ಆ್ಯಪ್ನಗರ

ಐಶ್ವರ್ಯಾ ರೈ, ಪುತ್ರಿ ಆರಾಧ್ಯಾಗೂ ತಗುಲಿದ ಕೊರೊನಾ ಸೋಂಕು! ಖಚಿತಪಡಿಸಿದ ಅಭಿಷೇಕ್‌ ಬಚ್ಚನ್‌!

ಬಾಲಿವುಡ್ ಬಿಗ್‌ಬಿ ಅಮಿತಾಭ್ ಕುಟುಂಬಕ್ಕೆ ಕೊರೊನಾ ಕಂಟಕ ಎದುರಾಗಿದೆ. ಶನಿವಾರವಷ್ಟೇ ಅಮಿತಾಭ್‌ ಬಚ್ಚನ್‌ ಮತ್ತು ಅಭಿಷೇಕ್ ಬಚ್ಚನ್‌ಗೆ ತಗುಲಿದ್ದ ಸೋಂಕು, ಈಗ ಐಶ್ವರ್ಯಾ ಮತ್ತು ಆರಾಧ್ಯಾಗೂ ತಗುಲಿದೆ.

Vijaya Karnataka Web 12 Jul 2020, 7:19 pm
ಶನಿವಾರ ರಾತ್ರಿ ಅಮಿತಾಭ್‌ ಬಚ್ಚನ್ ಮತ್ತು ಅಭಿಷೇಕ್‌ ಬಚ್ಚನ್ ಅವರಿಗೆ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೇ ಭಾನುವಾರ (ಜುಲೈ 12) ಅವರ ಕುಟುಂಬದ ಇನ್ನಿಬ್ಬರಿಗೆ ಸೋಂಕು ದೃಢವಾಗಿದೆ. ಅಭಿಷೇಕ್‌ ಪತ್ನಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ಮಗಳು ಆರಾಧ್ಯಾ ಬಚ್ಚನ್‌ಗೂ ಸೋಂಕು ತಗುಲಿರುವುದು ಖಚಿತಗೊಂಡಿದೆ. ಅಭಿಷೇಕ್ ಬಚ್ಚನ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
Vijaya Karnataka Web aishwarya rai bachchan aaradhya test positive for coronavirus
ಐಶ್ವರ್ಯಾ ರೈ, ಪುತ್ರಿ ಆರಾಧ್ಯಾಗೂ ತಗುಲಿದ ಕೊರೊನಾ ಸೋಂಕು! ಖಚಿತಪಡಿಸಿದ ಅಭಿಷೇಕ್‌ ಬಚ್ಚನ್‌!


ಭಾನುವಾರ ಬೆಳಗ್ಗೆಯಿಂದಲೇ ಜಯಾ ಬಚ್ಚನ್, ಐಶ್ವರ್ಯಾ ರೈ ಹಾಗೂ ಆರಾಧ್ಯಾ ಕೊರೊನಾ ಪರೀಕ್ಷೆಯ ವರದಿ ಕುರಿತು ಸಾಕಷ್ಟು ಕುತೂಹಲ ಉಂಟಾಗಿತ್ತು. ಆರಂಭದಲ್ಲಿ ಮೂವರಿಗೂ ಕೊರೊನಾ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಆಗಿದ್ದು, ಅವರೆಲ್ಲರೂ ಮನೆಯಲ್ಲೇ ಕ್ವಾರಂಟೈನ್ ಆಗಲಿದ್ದಾರೆ ಎಂಬ ಮಾಹಿತಿ ಇತ್ತು. ಆನಂತರ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೊಪೆ, ಐಶ್ವರ್ಯಾ ರೈ ಮತ್ತು ಆರಾಧ್ಯಾಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಟ್ವೀಟ್ ಮಾಡಿದ್ದರು. ಆದಾದ ಕೆಲ ಸಮಯದಲ್ಲೇ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಆದ್ದರಿಂದ ಅಭಿಮಾನಿಗಳಲ್ಲಿ ಇನ್ನಷ್ಟು ಗೊಂದಲ ಉಂಟಾಗಿತ್ತು.

ಇದೀಗ ಅಭಿಷೇಕ್ ಟ್ವೀಟ್ ಮಾಡುವ ಮೂಲಕ ಪತ್ನಿ ಹಾಗೂ ಮಗಳಿಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದನ್ನು ಖಚಿತಪಡಿಸಿದ್ದಾರೆ. 'ಐಶ್ವರ್ಯಾ ರೈ ಹಾಗೂ ಆರಾಧ್ಯಾಗೂ ಕೊರೊನಾ ಸೋಂಕು ಪಾಸಿಟಿವ್ ಆಗಿದೆ. ಅವರಿಬ್ಬರು ಮನೆಯಲ್ಲೇ ಸೆಲ್ಫ್ ಕ್ವಾರಂಟೈನ್ ಆಗಲಿದ್ದಾರೆ. ನಮ್ಮ ತಾಯಿ (ಜಯಾ ಬಚ್ಚನ್) ಸೇರಿದಂತೆ ಕುಟುಂಬದ ಉಳಿದ ಸದಸ್ಯರ ವರದಿ ನೆಗೆಟಿವ್ ಆಗಿದೆ. ನಿಮ್ಮೆಲ್ಲರ ಹಾರೈಕೆ, ಪ್ರಾರ್ಥನೆಗಳಿಗೆ ಧನ್ಯವಾದಗಳು' ಎಂದಿದ್ದಾರೆ.

ಅಮಿತಾಭ್‌ ಬಚ್ಚನ್‌ಗೆ ಕೊರೊನಾ ಪಾಸಿಟಿವ್‌! ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು

ಇನ್ನು, ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಆಸ್ಪತ್ರೆಯಲ್ಲೇ ಉಳಿಯಲಿದ್ದಾರೆ. 'ವೈದ್ಯರು ಹೇಳುವ ತನಕ ನಾನು ಮತ್ತು ತಂದೆ ಆಸ್ಪತ್ರೆಯಲ್ಲೇ ಇರಲಿದ್ದೇವೆ. ಎಲ್ಲರೂ ನಿಯಮಗಳನ್ನು ಫಾಲೋ ಮಾಡಿ, ಸುರಕ್ಷಿತವಾಗಿರಿ' ಎಂದು ಅಭಿಷೇಕ್ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಶನಿವಾರ ರಾತ್ರಿ ಅಮಿತಾಭ್ ಮತ್ತು ಅಭಿಷೇಕ್‌ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅವರಿಬ್ಬರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಹಾಗೂ ಮಗ ಅಭಿಷೇಕ್‌ ಬಚ್ಚನ್‌ರಿಗೂ ಕೊರೊನಾ ಪಾಸಿಟಿವ್ !!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌