ಆ್ಯಪ್ನಗರ

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ ಸೋನಾಲಿ ಬೇಂದ್ರೆ

ಕ್ಯಾನ್ಸರ್‌ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಇದೊಂದು ಮಧ್ಯಂತರ ವಿರಾಮವಿದ್ದಂತೆ ಎಂದು ಪೋಸ್ಟ್ ಮಾಡಿದ್ದು, ಸ್ವದೇಶಕ್ಕೆ ಮರಳಲು ಉತ್ಸುಕಳಾಗಿದ್ದೇನೆ ಎಂದಿದ್ದರು.

Vijaya Karnataka Web 3 Dec 2018, 9:34 am
ಹೊಸದಿಲ್ಲಿ: ಕ್ಯಾನ್ಸರ್‌ಗೆ ತುತ್ತಾಗಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಸೋಮವಾರ ಮುಂಜಾನೆ ಸ್ವದೇಶಕ್ಕೆ ಮರಳಿದ್ದಾರೆ.
Vijaya Karnataka Web Sonali bendre


ಸೋನಾಲಿ ಜತೆ ಪತಿ ಗೋಲ್ಡಿ ಬೆಹ್ಲ್ ಕೂಡ ಆಗಮಿಸಿದ್ದು, ಮುಂಬೈ ವಿಮಾನ ನಿಲ್ದಾಣದಿಂದ ದಂಪತಿ ಜತೆಯಾಗಿ ಕೈಹಿಡಿದುಕೊಂಡು ಹೊರಬಂದರು.
View this post on Instagram #sonalibendre welcome back 🙏🙏👍 A post shared by Viral Bhayani (@viralbhayani) on Dec 2, 2018 at 5:54pm PST


ಈ ಸಂದರ್ಭದಲ್ಲಿ ಸೋನಾಲಿ ಮಾಧ್ಯಮದವರು ಮತ್ತು ಅಭಿಮಾನಿಗಳಿಗೆ ವಂದಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. ಕ್ಯಾನ್ಸರ್‌ ಚಿಕಿತ್ಸೆಯಿಂದಾಗಿ ಸೋನಾಲಿ ತಲೆಕೂದಲು ಉದುರಿದ್ದು, ಸಂಪೂರ್ಣ ಬೋಳಾಗಿದೆ.
View this post on Instagram Our poster girl of courage #sonalibendre A post shared by Viral Bhayani (@viralbhayani) on Dec 2, 2018 at 2:06pm PST


ಭಾನುವಾರ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಸೋನಾಲಿ, ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆಯ ಸಂದರ್ಭದಲ್ಲಿ ಬಹಳಷ್ಟನ್ನು ಕಲಿತುಕೊಂಡೆ. ಕ್ಯಾನ್ಸರ್‌ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಇದೊಂದು ಮಧ್ಯಂತರ ವಿರಾಮವಿದ್ದಂತೆ ಎಂದು ಪೋಸ್ಟ್ ಮಾಡಿದ್ದು, ಸ್ವದೇಶಕ್ಕೆ ಮರಳಲು ಉತ್ಸುಕಳಾಗಿದ್ದೇನೆ ಎಂದಿದ್ದರು.

View this post on Instagram Welcome back home 🙏 #sonalibendre A post shared by Viral Bhayani (@viralbhayani) on Dec 2, 2018 at 3:10pm PST

ಕ್ಯಾನ್ಸರ್‌ ರೋಗವಿರುವುದನ್ನು ಪತ್ತೆಹಚ್ಚಿದ ಬಳಿಕ ಅವರು ಕಳೆದ ಜುಲೈನಿಂದ ವಿವಿಧ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌