂರ್‌, ಪ್ರಧಾನಿ ನರೇಂದ್ರ ಮೋದಿಗೆ ಅವರಿಗೇ ಸ್ಪರ್ಧೆ ನೀಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌