ಆ್ಯಪ್ನಗರ

ವೈರಲ್‌ ಆಯ್ತು ಅದಾ ಶರ್ಮರ ಟಾಪ್‌ಲೆಸ್‌ ಫೋಟೊ

ಕಮಾಂಡೊ 2, 1920, ಹಸೀ ತೋ ಫಸೀ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಗ್ಲಾಮರಸ್‌ ನಟಿ ಅದಾ ಶರ್ಮರ ಟಾಪ್‌ಲೆಸ್‌ ...

Vijaya Karnataka 13 Feb 2019, 5:00 am
ಕಮಾಂಡೊ 2, 1920, ಹಸೀ ತೋ ಫಸೀ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಗ್ಲಾಮರಸ್‌ ನಟಿ ಅದಾ ಶರ್ಮರ ಟಾಪ್‌ಲೆಸ್‌ ಫೋಟೊವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಮೂಲತಃ ಇದು ಹಳೆ ಫೋಟೊ ಆಗಿದ್ದರೂ, ಅದಾ ಶರ್ಮ ಅದನ್ನು ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿ ಮಂಡೇ ಮೋಟಿವೇಷನ್‌ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.
Vijaya Karnataka Web adah sharma-1


ಈ ಫೋಟೊದಲ್ಲಿ ಅವರು ತಮ್ಮ ನೀಳ ಕೂದಲುಗಳಿಂದ ತೆರೆದ ಎದೆಯನ್ನು ಮರೆ ಮಾಚಿಕೊಂಡಿದ್ದಾರೆ. ಅವರು ಕೈಯಲ್ಲಿ ಹಿಡಿದುಕೊಂಡಿರುವ ಕೊಡಲಿ ಅವರ ಎಡ ಭುಜಕ್ಕೆ ವಾಲಿಕೊಂಡು ಅವರಿಗೆ ಒಂದು ರೀತಿಯಲ್ಲಿ ಕಲಾತ್ಮಕ ಲುಕ್‌ ಕೊಟ್ಟಿದೆ. ತಲೆಗೆ ಲೇಸ್‌ ಹೆಡ್‌ಪೀಸ್‌ ಮತ್ತು ಎಡ ತೋಳಿಗೆ ಸುಂದರವಾದ ತೋಳ್ಬಂದಿ ಧರಿಸಿರುವ ಅವರ ಕಾನ್ಫಿಡೆಂಟ್‌ ಲುಕ್‌ ಆ ಫೋಟೊಗೆ ವಿಶೇಷ ಶೋಭೆ ನೀಡಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಈ ಫೋಟೊ ಮಂಡೇ ಬ್ಲೂಸ್‌ ಹೋಗಲಾಡಿಸುವಂತಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌