ಆ್ಯಪ್ನಗರ

ಮುರಿದು ಬಿತ್ತು ನಟಿ ದಿಯಾ ಮಿರ್ಜಾ ಐದು ವರ್ಷಗಳ ದಾಂಪತ್ಯ ಬದುಕು

ಲಗೆ ರಹೆ ಮುನ್ನಾಭಾಯ್ ಚಿತ್ರದ ಖ್ಯಾತಿಯ ತಾರೆ ದಿಯಾ ಮಿರ್ಜಾ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಐದು ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಿದ್ದು ದೂರ ಸರಿದಿದ್ದಾರೆ.

TIMESOFINDIA.COM 1 Aug 2019, 3:10 pm
ಬಾಲಿವುಡ್‌ನ ಅತ್ಯಂತ ಮೋಹಕ ತಾರೆಗಳಲ್ಲಿ ನಟಿ ದಿಯಾ ಮಿರ್ಜಾ ಸಹ ಒಬ್ಬರು. ತಮ್ಮ ನಟನಾ ಕೌಶಲ್ಯ, ಸದಾ ಉಲ್ಲಾಸ ಉಕ್ಕುವಂತೆ ಇರುವ ದಿಯಾ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ಐದು ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ನೀಡಿದ್ದಾರೆ.
Vijaya Karnataka Web dia-mirza


ಸಾಮಾಜಿಕ ಮಾಧ್ಯಮದಲ್ಲಿ ಬಲವಾದ ಅಭಿಪ್ರಾಯಗಳನ್ನು ಪ್ರತಿಪಾದಿಸುತ್ತಾ ಕ್ರಿಯಾಶೀಲವಾಗಿರುವ ದಿಯಾ ಮಿರ್ಜಾ ಮತ್ತವರ ಪತಿ ಸಾಹಿಲ್ ಸಂಘಾ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಈ ಮೂಲಕ ಐದು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ.

ಚಿತ್ರ ನಿರ್ಮಾಪಕರಾಗಿರುವ ಸಾಹಿಲ್ ಸಂಘಾರನ್ನು ಅಕ್ಟೋಬರ್ 18, 2014ರಲ್ಲಿ ವರಿಸಿದ್ದರು ದಿಯಾ ಮಿರ್ಜಾ. ಮದುವೆಗೂ ಮುನ್ನ ಈ ಜೋಡಿ ಒಟ್ಟು ಆರು ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರು.

ತನ್ನ ವಿಚ್ಚೇದನದ ಬಗ್ಗೆ ದಿಯಾ ಟ್ವಿಟರ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. "ಸುಮಾರು 11 ವರ್ಷಗಳ ಕಾಲ ನಮ್ಮ ಬದುಕನ್ನು ಹಂಚಿಕೊಂಡೆವು ಮತ್ತು ಒಟ್ಟಿಗೆ ಇದ್ದೆವು. ಇದೀಗ ಪರಸ್ಪರ ಒಪ್ಪಿಗೆ ಮೇರೆಗೆ ದೂರವಾಗುತ್ತಿದ್ದೇವೆ" ಎಂದಿದ್ದಾರೆ. [ಹೇಗಿದ್ರು.. ಹೇಗಾದ್ರು ಗೊತ್ತಾ.. ವೈರಲ್‌ ಆಗ್ತಿದೆ 10 ಇಯರ್ ಚಾಲೆಂಜ್]

ಲಗೆ ರಹೊ ಮುನ್ನಾಭಾಯ್, ಹನಿಮೂನ್ ಟ್ರಾವೆಲ್ಸ್ ಪ್ರೈ.ಲಿ, ಶೂಟೌಟ್ ಅಟ್ ಲೋಖಂಡವಾಲ, ಓಂ ಶಾಂತಿ ಓಂ, ಸಲಾಂ ಮುಂಬೈ, ಸಂಜು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ದಿಯಾ ಮಿರ್ಜಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌