ಆ್ಯಪ್ನಗರ

ನಟಿ ಝೈರಾಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ

ಬಾಲಿವುಡ್‌ ಯುವ ನಟಿ ಝೈರಾ ವಸಿಮ್‌ ವಿಮಾನದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ.

Vijaya Karnataka Web 10 Dec 2017, 9:41 am
ಹೊಸದಿಲ್ಲಿ: ಬಾಲಿವುಡ್‌ ಯುವ ನಟಿ ಝೈರಾ ವಸಿಮ್‌ ವಿಮಾನದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ವೀಡಿಯೋ ಅಪ್ಲೋಡ್‌ ಮಾಡುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ ಝೈರಾ.
Vijaya Karnataka Web actress zaira wasim allegedly molested on delhi mumbai flight
ನಟಿ ಝೈರಾಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ


ದಿಲ್ಲಿಯಿಂದ ಮುಂಬಯಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಹಿಂದೆ ಕುಳಿತಿದ್ದ ಯುವಕನೊಬ್ಬ ಝೈರಾ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಮತ್ತೊಂದು ವಿಷಾದಕರ ಸಂಗತಿಯೆಂದರೆ ವಿಮಾನದ ಸಿಬ್ಬಂದಿ ಸಹ ಝೈರಾ ಸಹಾಯಕ್ಕೆ ಬರಲಿಲ್ಲವಂತೆ.

'ಹೀಗೆ ಮಾಡುವುದು ಸರಿಯಲ್ಲ. ಒಂದು ಹೆಣ್ಣಿನ ಜತೆ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ?' ಎಂದು ವೀಡಿಯೋದಲ್ಲಿ ಅಳುತ್ತ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ. ವೀಡಿಯೋ ಬಳಿಕ ಎಚ್ಚೆತ್ತಿರುವ ಏರ್‌ ವಿಸ್ತಾರಾ ವಿಮಾನಯಾನ ಸಂಸ್ಥೆ, ಘಟನೆಯ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌