ಆ್ಯಪ್ನಗರ

ದುಷ್ಟಶಕ್ತಿ ನಿವಾರಿಸಲು ಹೀಗೆ ಮಾಡಿದ್ರಾ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್? ವೈರಲ್ ಆಯ್ತು ವಿಡಿಯೋ!

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ಶರ್ಮಾ ದುಬೈನಲ್ಲಿ ಒಂದು ಘಟನೆ ಮೂಲಕ ಸುದ್ದಿಯಾಗಿದ್ದಾರೆ. ಯಾಕೆ ಅವರು ಈ ರೀತಿ ಮಾಡಿದರು? ಇದಕ್ಕೆ ನಿಜವಾದ ಕಾರಣ ಏನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

THE TIMES OF INDIA NEWS SERVICE 6 Dec 2020, 11:47 am
ಗ್ರೀಕ್ ಸಂಪ್ರದಾಯದ ಪ್ರಕಾರ ಪ್ಲೇಟ್‌ಗಳನ್ನು ಒಡೆಯೋದರಿಂದ ದುಷ್ಟಶಕ್ತಿ ನಿವಾರಣೆ ಆಗುತ್ತದೆ. ವಿಶ್ವದಾದ್ಯಂತ ಇರುವ ಅನೇಕ ಗ್ರೀಕ್‌ ರೆಸ್ಟೋರೆಂಟ್‌ಗಳಲ್ಲಿ ಪ್ಲೇಟ್‌ಗಳನ್ನು ಒಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇತ್ತೀಚೆಗೆ ಬಾಲಿವುಡ್‌ ಬ್ಯಾಡ್‌ಬಾಯ್ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರು ಪ್ಲೇಟ್ ಒಡೆದು ಸುದ್ದಿಯಾಗಿದ್ದಾರೆ.
Vijaya Karnataka Web actor salman khan sister arpita khan sharma breaks plates at dubai restaurant video viral
ದುಷ್ಟಶಕ್ತಿ ನಿವಾರಿಸಲು ಹೀಗೆ ಮಾಡಿದ್ರಾ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್? ವೈರಲ್ ಆಯ್ತು ವಿಡಿಯೋ!


ದುಬೈನಲ್ಲಿ ಪ್ಲೇಟ್ ಒಡೆದ ಅರ್ಪಿತಾ
ದುಬೈನ ರೆಸ್ಟೋರೆಂಟ್‌ವೊಂದರಲ್ಲಿ ಸಲ್ಮಾನ್ ಖಾನ್ ತಂಗಿ ಪ್ಲೇಟ್‌ ಎಸೆದಿರುವ ವಿಡಿಯೋ ವೈರಲ್ ಆಗುತ್ತಿದೆ. ಸ್ನೇಹಿತರ ಜೊತೆಗೆ ರೆಸ್ಟೋರೆಂಟ್‌ನಲ್ಲಿ ಪ್ಲೇಟ್ ಎಸೆಯುತ್ತ, ಸಿಕ್ಕಾಪಟ್ಟೆ ನಗುತ್ತ ಅರ್ಪಿತಾ ಎಂಜಾಯ್ ಮಾಡಿದ್ದರು. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ಪಿಂಗಾಣಿ ಪ್ಲೇಟ್ ಮಾಡಲು ಅನೇಕರ ಶ್ರಮ ಇರುತ್ತದೆ. ಹೀಗಿರುವಾಗ ಸುಮ್ಮನೆ ಪ್ಲೇಟ್ ಒಡೆಯೋದು ಎಷ್ಟರಮಟ್ಟಿಗೆ ಸರಿ? ಅನ್ನೋದು ಕೆಲವರ ಅಭಿಪ್ರಾಯ.

ಶಿಲ್ಪಾ ಶೆಟ್ಟಿ ಕೂಡ ಪ್ಲೇಟ್ ಒಡೆದಿದ್ದರು!
ವರ್ಷದ ಹಿಂದೆ ನಟಿ ಶಿಲ್ಪಾ ಶೆಟ್ಟಿ ಕೂಡ ಪ್ಲೇಟ್ ಎಸೆದು ಸುದ್ದಿಯಾಗಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಅವರು, 'ಪ್ಲೇಟ್ ಒಡೆದರೆ ಪ್ಲೇಟ್ ವಾಶ್ ಮಾಡೋದು ತಪ್ಪತ್ತೆ. ಪ್ಲೇಟ್ ಒಡೆದು ಡಾನ್ಸ್ ಮಾಡೋದರಿಂದ ನಮ್ಮಲ್ಲಿರುವ ಋಣಾತ್ಮಕ ಚಿಂತನೆಗಳನ್ನು ನಿವಾರಣೆ ಮಾಡಬಹುದು. ಇದೊಂದು ಒಳ್ಳೆಯ ಕಾನ್ಸೆಪ್ಟ್. ತುಂಬ ಎಂಜಾಯ್ ಮಾಡಿದೆ. ಮೆನಿ ಮೋರ್ ಹ್ಯಾಪಿ ಚಿಯರ್ಸ್' ಹೇಳಿದ್ದರು. ಪ್ಲೇಟ್ ಮಹತ್ವ ಇವರಿಗೇನು ಗೊತ್ತು! ಪರಿಸರ ನಾಶ ಮಾಡುತ್ತಿದ್ದಾರೆ , ವೇಸ್ಟ್ ಮಾಡುತ್ತಿದ್ದಾರೆ, ಹಾಳು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಶಿಲ್ಪಾ ಶೆಟ್ಟಿ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದರು.

Also Read-ಅಮೆರಿಕದ ಮ್ಯಾಗಜಿನ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

ಸಲ್ಮಾನ್ ಖಾನ್ ಅವರ ಒಡಹುಟ್ಟಿದ ತಂಗಿಯಾ ಅರ್ಪಿತಾ ಖಾನ್?
ಕೆಲ ತಿಂಗಳುಗಳ ಹಿಂದೆ ಅರ್ಪಿತಾ ಖಾನ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗಾಗಲೇ ಈ ದಂಪತಿಗೆ ಓರ್ವ ಮಗನಿದ್ದಾನೆ. ಅರ್ಪಿತಾ ಗಂಡ ಆಯುಷ್ ಶರ್ಮಾ ಕೂಡ ನಟ. 'ಲವ್‌ಯಾತ್ರಿ' ಸಿನಿಮಾದಲ್ಲಿ ಅವರು ನಟಿಸಿದ್ದರು. ಇನ್ನು ಅರ್ಪಿತಾ ಖಾನ್ ಅವರು ಸಲ್ಮಾನ್ ಖಾನ್ ಅವರ ಒಡಹುಟ್ಟಿದ ಸಹೋದರಿ ಅಲ್ಲ, ಸಲ್ಲು ಮನೆಯಲ್ಲಿ ಬೆಳೆದ ಈ ಹುಡುಗಿಯನ್ನು ಖಾನ್ ಕುಟುಂಬ ಮನೆ ಮಗಳಂತೆ ನೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ, ಅದರ ಜೊತೆಗೆ ಅರ್ಪಿತಾರನ್ನು ದತ್ತು ಪಡೆಯಲಾಗಿದೆ ಎಂದು ಕೂಡ ಹೇಳಲಾಗುತ್ತದೆ.

Also Read-ಅಕ್ಟೋಬರ್‌ನಲ್ಲಿ ಸಪ್ತಪದಿ ತುಳಿಯಲಿರುವ ಪ್ರಿಯಾಂಕಾ ಚೋಪ್ರಾ

View this post on Instagram A post shared by Sharmila Maiti Official (@sharmilashowhouse)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌