ಆ್ಯಪ್ನಗರ

ರಣವೀರ್‌ ಪ್ರೀತಿಸುತ್ತಿದ್ದ ಹುಡುಗಿಯನ್ನು ಆದಿತ್ಯ ರಾಯ್‌ ಕಪೂರ್‌ ಕದ್ದಿದ್ರಾ? ಅಸಲಿ ವಿಷಯ ತೆರೆದಿಟ್ಟ ನಟ!

ಬಾಲಿವುಡ್ ಸೆಲೆಬ್ರಿಟಿಗಳ ನಿಜ ಜೀವನದ ಲವ್‌ ಸ್ಟೋರಿಗಳು ಒಂದಕ್ಕಿಂತ ಮತ್ತೊಂದು ಇಂಟರೆಸ್ಟಿಂಗ್‌ ಆಗಿವೆ. ನಟ ರಣವೀರ್‌ ಸಿಂಗ್‌ ಕೂಡ ಅಂಥದ್ದೇ ಒಂದು ಘಟನೆಯನ್ನು ಹೇಳಿಕೊಂಡಿದ್ದರು. ಅದಕ್ಕೆ ಆದಿತ್ಯ ರಾಯ್‌ ಕಪೂರ್ ತಿರುಗೇಟು ನೀಡಿದ್ದಾರೆ.

Vijaya Karnataka Web 27 Oct 2020, 6:39 pm
ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ರಣವೀರ್ ಸಿಂಗ್‌‌ ಅವರು ಕಾಲೇಜಿನಲ್ಲಿದ್ದಾಗ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆ ಬಗ್ಗೆ 'ನೋ ಫಿಲ್ಟರ್‌ ನೇಹಾ' ಕಾರ್ಯಕ್ರಮದಲ್ಲಿ ಅವರು ಬಾಯಿ ಬಿಟ್ಟಿದ್ದರು. ಆದರೆ ಆ ಲವ್‌ ಸ್ಟೋರಿ ಹೆಚ್ಚು ದಿನ ಮುಂದುವರಿಯಲಿಲ್ಲ. 'ನಮ್ಮ ಬ್ರೇಕಪ್‌ಗೆ ನಟ ಆದಿತ್ಯ ರಾಯ್‌ ಕಪೂರ್‌ ಕಾರಣ' ಎಂದು ಆರೋಪಿಸಿದ್ದರು ರಣವೀರ್‌ ಸಿಂಗ್‌! ಅದಕ್ಕೆ ಈಗ ಆದಿತ್ಯ ಪ್ರತಿಕ್ರಿಯೆ ನೀಡಿದ್ದಾರೆ.
Vijaya Karnataka Web ರಣವೀರ್‌ ಸಿಂಗ್‌, ಆದಿತ್ಯ ರಾಯ್‌ ಕಪೂರ್


ರಣವೀರ್‌ ಸಿಂಗ್‌ ಮತ್ತು ಆದಿತ್ಯ ರಾಯ್‌ ಕಪೂರ್‌ ಒಂದೇ ಕಾಲೇಜಿನಲ್ಲಿ ಓದಿದ್ದರು. ರಣವೀರ್‌ ಪ್ರಕಾರ, ತಾವು ಪ್ರೀತಿಸುತ್ತಿದ್ದ ಹುಡುಗಿಯನ್ನು ಆದಿತ್ಯ ಕದ್ದುಕೊಂಡಿದ್ದರು. 'ಜೂನಿಯರ್‌ ಕಾಲೇಜಿನಲ್ಲಿ ಆದಿತ್ಯ ಎಲ್ಲ ಹುಡುಗಿಯರ ಕನಸಿನ ಕುವರ ಆಗಿದ್ದರು. ನನ್ನನ್ನು ಪ್ರೀತಿಸುತ್ತಿದ್ದ ಹುಡುಗಿ ಕೂಡ ನನ್ನ ಜೊತೆ ಬ್ರೇಕಪ್‌ ಮಾಡಿಕೊಂಡು ಆದಿತ್ಯ ಜೊತೆ ಡೇಟಿಂಗ್‌ ಶುರು ಮಾಡಿದಳು' ಎಂದು ರಣವೀರ್‌ ಸಿಂಗ್ ಹೇಳಿಕೊಂಡಿದ್ದರು. ಆ ಹೇಳಿಕೆ ನೀಡಿದ ಅಂದಾಜು ಮೂರು ವರ್ಷಗಳ ಬಳಿಕ ಆದಿತ್ಯ ಸ್ಪಷ್ಟನೆ ನೀಡಿದ್ದಾರೆ.

'ರಣವೀರ್‌ ಸಿಂಗ್‌ ಅವರು ತಮ್ಮ ಬ್ರೇಕಪ್‌ ವಿಷಯವನ್ನು ತುಂಬ ನಾಟಕೀಯವಾಗಿ ವಿವರಿಸಿರಬಹುದು. ಆದರೆ, ನಾನು ಅವರ ಹುಡುಗಿಯನ್ನು ಕದ್ದಿರಲಿಲ್ಲ. ರಣವೀರ್‌ ಜೊತೆ ಆಕೆ ಬ್ರೇಕಪ್‌ ಮಾಡಿಕೊಂಡು ಎಷ್ಟೋ ತಿಂಗಳಾದ ಬಳಿಕ ಆಕೆಯೊಂದಿಗೆ ನಾನು ಡೇಟಿಂಗ್‌ ಶುರುಮಾಡಿದೆ' ಎಂದು ಆದಿತ್ಯ ರಾಯ್‌ ಕಪೂರ್‌ ಪ್ರತಿಕ್ರಿಯಿಸಿದ್ದಾರೆ. 'ಆ ಹುಡುಗಿ ಈಗ ಮದುವೆ, ಮಕ್ಕಳು ಮಾಡಿಕೊಂಡು ಸಂಸಾರದಲ್ಲಿ ಬ್ಯುಸಿ ಆಗಿದ್ದಾಳೆ' ಎಂದು ರಣವೀರ್‌ ಸಿಂಗ್‌ ಹೇಳಿದ್ದರು.

also read: ರಣವೀರ್‌ ಸಿಂಗ್‌ ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದ ಬೈಕ್‌ ಸವಾರ! ಮುಂಬೈ ರಸ್ತೆಯಲ್ಲಿ ನಡೆದಿದ್ದೇನು?

ಆದಿತ್ಯ ರಾಯ್‌ ಕಪೂರ್‌ ಇನ್ನೂ ಮದುವೆ ಆಗಿಲ್ಲ. ಆದರೆ ರಣವೀರ್‌ ಸಿಂಗ್‌ ಅವರು ದೀಪಿಕಾ ಪಡುಕೋಣೆ ಜೊತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಾಲಿವುಡ್‌ನಲ್ಲಿ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 'ಗಲ್ಲಿ ಬಾಯ್‌', 'ಪದ್ಮಾವತ್‌' ಮುಂತಾದ ಸಿನಿಮಾಗಳ ಯಶಸ್ಸಿನ ಮೂಲಕ ಅವರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವರು ನಟಿಸಿರುವ ಬಹುನಿರೀಕ್ಷಿತ '83' ಸಿನಿಮಾದ ಬಿಡುಗಡೆ ಕೊರೊನಾ ವೈರಸ್‌ ಕಾರಣದಿಂದ ತಡವಾಗಿದೆ. ಅದರಲ್ಲಿ ಅವರು ಕಪಿಲ್‌ ದೇವ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

also read: ನಟನಾಗಿರದಿದ್ದರೆ ರಣ್‌ವೀರ್ ಸಿಂಗ್ ಲೈಂಗಿಕ ತಜ್ಞನಾಗಿರುತ್ತಿದ್ದರು ಎಂದ ಪ್ರಖ್ಯಾತ ನಟಿ ಯಾರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌