ಆ್ಯಪ್ನಗರ

ಹತ್ತು ದಿನ ಮೌನಕ್ಕೆ ಶರಣಾಗಲಿರುವ ಕಂಗನಾ ರಣಾವತ್

ಧ್ಯಾನ ಮಾಡುವಾಗ ಪ್ರತಿದಿನ 10-15 ಗಂಟೆ ನನ್ನ ಬಳಿ ಫೋನ್ ಇಟ್ಟುಕೊಳ್ಳಲ್ಲ. ಈ ಕೋರ್ಸ್ ಕಂಪ್ಲೀಟ್ ಮಾಡಬೇಕಾದರೆ ಆರು ತಿಂಗಳ ಸಮಯ ಬೇಕು. ಆಗ ಎಲ್ಲಾ ಯೋಗ ಭಂಗಿಗಳನ್ನು ಕಲಿಯಬಹುದು ಎಂದಿದ್ದಾರೆ.

Bangalore Mirror Bureau 5 Mar 2019, 5:26 pm
ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಇದೇ ಮಾರ್ಚ್ 23ಕ್ಕೆ ಅವರು 32ನೇ ವರ್ಷಕ್ಕೆ ಅಡಿಯಿಡುತ್ತಿದ್ದು ಈ ಹಿನ್ನೆಲೆಯಲ್ಲಿ ಈಗ ಯೋಗಕ್ಕೆ ಮೊರೆ ಹೋಗಿದ್ದಾರೆ. ಹುಟ್ಟುಹಬ್ಬಕ್ಕೂ ಮುನ್ನ ತಮಿಳುನಾಡು ಕೊಯಂಬತ್ತೂರಿನ ಆರೋಗ್ಯ ಧಾಮದಲ್ಲಿ ಕಳೆಯಲು ಪ್ಲಾನ್ ಮಾಡಿದ್ದಾರೆ. ಇಲ್ಲಿ ಆದಷ್ಟು ಮೌನಕ್ಕೆ ಶರಣಾಗಿ ಧ್ಯಾನದಲ್ಲಿ ತೊಡಗಲಿರುವುದಾಗಿ ಕಂಗನಾ ಹೇಳಿದ್ದಾರೆ.
Vijaya Karnataka Web kangana-ranaut


ಯೋಗ ಮುಗಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಾಲಿಯ ತನ್ನ ಮನೆಗೆ ಹೋಗಲಿದ್ದಾರೆ ಕಂಗನಾ. "ನಾನು 16-17ನೇ ವರ್ಷದಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಈಗ ಪಾಲ್ಗುಳ್ಳುತ್ತಿರುವುದು ಅಡ್ವಾನ್ಸ್‌‍ಡ್ ಆಗಿದೆ. ಇದರಲ್ಲಿ ಭಾಗಿಯಾಗಲು ಬಹಳ ಸಮಯದಿಂದ ಕಾಯುತ್ತಿದ್ದೆ. ಈ ವರ್ಷ ಅದು ಸಾಧ್ಯವಾಗುತ್ತಿದೆ. ನನ್ನ ಹುಟ್ಟುಹಬ್ಬದ ಸಮಯದಲ್ಲೇ ಇದರಲ್ಲಿ ಭಾಗಿಯಾಗುತ್ತಿದ್ದೇನೆ. ಹತ್ತು ದಿನ ಮೌನಕ್ಕೆ ಶರಣಾಗುತ್ತಿರುವುದು ನನ್ನ ದೊಡ್ಡ ಕಮಿಟ್‌ಮೆಂಟ್" ಎಂದಿದ್ದಾರೆ ಕಂಗನಾ.

ಧ್ಯಾನ ಮಾಡುವಾಗ ಪ್ರತಿದಿನ 10-15 ಗಂಟೆ ನನ್ನ ಬಳಿ ಫೋನ್ ಇಟ್ಟುಕೊಳ್ಳಲ್ಲ. ಈ ಕೋರ್ಸ್ ಕಂಪ್ಲೀಟ್ ಮಾಡಬೇಕಾದರೆ ಆರು ತಿಂಗಳ ಸಮಯ ಬೇಕು. ಆಗ ಎಲ್ಲಾ ಯೋಗ ಭಂಗಿಗಳನ್ನು ಕಲಿಯಬಹುದು ಎಂದಿದ್ದಾರೆ.

ಈ ಯೋಗ ಮುಗಿಸಿಕೊಂಡು, ಹತ್ತು ದಿನ ಮೌನ ಪಾಲಿಸಿ ಬಳಿಕ ಮನಾಲಿಗೆ ಹೊರಡಲಿದ್ದಾರೆ ಕಂಗನಾ. ಅಲ್ಲಿ ತನ್ನ ಕುಟುಂಬದ ಜತೆಗೆ ಖಾಸಗಿಯಾಗಿ ಹುಟ್ಟುಹಬ್ಬ ಆಚರಿಸಿಕೋಳ್ಳಲಿದ್ದಾರೆ. ಇದಾದ ಬಳಿಕ ಅಶ್ವಿನಿ ಅಯ್ಯರ್ ತಿವಾರಿ ಅವರ ಪಂಗಾ ಚಿತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಬಡ್ಡಿ ಆಟಗಾರ್ತಿಯಾಗಿ ಕಂಗನಾ ಕಾಣಿಸಲಿದ್ದಾರೆ. ಮನಾಲಿಯಲ್ಲೇ ಚಿತ್ರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದು, ಅಲ್ಲೇ ಕಬಡ್ಡಿ ಅಭ್ಯಾಸ ಮಾಡುವುದಾಗಿ ಹೇಳಿದ್ದಾರೆ.

ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಸಿನಿಮಾ ಸಕ್ಸಸ್ ಆಗಿದ್ದಕ್ಕೆ ಇತ್ತೀಚೆಗೆ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ಕಳೆದ ವರ್ಷದ 31ನೇ ಹುಟ್ಟುಹಬ್ಬ ಸಂದರ್ಭದಲ್ಲಿ 31 ಗಿಡಗಳನ್ನು ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವರ್ಷ ಯೋಗಾಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌