ಆ್ಯಪ್ನಗರ

ಹೃದಯ ಒಡೆದ 'ಪ್ರೇಮಪಕ್ಷಿ'ಗೆ ಗೇಟ್ ಪಾಸ್ ಕೊಟ್ಟ ಸುಶಾಂತ್ ಸಿಂಗ್

ಇತ್ತೀಚಿಗೆ, 'ಕಾಫಿ ವಿತ್‌ ಕರಣ್‌' ಶೋನಲ್ಲಿ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ಸಾರಾಗೆ 'ನೀವು ಡೇಟಿಂಗ್‌ ಮಾಡಲು ಬಯಸುವ ಹೀರೊ ಯಾರು' ಎಂದು ಪ್ರಶ್ನೆ ಮಾಡಿದ್ದರು. ತಕ್ಷಣವೇ ಸಾರಾ ಲಿ ಕಾನ್ 'ಕಾರ್ತಿಕ್‌ ಆರ್ಯನ್‌' ಎಂದು ಉತ್ತರಿಸಿ ಹಲವರ ಹುಬ್ಬೇರುವಂತೆ ಮಾಡಿದ್ದರು.

Vijaya Karnataka Web 25 Mar 2019, 9:38 pm
ಒಂದು ಕಾಲದಲ್ಲಿ ಸಾರಾ ಅಲಿ ಖಾನ್ ಎಂದರೆ ಸಾಕು, ಅವಳ ಜೊತೆ ಸುಶಾಂತ್ ಸಿಂಗ್ ರಜಪೂತ್ ಹೆಸರು ಎಲ್ಲರಿಗೂ ನೆನಪಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಅವರಿಬ್ಬರ ನಡುವೆ ಬಿರುಕು ಮೂಡಿದೆ. ಸಾರಾ ಅಲಿ ಖಾನ್ ಹೃದಯಕ್ಕೆ 'ಕಾರ್ತಿಕ್ ಆರ್ಯನ್' ಬಂದು ಕುಳಿತಿದ್ದಾನೆ. ಈಗ ಸದ್ಯಕ್ಕೆ ಸಾರಾ-ಕಾರ್ತಿಕ್ ಆರ್ಯನ್ ರೊಮ್ಯಾನ್ಸ್ ಸಾಗುತ್ತಿದೆ. ಸುಶಾಂತ್ ಸಿಂಗ್ ವಿರಹವೇದನೆ ಅನುಭವಿಸುತ್ತಿದ್ದಾನೆ.
Vijaya Karnataka Web sara-sushanth2503


ಕೆಲವು ಸಮಯಗಳ ಹಿಂದೆ, ಸಾರಾ ಹಾಗೂ ಸುಶಾಂತ್ ಪರಸ್ಪರ ಸೊಂಟ ಹಿಡಿದುಕೊಂಡು ಸರಸವಾಡುತ್ತಾ ಬಾಲಿವುಡ್‌ನ ಎಷ್ಟೋ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಮೇಣದ ಬತ್ತಿಯ ಮಂದ ಬೆಳಕಿನಲ್ಲಿ ಆಕಾಶದ ಚುಕ್ಕಿಗಳನ್ನು ಎಣಿಸಿದ್ದಾರೆ. ಕನ್ನಡಿಯ ಮುಂದೆ ನಿಂತು ಕಣ್ಣು ಮಿಟುಕಿಸಿ ಏನೇನೋ ಮಾಡಿದ್ದಾರೆ. ಆದರೆ ಈಗ ಎಲ್ಲದಕ್ಕೂ ಫುಲ್ ಸ್ಟಾಪ್ ಬಿದ್ದಿದೆ. ಕಾರಣ ಯಾರೋ ಏನೋ ಗೊತ್ತಿಲ್ಲ. ಆದರೆ ಸಾರಾಗೆ ಆರ್ಯನ್ ಜೊತೆಯಾಗಿದ್ದಾನೆ. ಸುಶಾಂತ್ ಸದ್ಯಕ್ಕೆ ಏಕಾಂಗಿ!

ಮೊನ್ನೆ ಮೊನ್ನೆ ಬಾಲಿವುಡ್‌ ಗಲ್ಲಿಗಲ್ಲಿಯೂ ಹೋಳಿಯ ಬಣ್ಣಗಳಲ್ಲಿ ಮಿಂದೇಳುತ್ತಿರುವಾಗ ಈ ಪ್ರೇಮಿಗಳ ಬಂಧದ ಬಣ್ಣ ಕಳಚಿ ಬಿದ್ದಿದೆ. ತಮ್ಮಿಬ್ಬರ ಜೋಡಿಯ 'ಕೇದಾರನಾಥ' ಸಿನಿಮಾದಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದ್ದ ಜೋಡಿ ಸುಶಾಂತ್‌ ಸಿಂಗ್ ರಜಪೂತ್‌ ಮತ್ತು ಸಾರಾ ಅಲಿ ಖಾನ್‌ ಮಧ್ಯೆ ಈಗ ಸ್ನೇಹವೂ ಉಳಿದಿಲ್ಲ, ಪ್ರೇಮವಂತೂ ಇಲ್ಲವೇ ಇಲ್ಲ. ಹೋಳಿ ಹಬ್ಬದ ದಿನ ಸುಶಾಂತ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಸಾರಾ ಅವರಿಗೆ ಸುಶಾಂತ್ ಗೇಟ್ ಪಾಸ್ ಕೊಟ್ಟಾಗಿದೆ.

ಇತ್ತೀಚಿಗೆ, 'ಕಾಫಿ ವಿತ್‌ ಕರಣ್‌' ಶೋನಲ್ಲಿ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ಸಾರಾಗೆ 'ನೀವು ಡೇಟಿಂಗ್‌ ಮಾಡಲು ಬಯಸುವ ಹೀರೊ ಯಾರು' ಎಂದು ಪ್ರಶ್ನೆ ಮಾಡಿದ್ದರು. ತಕ್ಷಣವೇ ಸಾರಾ ಲಿ ಕಾನ್ 'ಕಾರ್ತಿಕ್‌ ಆರ್ಯನ್‌' ಎಂದು ಉತ್ತರಿಸಿ ಹಲವರ ಹುಬ್ಬೇರುವಂತೆ ಮಾಡಿದ್ದರು. ಆ ಬಳಿಕ ಕೂಡ ಸಾರಾ ಕಾರ್ತಿಕ್‌ ಮೇಲಿನ ತಮ್ಮ ಮನದ ಮೋಹವನ್ನು ಕಂಡಕಂಡಲ್ಲಿ ಹೇಳಿಕೊಂಡು ತಿರುಗಾಡಿದ್ದರು. ಆದರೆ ಕಾರ್ತಿಕ್‌ ಆರ್ಯನ್ ಮಾತ್ರ ಬಾಯಿ ಮುಚ್ಚಿಕೊಂಡೇ ಇದ್ದರು.

ಆದರೆ ಇತ್ತೀಚಿಗೆ ನಟಿ ಸಾರಾ ಹಾಗು ನಟ ಕಾರ್ತಿಕ್‌ ಆರ್ಯನ್ ಜೊತೆಯಾಗಿಯೇ ಸುತ್ತುತ್ತಿದ್ದಾರೆ. ಇಮ್ತಿಯಾಜ್‌ ಅಲಿ ನಿರ್ದೇಶನದ ಮುಂಬರುವ ಹೊಸ ಚಿತ್ರದಲ್ಲಿ ಈ ಜೋಡಿ ಒಂದಾಗಿದೆ. ಅಲ್ಲದೆ, ಇಬ್ಬರು ಆಪ್ತ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂದು ಬಾಲಿವುಡ್‌ ಅಂಗಳ ಮಾಹಿತಿ ನೀಡುತ್ತಿದೆ. ಅಷ್ಟೇ ಅಲ್ಲ, ಸಾರಾ ಈಗ ಸುಶಾಂತ್ ಸಿಂಗ್ ಅವರಿಗೇ ಫೋನ್ ಕಾಲ್‌ಗೆ ಕೂಡ ನೆಟ್ಟಗೆ ಸಿಗುತ್ತಿಲ್ಲ ಎನ್ನಲಾಗಿದೆ. ತನ್ನ ಪ್ರಿಯತಮನ ಜೊತೆಗೇ ತೆರೆ ಹಂಚಿಕೊಳ್ಳುವ ಛಾನ್ಸ್ ಸಿಕ್ಕಿ ಸಾರಾ ಸಖತ್ ಖುಷಿಯಾಗಿದ್ದಾಳೆ. ಇತ್ತ ಸುಶಾಂತ್ ಸಾರಾಳನ್ನು ಮರೆತು ಹಾಯಾಗಿರೋಣ ಎಂದು ನಿರ್ಧರಿಸಿದಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌