ಆ್ಯಪ್ನಗರ

ದೇಶಭಕ್ತಿ ಉಕ್ಕಿಸುವಂತಿದೆ ಅಕ್ಷಯ್ ಕುಮರ್ ’ಗೋಲ್ಡ್’ ಟ್ರೇಲರ್

ನೈಜ ಘಟನೆ ಆಧರಿಸಿದ ಸಿನಿಮಾಗಳಲ್ಲಿ ನಟಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದಾ ಮುಂದಿರುತ್ತಾರೆ. ಈ ವರ್ಷದ ಆರಂಭದಲ್ಲೇ ’ಪ್ಯಾಡ್‌ಮ್ಯಾನ್’ ಸಿನಿಮಾ ಮೂಲಕ ಭರ್ಜರಿ ಹಿಟ್ ಕೊಟ್ಟ ಅಕ್ಕಿ ಇದೀಗ ’ಗೋಲ್ಡ್’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

Vijaya Karnataka 25 Jun 2018, 4:25 pm
ನೈಜ ಘಟನೆ ಆಧರಿಸಿದ ಸಿನಿಮಾಗಳಲ್ಲಿ ನಟಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದಾ ಮುಂದಿರುತ್ತಾರೆ. ಈ ವರ್ಷದ ಆರಂಭದಲ್ಲೇ ’ಪ್ಯಾಡ್‌ಮ್ಯಾನ್’ ಸಿನಿಮಾ ಮೂಲಕ ಭರ್ಜರಿ ಹಿಟ್ ಕೊಟ್ಟ ಅಕ್ಕಿ ಇದೀಗ ’ಗೋಲ್ಡ್’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
Vijaya Karnataka Web gold


1948ರಲ್ಲಿ ಒಲಂಪಿಕ್ಸ್‌ನಲ್ಲಿ ಭಾರತ ಹಾಕಿ ಚಿನ್ನದ ಪದಕ ಸಾಧಿಸಿದ ಕಥೆಯ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಇದರಲ್ಲಿ ಅಕ್ಷಯ್ ಕೋಚ್ ಪಾತ್ರದಲ್ಲಿ ಕಾಣಿಸಿದ್ದಾರೆ. ಸುಮಾರು 200 ವರ್ಷ ನಮ್ಮನ್ನು ಆಳಿದ ಬ್ರಿಟೀಷರು ನಮ್ಮ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಬೇಕಾದ ಪರಿಸ್ಥಿತಿಯನ್ನು ಓರ್ವ ವ್ಯಕ್ತಿ ತಂದರು ಎಂದು ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾ ಟೀಸರ್‌ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಗೋಲ್ಡ್ ಬಿಡುಗಡೆಯಾಗಿ ಕಾಯುತ್ತಿದ್ದೇವೆ ಎಂದು ಹಲವು ಸಿನಿಮಾ ಪ್ರಮುಖರು ಟ್ವೀಟ್ ಮಾಡಿ ಚಿತ್ರತಂಡವನ್ನು ಹುರುದುಂಬಿಸಿದ್ದಾರೆ.

ಸೋಮವಾರ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ದೇಶಭಕ್ತಿಯನ್ನು ಉಕ್ಕಿಸುವಂತೆ ಟ್ರೇಲರ್ ಮೂಡಿಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಸಚಿನ್ ಜಿಗರ್ ನೀಡಿರುವ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆ ಎನ್ನಬಹುದು. ’ಕನಸೊಂದು ನಿಜವಾಗಲು 12 ವರ್ಷ ಬೇಕಾಯಿತು’ ಎಂದು ಆರಂಭವಾಗುವ ಈ ಟ್ರೇಲರ್ ಸಿನಿಮಾ ಬಗ್ಗೆ ಕುತೂಹಲ ಮೂಡಿಸುತ್ತದೆ.

1936 ರಿಂದ 1948ರ ನಡುವಿನ ಕಾಲಾವಧಿಯಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಇದು ಎಂದಿದ್ದಾರೆ ನಿರ್ಮಾಪಕ ರಿತೇಶ್ ಸಿದ್ವಾನಿ. ’ಗೋಲ್ಡ್’ ಟ್ರೇಲರನ್ನು ಅಕ್ಷಯ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಬ್ರಿಟೀಷ್ ಆಳ್ವಿಕೆಯಲ್ಲಿ ಗೆದ್ದವರು.. ಸ್ವಾತಂತ್ರ್ಯ ಭಾರತದಲ್ಲಿ ದಂತಕಥೆಯಾದವರು. ಗೋಲ್ಡ್ ಸಿನಿಮಾ ಹಾಕಿಯ ಸುವರ್ಣ ಯುಗಕ್ಕೆ ಸಾಕ್ಷಿಯಾಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವದಂದು ಈ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌