ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಗಿಂದು ಹುಟ್ಟುಹಬ್ಬದ ಸಂಭ್ರಮ. ಸಹೋದರಿ ಹುಟ್ಟುಹಬ್ಬ ಆಚರಣೆಗೆಂದು ಥೈಲ್ಯಾಂಡ್ನ ಫುಕೆಟ್ಗೆ ಶಿಲ್ಪಾಶೆಟ್ಟಿ, ಪತಿ ರಾಜ್ ಕುಂದ್ರಾ, ಶಮಿತಾ ಶೆಟ್ಟಿ, ಕ್ಲೋಸ್ ಫ್ರೆಂಡ್ಸ್ ಹಾಗೂ ಹುಡುಗಿಯರ ಗ್ಯಾಂಗ್ ಈಗಾಗಲೇ ತೆರಳಿದ್ದಾರೆ. ಇನ್ನು ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ತಂಗಿಯ ವಿಶೇಷ ದಿನಕ್ಕೆ ಮೆರಗು ನೀಡಲು ಹೃದಯಪೂರ್ವಕ ಹಾಗೂ ಪ್ರೀತಿಯ ಪೋಸ್ಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಗಾಳಿಯಲ್ಲಿ ತೇಲುವ ಲಾಟೀನನ್ನು ಹಾರಿ ಬಿಡುತ್ತಿರುವ ಶಮಿತಾ ಶೆಟ್ಟಿ ವೀಡಿಯೋವೊಂದನ್ನು ಹಾಕಿಕೊಂಡಿದ್ದಾರೆ. ಅಲ್ಲದೆ, ಆಕೆಯ ಕನಸುಗಳೆಲ್ಲ ನನಸಾಗಲಿ ಎಂದು ಶಿಲ್ಪಾ ಶೆಟ್ಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದು, ಅದನ್ನು ತಮ್ಮ ಟ್ವಿಟರ್ ಖಾತೆಗೂ ಶೇರ್ ಮಾಡಿದ್ದಾರೆ.
ಅಲ್ಲದೆ, 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶಮಿತಾ ಶೆಟ್ಟಿಗೆ, ''ನಿನಗೀಗ ಕೊನೆಗೂ 18 ವರ್ಷವಾಗಿದೆ. ಈಗ ನೀನು ಹೋಗಿ ಮತದಾನ ಮಾಡಬಹುದು. ಈ ಮಧ್ಯೆ, ನೀನು ಇಡೀ ಜಗತ್ತಿನ ಅತ್ಯುತ್ತಮ ಸಹೋದರಿ ಎಂದು ನಾನು ಮತ ಹಾಕುತ್ತೇನೆ. ಶಮಿತಾ ಶೆಟ್ಟಿ ನಿನಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಕ್ರೇಜಿ, ಫನ್..'' ಮುಂತಾದ ಪದಗಳನ್ನು ಬರೆದುಕೊಂಡು ತನ್ನ ಸಹೋದರಿಯ ಅಕೌಂಟ್ಗೆ ಟ್ಯಾಗ್ ಮಾಡಿ ಪ್ರೀತಿಪೂರ್ವಕವಾಗಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ಗೆ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೊಂದೆಡೆ, ಜನವರಿ 31ರಂದೇ ಹುಟ್ಟುಹಬ್ಬದ ಸಂಭ್ರಮಾಚರಣೆಗೆಂದು ತನ್ನ ಗೆಳೆಯರು, ಗೆಳತಿಯರು, ಸಹೋದರಿಯೊಂದಿಗೆ ಥೈಲ್ಯಾಂಡ್ನ ಫುಕೆಟ್ಗೆ ಶಮಿತಾ ಶೆಟ್ಟಿ ತೆರಳಿದ್ದಾರೆ. ಈ ಸಂಬಂಧ ಇತ್ತೀಚೆಗೆ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಮೊದಲ ದಿನದ ಅಚರಣೆ ಎಂದು ಶಮಿತಾ ಶೆಟ್ಟಿ ಜನವರಿ 31ರಂದೇ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ಸದ್ಯ, ಸಹೋದರಿಯರಾದ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಶಮಿತಾ ಶೆಟ್ಟಿ ಸೃಜನಾತ್ಮಕ ವೃತ್ತಿಗಳನ್ನು ಮಾಡುತ್ತಿದ್ದರೆ, ಶಿಲ್ಪಾ ಶೆಟ್ಟಿ ಟಿವಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.