ಆ್ಯಪ್ನಗರ

ಡ್ಯಾನ್ಸ್‌ ಉತ್ಸವ ಮಾಡುತ್ತಿದ್ದಾರೆ ಮಾಧುರಿ ದೀಕ್ಷಿತ್‌! ಲಾಕ್‌ಡೌನ್‌ ನಡುವೆ ನೀವೂ ಭಾಗವಹಿಸಬಹುದು!

ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಹಾಗಾಗಿ ಎಲ್ಲ ಸಮಾರಂಭಗಳಿಗೆ ಬ್ರೇಕ್‌ ಹಾಕಲಾಗಿದೆ. ಈ ನಡುವೆಯೂ ಡ್ಯಾನ್ಸ್‌ ಫೆಸ್ಟಿವಲ್‌ ಮಾಡಲು ಮಾಧುರಿ ದೀಕ್ಷಿತ್‌ ಮುಂದಾಗಿದ್ದಾರೆ. ಲಕ್ಷಾಂತರ ಮಂದಿಗೆ ಆಹ್ವಾನವನ್ನೂ ನೀಡಿದ್ದಾರೆ!

Vijaya Karnataka Web 28 Apr 2020, 9:56 pm
ಸಿನಿಮಾಗಳಲ್ಲಿ ಮಾಧುರಿ ದೀಕ್ಷಿತ್‌ ಅವರ ಡ್ಯಾನ್ಸ್‌ಗೆ ಮರುಳಾಗದವರೇ ಇಲ್ಲ ಎನ್ನಬಹುದು. ಈ ವಿಚಾರದಲ್ಲಿ ಎಷ್ಟೋ ನಟಿಯರಿಗೆ ಮಾಧುರಿಯೇ ಮಾದರಿ. ಈಗ ಅವರೊಂದು ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಅವರ ನೇತೃತ್ವದಲ್ಲಿ ಡ್ಯಾನ್ಸ್‌ ಉತ್ಸವ ನಡೆಯಲಿದೆ. ಅದಕ್ಕೆ ಲಾಕ್‌ಡೌನ್‌ ನಿಯಮಗಳು ಅಡ್ಡಿಯಾಗುತ್ತಿಲ್ಲ ಎಂಬುದು ವಿಶೇಷ.
Vijaya Karnataka Web ಮಾಧುರಿ ದೀಕ್ಷಿತ್‌


ಎರಡು ದಿನಗಳ ಉತ್ಸವ
ಹೌದು, ಮಾಧುರಿಗೆ ಡ್ಯಾನ್ಸ್‌ ಎಂದರೆ ಪಂಚಪ್ರಾಣ. ತಮ್ಮದೇ ಆದ ಡಾನ್ಸ್‌ ಅಕಾಡೆಮಿಯನ್ನೂ ಅವರು ನಡೆಸುತ್ತಿದ್ದಾರೆ. ಏ.29 ವಿಶ್ವ ನೃತ್ಯ ದಿನ. ಹೀಗಿರುವಾಗ ಮಾಧುರಿ ಸುಮ್ಮನೆ ಕೂರಲು ಸಾಧ್ಯವೇ? ಅದಕ್ಕಾಗಿ ಅವರೊಂದು ಉಪಾಯ ಮಾಡಿದ್ದಾರೆ. ಆನ್‌ಲೈನ್‌ ಮೂಲಕವೇ ಡಾನ್ಸ್‌ ಫೆಸ್ಟಿವಲ್‌ ಆಯೋಜಿಸಿದ್ದಾರೆ. ಏ.29 ಮತ್ತು 30ರಂದು ಈ ಉತ್ಸವ ನಡೆಯಲಿದೆ.

ಉತ್ಸವದಲ್ಲಿ ಏನೆಲ್ಲ ಇರಲಿದೆ?
ಮಾಧುರಿಯವರ 'ಡ್ಯಾನ್ಸ್‌ ವಿಥ್‌ ಮಾಧುರಿ' ಸೋಶಿಯಲ್‌ ಮೀಡಿಯಾ ಖಾತೆಗಳ ಮೂಲಕ ಈ ಉತ್ಸವ ನಡೆಯಲಿದೆ. ಖ್ಯಾತ ಕೊರಿಯೋಗ್ರಾಫರ್‌ಗಳಾದ ಸರೋಜ್‌ ಖಾನ್‌, ಫರ್ಹಾ ಖಾನ್‌ ಮುಂತಾದವರು ಆನ್‌ಲೈನ್‌ ಮೂಲಕ ಮಾಸ್ಟರ್‌ ಕ್ಲಾಸ್‌ ಮಾಡಲಿದ್ದಾರೆ. ಅಲ್ಲದೆ, ಮಾಧುರಿ ಕೂಡ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇನ್ನೂ ಹಲವು ಸರ್ಪ್ರೈಸ್‌ಗಳು ಈ ಉತ್ಸವದಲ್ಲಿ ಇರಲಿವೆ.

'ಏಕ್ ದೋ ತೀನ್' ಹಾಡು ಕುರಿತ ಆಸಕ್ತಿಕರ ಸಂಗತಿಗಳನ್ನು ಹೇಳಿದ ಮಾಧುರಿ ದೀಕ್ಷಿತ್

ಲಾಕ್‌ಡೌನ್‌ನಲ್ಲಿ ಸಿಗಲಿದೆ ಮಸ್ತ್‌ ಮನರಂಜನೆ
ಹಲವು ದಿನಗಳಿಂದ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಜನರು ಮಂಕಾಗಿದ್ದಾರೆ. ಅವರಿಗೆ ಚೈತನ್ಯ ನೀಡುವುದು ಈ ಉತ್ಸವದ ಉದ್ದೇಶ ಎಂದು ಮಾಧುರಿ ದೀಕ್ಷಿತ್‌ ಹೇಳಿದ್ದಾರೆ. ಎರಡು ದಿನಗಳ ಕಾಲ ನೃತ್ಯಾಸಕ್ತರಿಗೆ ಆನ್‌ಲೈನ್‌ ಮೂಲಕವೇ ಮಸ್ತ್‌ ಮನರಂಜನೆ ನೀಡಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ ಇದ್ದರೂ ವಿಶ್ವಾದ್ಯಂತ ಇರುವ ನೃತ್ಯ ಸಮೂಹ ಒಗ್ಗಟ್ಟಾಗಿದೆ ಎಂಬ ಸಂದೇಶವನ್ನು ಈ ಉತ್ಸವದ ಮೂಲಕ ಮಾಧುರಿ ಸಾರಲಿದ್ದಾರೆ.

ಮಾಧುರಿ ದೀಕ್ಷಿತ್‌ ಮುಖದ ನೈಸರ್ಗಿಕ ಹೊಳಪಿಗೆ ಕಾರಣ ಏನು ಗೊತ್ತೇ?

--------------------------------------
ಈ ಪ್ರಶ್ನೆಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ಉತ್ತರಿಸಿ
1. ಮಾಧುರಿ ದೀಕ್ಷಿತ್‌ ನೃತ್ಯ ಮಾಡಿರುವ ಯಾವ ಹಾಡು ನಿಮಗೆ ಹೆಚ್ಚು ಇಷ್ಟ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌