ಆ್ಯಪ್ನಗರ

ಹಣ ಗಳಿಸೋದ್ರಲ್ಲಿ ಹಾಲಿವುಡ್‌ನವರಿಗೂ ಸೆಡ್ಡು ಹೊಡೆದ ನಟ ಅಕ್ಷಯ್‌ ಕುಮಾರ್‌!

ಎಷ್ಟೇ ದಾನ ಮಾಡಿದರೂ ಅಕ್ಷಯ್‌ ಕುಮಾರ್‌ ಶ್ರೀಮಂತಿಕೆ ಕಡಿಮೆ ಆಗಿಲ್ಲ. ದಿನೇದಿನೆ ಅವರ ಸಂಪತ್ತು ಹೆಚ್ಚುತ್ತಲೇ ಇದೆ. ಸಂಭಾವನೆ ವಿಚಾರದಲ್ಲಿ ಅವರು ಹಾಲಿವುಡ್‌ ಸ್ಟಾರ್‌ಗಳಿಗೂ ಸೆಡ್ಡು ಹೊಡೆದಿದ್ದಾರೆ! ಈ ಬಗ್ಗೆ ಇಲ್ಲಿದೆ ಮಾಹಿತಿ...

Vijaya Karnataka Web 12 Aug 2020, 3:16 pm
ನಟ ಅಕ್ಷಯ್‌ ಕುಮಾರ್‌ ಅವರು ಕೊರೊನಾ ವೈರಸ್‌ ಹಾವಳಿ ಹೆಚ್ಚಾದಾಗ ಪಿಎಂ ಕೇರ್ಸ್‌ ಫಂಡ್‌ಗೆ ಬರೋಬ್ಬರಿ 25 ಕೋಟಿ ರೂ.ಗಳನ್ನು ದೇಣಿಗೆ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಬಾಕಿ ಸ್ಟಾರ್‌ ಕಲಾವಿದರಿಗಿಂತಲೂ ಮುನ್ನ ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ ಅಕ್ಷಯ್‌ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗಾದರೆ ಅವರ ಆದಾಯ ಎಷ್ಟಿರಬಹುದು ಎಂಬ ಪ್ರಶ್ನೆ ಕೂಡ ಮೂಡಿತ್ತು.
Vijaya Karnataka Web akshay kumar grabs 6th position in forbes highest paid actors of 2020 list
ಹಣ ಗಳಿಸೋದ್ರಲ್ಲಿ ಹಾಲಿವುಡ್‌ನವರಿಗೂ ಸೆಡ್ಡು ಹೊಡೆದ ನಟ ಅಕ್ಷಯ್‌ ಕುಮಾರ್‌!


ಅಚ್ಚರಿ ಏನೆಂದರೆ, ಬಾಲಿವುಡ್‌ ಸ್ಟಾರ್‌ಗಳಾದ ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌ ಮುಂತಾದವರನ್ನು ಮೀರಿಸಿ ಅಕ್ಷಯ್‌ ಕುಮಾರ್‌ ಸಂಭಾವನೆ ಪಡೆಯುತ್ತಿದ್ದಾರೆ. ಬರೀ ಭಾರತೀಯ ಚಿತ್ರರಂಗದ ಹೀರೋಗಳಿಗೆ ಮಾತ್ರವಲ್ಲದೆ ಹಾಲಿವುಡ್‌ ಸ್ಟಾರ್‌ಗಳಿಗೂ ಅಕ್ಷಯ್‌ ಸೆಡ್ಡು ಹೊಡೆಯುತ್ತಿದ್ದಾರೆ. ಹಾಗಂತ ಇದು ಊಹಾಪೋಹ ಅಲ್ಲ. ಫೋರ್ಬ್ಸ್‌ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯೇ ಈ ಮಾತಿಗೆ ಸಾಕ್ಷಿ.

ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್‌ 10 ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್‌ ಸಂಸ್ಥೆ ಬಿಡುಗಡೆ ಮಾಡಿದೆ. ಅದರಲ್ಲಿ ಅಕ್ಷಯ್‌ ಕುಮಾರ್‌ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ 10 ಜನರ ಪಟ್ಟಿಯಲ್ಲಿ ಇರುವ ಏಕೈಕ ಭಾರತೀಯ ನಟ ಎಂಬ ಖ್ಯಾತಿಗೂ ಅವರು ಒಳಗಾಗಿದ್ದಾರೆ. ಜೂನ್‌ 2019ರಿಂದ ಜೂನ್‌ 2020ರವರೆಗಿನ ಸೆಲೆಬ್ರಿಟಿಗಳ ಸಂಭಾವನೆ ಆಧರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.

also read: ಅಕ್ಷಯ್‌ ಕುಮಾರ್‌ ರಕ್ಷಾ ಬಂಧನದ ದಿನ ಅಕ್ಕನಿಗೆ ನೀಡಿದ ಉಡುಗೊರೆ ನಿಜಕ್ಕೂ ಅದ್ಭುತ!

ಈ ಪಟ್ಟಿಯ ಪ್ರಕಾರ ಅಕ್ಷಯ್‌ ಕುಮಾರ್‌ ಕಳೆದೊಂದು ವರ್ಷದಲ್ಲಿ 48.5 ಮಿಲಿಯನ್ ಡಾಲರ್‌ (ಅಂದಾಜು 363 ಕೋಟಿ ರೂ.) ಸಂಪಾದನೆ ಮಾಡಿದ್ದಾರೆ. 87.5 ಮಿಲಿಯನ್‌ ಡಾಲರ್‌ ಗಳಿಸುವ ಮೂಲಕ ಹಾಲಿವುಡ್‌ ನಟ ಡ್ವೇನ್‌ ಜಾನ್ಸನ್‌ ಮೊದಲ ಸ್ಥಾನದಲ್ಲಿ ಇದ್ದಾರೆ. ಪ್ರಸ್ತುತ ಅಕ್ಷಯ್‌ ಕುಮಾರ್‌ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರು ನಟಿಸಿರುವ 'ಲಕ್ಷ್ಮೀ ಬಾಂಬ್‌' ಚಿತ್ರ ಶೀಘ್ರವೇ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. 'ಬೆಲ್‌ ಬಾಟಂ' ಚಿತ್ರದ ಶೂಟಿಂಗ್‌ನಲ್ಲಿ ಅಕ್ಕಿ ತೊಡಗಿಕೊಂಡಿದ್ದಾರೆ.

also read: ಜೀವನ ಸಾಗಿಸಲು ತರಕಾರಿ ಮಾರುತ್ತಿರುವ ಬಾಲಿವುಡ್‌ ನಟ! ಇದು ಲಾಕ್‌ಡೌನ್‌ ಎಫೆಕ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌