ಆ್ಯಪ್ನಗರ

ತೆರೆ ಮೇಲೆ ಮತ್ತೆ ಅಕ್ಕಿ ಮತ್ತು ಕ್ಯಾಟ್‌ ಮೋಡಿ

ನಮಸ್ತೆ ಲಂಡನ್‌, ಸಿಂಗ್‌ ಈಸ್‌ ಕಿಂಗ್‌, ತೀಸ್‌ ಮಾರ್‌ ಖಾನ್‌ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಬಾಲಿವುಡ್‌ನ ಯಶಸ್ವಿ ...

Vijaya Karnataka 24 Apr 2019, 5:00 am
ನಮಸ್ತೆ ಲಂಡನ್‌, ಸಿಂಗ್‌ ಈಸ್‌ ಕಿಂಗ್‌, ತೀಸ್‌ ಮಾರ್‌ ಖಾನ್‌ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಬಾಲಿವುಡ್‌ನ ಯಶಸ್ವಿ ಆನ್‌ಸ್ಕ್ರೀನ್‌ ಜೋಡಿ ಎನಿಸಿಕೊಂಡಿರುವ ಅಕ್ಷ ಯ್‌ ಕುಮಾರ್‌ ಮತ್ತು ಕತ್ರಿನಾ ಕೈಫ್‌ ಇದೀಗ ಸತತ ಒಂಬತ್ತು ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ರೋಹಿತ್‌ ಶೆಟ್ಟಿ ನಿರ್ಮಾಣದ ಸೂರ್ಯವಂಶಿ ಸಿನಿಮಾದಲ್ಲಿ ಇವರಿಬ್ಬರ ನಡುವಿನ ಸೂಪರ್‌ಹಿಟ್‌ ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ಮತ್ತೆ ಜನರಿಗೆ ಮೋಡಿ ಮಾಡಲಿದೆ.
Vijaya Karnataka Web akshay-katrina


ಅಕ್ಷ ಯ್‌ ಕುಮಾರ್‌ ಅವರು ಪೊಲೀಸ್‌ ಪಾತ್ರದಲ್ಲಿ ನಟಿಸಲಿರುವ ಸೂರ್ಯವಂಶಿ ಸಿನಿಮಾಗೆ ನಾಯಕಿಯ ಹೆಸರು ಅಂತಿಮವಾಗಿರಲಿಲ್ಲ. ಸೋಮವಾರವಷ್ಟೇ ಕತ್ರಿನಾ ಹೆಸರು ಫೈನಲ್‌ ಆಗಿದ್ದು, ಈ ಕುರಿತಂತೆ ಅಕ್ಷ ಯ್‌ ಕುಮಾರ್‌ ಟ್ವೀಟ್‌ ಮಾಡಿ ಸೂರ್ಯವಂಶಿ ಸಿನಿಮಾ ತಂಡದ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಿಂಗಂ ಖ್ಯಾತಿಯ ಅಜಯ್‌ ದೇವಗನ್‌ ಮತ್ತು ಸಿಂಬಾ ಖ್ಯಾತಿಯ ರಣವೀರ್‌ ಸಿಂಗ್‌ ಪಾತ್ರಗಳ ಕ್ಯಾಮಿಯೊ ಕೂಡಾ ಇರಲಿವೆ ಎಂದು ಹೇಳಲಾಗುತ್ತಿದೆ. ಇದೀಗ ಕತ್ರಿನಾ ಕೈಫ್‌ ಕೂಡಾ ಎಂಟ್ರಿಯಾಗಿರುವ ಕಾರಣ ಈ ಸಿನಿಮಾ ಕುರಿತ ಜನರ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಸೂರ್ಯವಂಶಿ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌