ಆ್ಯಪ್ನಗರ

ವಲಸಿಗರನ್ನು ತಾಯ್ನಾಡಿಗೆ ಕಳುಹಿಸಲು 'ವಿಮಾನದ ವ್ಯವಸ್ಥೆ' ಮಾಡಿದ ನಟ ಸೋನು ಸೂದ್‌!

ವಿದೇಶದಲ್ಲಿ ನೆಲೆಸಿದ್ದವರು ವಿಮಾನಗಳ ಮೂಲಕ ಭಾರತಕ್ಕೆ ಮರಳುತ್ತಿದ್ದಾರೆ. ಆದರೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕಾರ್ಮಿಕರು ಚಾರ್ಟಡ್ ಫ್ಲೈಟ್‌ನಲ್ಲಿ ಹೋಗಿದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು! ಅದಕ್ಕೆ ಕಾರಣ, ನಟ ಸೋನು ಸೂದ್‌!

Vijaya Karnataka Web 29 May 2020, 7:30 pm
ನಟ ಸೋನು ಸೂದ್‌ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ವಲಸಿಗರನ್ನು ಸುರಕ್ಷಿತವಾಗಿ ಅವರವರ ರಾಜ್ಯಗಳಿಗೆ ಮರಳಲು ಸಹಾಯ ಮಾಡುತ್ತಿದ್ದಾರೆ. ಸ್ವಂತ ಹಣ ವ್ಯಯಿಸಿ, ಅವರಿಗೆ ಬಸ್ಸಿನ ವ್ಯವಸ್ಥೆ ಮಾಡಿದ್ದರು ಸೋನು. ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿದ್ದ ಕರ್ನಾಟಕದ ವಲಸಿಗರನ್ನು ವಾಪಸ್ ಕಳುಹಿಸಿಕೊಟ್ಟಿದ್ದರು. ಈಗ ಅವರು ಓಡಿಶಾದ ವಲಸಿಗರಿಗೆ ನೆರವಾಗಿದ್ದಾರೆ. ಅಷ್ಟಕ್ಕೂ ಅವರೆಲ್ಲಿ ಸಿಲುಕಿಕೊಂಡಿದ್ದರು? ಅವರನ್ನು ಸೋನು ಹೇಗೆ ಕಳುಹಿಸಿಕೊಟ್ಟರು? ಇಲ್ಲಿದೆ ಮಾಹಿತಿ.
Vijaya Karnataka Web ವಲಸಿಗರನ್ನು ತಾಯ್ನಾಡಿಗೆ ಕಳುಹಿಸಲು ವಿಮಾನದ ವ್ಯವಸ್ಥೆ ಮಾಡಿದ ನಟ ಸೋನು ಸೂದ್‌!


ಓಡಿಶಾದ 147 ಮಹಿಳೆಯರು ಸೇರಿದಂತೆ ಒಟ್ಟು 167 ಕಾರ್ಮಿಕರು ಕೇರಳದ ಕೊಚ್ಚಿಯಲ್ಲಿ ಸಿಲುಕಿಕೊಂಡಿದ್ದರು. ಲಾಕ್‌ಡೌನ್ ಜಾರಿಯಾದ ಮೇಲೆ ಅವರಿಗೆ ಯಾವುದೇ ಕೆಲಸವಿರಲಿಲ್ಲ. ಇದರಿಂದ ಅವರು ತೊಂದರೆಗೆ ಒಳಗಾಗಿದ್ದರು. ಕೈಯಲ್ಲಿ ಹಣವಿಲ್ಲದೆ ಇರುವುದರಿಂದ ಶ್ರಮಿಕ್‌ ರೈಲಿನಲ್ಲೂ ಅವರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಅವರೆಲ್ಲ ಸಂಕಷ್ಟದಲ್ಲಿದ್ದರು. ಇದೀಗ ಅವರ ಪಾಲಿಗೆ ನಿಜವಾದ ಹೀರೋ ಆಗಿದ್ದಾರೆ ನಟ ಸೋನು ಸೂದ್‌.

ಕೊಚ್ಚಿಯಿಂದ ಓಡಿಶಾಗೆ ಭುವನೇಶ್ವರ್‌ಗೆ ವಿಮಾನವನ್ನು ಬುಕ್ ಮಾಡಿ, ಅವರೆಲ್ಲರಿಗೂ ತಮ್ಮ ತಾಯ್ನಾಡಿಗೆ ಹೋಗುವುದಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದರ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಿದ್ದಾರೆ. ಸೋನು ಕಡೆಯಿಂದ 2.30 ಗಂಟೆಗಳಲ್ಲಿ ಕಷ್ಟದಲ್ಲಿದ್ದ ಅಷ್ಟೂ ಕಾರ್ಮಿಕರು ತಂತಮ್ಮ ಊರುಗಳನ್ನು ತಲುಪಿದ್ದಾರೆ. ಸೋನು ಮಾಡಿದ ಕೆಲಸಕ್ಕೆ ಆ ಕಾರ್ಮಿಕರು ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಸೋನು ಸೂದ್‌ ಬದುಕಿನ ಕಣ್ಣೀರ ಕಥೆ! ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದು ಇದೇ ಕಾರಣಕ್ಕೆ!

ವಲಸೆ ಕಾರ್ಮಿಕರು ತವರಿಗೆ ಮರಳುವುದಕ್ಕೆ ಸಕಲ ರೀತಿಯಲ್ಲಿ ಸೋನು ಪ್ರಯತ್ನ ಪಡುತ್ತಿದ್ದಾರೆ. ಅವರ ಈ ಕೆಲಸಕ್ಕೆ ಅವರ ಇಡೀ ಕುಟುಂಬವೇ ಸಾಥ್‌ ನೀಡಿದೆ. 'ಇತ್ತೀಚೆಗೆ ನಾವು ಸಹಾಯವಾಣಿ ಶುರು ಮಾಡಿದ್ದೇವೆ. ಅದಕ್ಕೆ ಅನೇಕ ವಲಸೆ ಕಾರ್ಮಿಕರಿಂದ ಕರೆಗಳು ಬರುತ್ತಿವೆ. ಅವರ ವಿವರಗಳನ್ನು ನನ್ನ ಪತ್ನಿ ಬರೆದುಕೊಳ್ಳುತ್ತಾಳೆ. ಯಾವ ಕಾರ್ಮಿಕರು ಯಾವ ಬಸ್‌ನಲ್ಲಿ ತೆರಳಬೇಕು ಎಂಬುದನ್ನು ನನ್ನ ಮಕ್ಕಳು ಪಟ್ಟಿ ಮಾಡುತ್ತಾರೆ' ಎಂದು ಸೋನು ಸೂದ್‌ ತಿಳಿಸಿದ್ದರು. ಜೊತೆಗೆ, 'ಒಬ್ಬ ಕೊನೆಯ ವಲಸೆ ಕಾರ್ಮಿಕ ಕೂಡ ಆತನ ಮನೆ ಸೇರುವವರೆಗೂ ನನ್ನ ಕೆಲಸ ಮುಂದುವರಿಯುತ್ತದೆ' ಎಂಬುದು ಸೋನು ಅವರ ಗುರಿ ಆಗಿದೆ.

ಸಿನಿಮಾ ಶೂಟಿಂಗ್‌ಗೆ ಸಿಗಲಿದೆಯೇ ಅನುಮತಿ? ಮುಖ್ಯಮಂತ್ರಿ ಭೇಟಿ ಮಾಡಿದ ನಿರ್ಮಾಪಕರ ಸಂಘ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌