ಆ್ಯಪ್ನಗರ

ಡ್ರೀಮ್‌ಗರ್ಲ್‌ ಹೇಮಾಮಾಲಿನಿ ಕಾಸ್ಟ್ಯೂಮ್ಸ್‌ ಕಳುವು

ಖ್ಯಾತ ನಟಿ ಹೇಮಾಮಾಲಿನಿ ಮನೆಯಲ್ಲಿ ಕಳ್ಳತನವಾಗಿದೆ. ಈ ಕಳ್ಳತನದ ಹಿಂದೆ ಅವರ ಮನೆಯ ಕೆಲಸದಾಳು ಕೈವಾಡವಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Vijaya Karnataka Web 5 Oct 2017, 6:20 pm
ಮುಂಬಯಿ: ಖ್ಯಾತ ನಟಿ ಹೇಮಾಮಾಲಿನಿ ಮನೆಯಲ್ಲಿ ಕಳ್ಳತನವಾಗಿದೆ. ಈ ಕಳ್ಳತನದ ಹಿಂದೆ ಅವರ ಮನೆಯ ಕೆಲಸದಾಳು ಕೈವಾಡವಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
Vijaya Karnataka Web actress hema malinis godown robbed
ಡ್ರೀಮ್‌ಗರ್ಲ್‌ ಹೇಮಾಮಾಲಿನಿ ಕಾಸ್ಟ್ಯೂಮ್ಸ್‌ ಕಳುವು


ಮುಂಬಯಿಯ ಅಂಧೇರಿಯ ಪೂರ್ವದಲ್ಲಿರುವ ತಮ್ಮ ಗೋಡೌನ್‌ಗೆ ಭೇಟಿ ನೀಡಿದಾಗ ಕೆಲವೊಂದು ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಅವರ ಕೆಲಸದ ಆಳು ಕಳೆದ 5-6 ದಿನದಿಂದ ಪತ್ತೇ ಇಲ್ಲ.

ಹೇಮಾ ಮಾಲಿನಿ ಬಳಸುತ್ತಿದ್ದ ಕೆಲವೊಂದು ಕಾಸ್ಟ್ಯೂಮ್ಸ್‌, ಹಾಗೂ ಕೃತಕ ಆಭರಣಗಳು ಕಳುವಾಗಿವೆ(ಚಿನ್ನವೆಂದು ಈ ಆಭರಣಗಳನ್ನು ಕಳುವು ಮಾಡಿದ್ದಾನೆ). ಸುಮಾರು 90 ಸಾವಿರ ಮೌಲ್ಯದ ವಸ್ತುಗಳು ಕಳುವಾಗಿದೆ.

ಈ ಹಿಂದೆಯೂ ಹೇಮಾ ಮಾಲಿನಿಯ ಗುರುಗಾಂವ್‌ನಲ್ಲಿರುವ ಮನೆಯಿಂದ ರೂ. 80 ಲಕ್ಷದ ಮೌಲ್ಯದ ಆಭರಣವನ್ನು ಮನೆಕೆಲಸದವರೇ ಕಳ್ಳತನ ಮಾಡಿದ ಘಟನೆ 2010ರಲ್ಲಿ ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌