ಆ್ಯಪ್ನಗರ

ಪ್ರಿಯಾಂಕ ಗಾಂಧಿ ಪಾತ್ರದಲ್ಲಿ ಅಹನಾ ಕುಮ್ರ

ಈ ವರ್ಷದ ಬಹುನಿರೀಕ್ಷಿತ ದ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಸಿನಿಮಾದಲ್ಲಿ ಪ್ರಿಯಾಂಕ ಗಾಂಧಿ ಪಾತ್ರವನ್ನು ಬಾಲಿವುಡ್‌ ...

Vijaya Karnataka 19 Jul 2018, 5:00 am
ಈ ವರ್ಷದ ಬಹುನಿರೀಕ್ಷಿತ ದ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಸಿನಿಮಾದಲ್ಲಿ ಪ್ರಿಯಾಂಕ ಗಾಂಧಿ ಪಾತ್ರವನ್ನು ಬಾಲಿವುಡ್‌ ನಟಿ ಅಹನಾ ಕುಮ್ರ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಬಯೋಪಿಕ್‌ ಆಗಿರುವ ಈ ಸಿನಿಮಾ ಈಗಾಗಲೇ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇದರಲ್ಲಿ ಮನಮೋಹನ್‌ ಸಿಂಗ್‌ ಪಾತ್ರವನ್ನು ಹಿರಿಯ ನಟ ಅನುಪಮ್‌ ಖೇರ್‌ ಮಾಡುತ್ತಿದ್ದು, ಅವರ ಫಸ್ಟ್‌ ಲುಕ್‌ ವೈರಲ್‌ ಆಗಿದೆ.
Vijaya Karnataka Web aahana kumra-3


ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಸಿನಿಮಾದಲ್ಲಿ ಗಮನ ಸೆಳೆದಿದ್ದ ಅಹನಾ ಕುಮ್ರ ಈಗ ಪ್ರಿಯಾಂಕ ಗಾಂಧಿ ಪಾತ್ರಕ್ಕೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆಡಿಷನ್‌ನಲ್ಲಿ ನನಗೆ ಪ್ರಿಯಾಂಕ ಗಾಂಧಿಯವರ ಡ್ರೆಸ್‌ ಸ್ಟೈಲ್‌ ಮಾಡುವಂತೆ ಹೇಳಲಾಗಿತ್ತು. ಆ ಲುಕ್‌ನಲ್ಲಿ ನಾನು ಪ್ರಿಯಾಂಕ ಗಾಂಧಿಯವರನ್ನೇ ಹೋಲುತ್ತಿದ್ದೆ. ಈ ಆಯ್ಕೆ ಖುಷಿ ತಂದಿದೆ. ಈ ಪಾತ್ರಕ್ಕಾಗಿ ನಾನು ಪ್ರಿಯಾಂಕರವರ ಬಾಡಿ ಲಾಂಗ್ವೇಜ್‌ ರೂಢಿಸಿಕೊಳ್ಳಬೇಕಿದೆ ಎಂದು ಅಹನಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌