ಆ್ಯಪ್ನಗರ

ಮ್ಯಾರಕೇಶ್‌ನಲ್ಲಿ ಆ್ಯಮಿ ಜಾಕ್ಸನ್‌ ಬೇಬಿ ಮೂನ್‌

ಏಳು ತಿಂಗಳ ಗರ್ಭಿಣಿಯಾಗಿರುವ ದಿ ವಿಲನ್‌ ಸಿನಿಮಾ ನಟಿ ಆ್ಯಮಿ ಜಾಕ್ಸನ್‌ ಸದ್ಯಕ್ಕೆ ಮೊರಕ್ಕೊ ಗಣರಾಜ್ಯದ ಸುಂದರ ನಗರ ...

Vijaya Karnataka 28 May 2019, 5:00 am
ಏಳು ತಿಂಗಳ ಗರ್ಭಿಣಿಯಾಗಿರುವ ದಿ ವಿಲನ್‌ ಸಿನಿಮಾ ನಟಿ ಆ್ಯಮಿ ಜಾಕ್ಸನ್‌ ಸದ್ಯಕ್ಕೆ ಮೊರಕ್ಕೊ ಗಣರಾಜ್ಯದ ಸುಂದರ ನಗರ ಮ್ಯಾರಕೇಶ್‌ನಲ್ಲಿ ತನ್ನ ಭಾವಿ ಪತಿ ಜತೆಗೆ ಬೇಬಿ ಮೂನ್‌ ಎಂಜಾಯ್‌ ಮಾಡುತ್ತಿದ್ದಾರೆ. ಅಲ್ಲಿ ಸೂರ್ಯನ ಎಳೆ ಬಿಸಿಲಿನಲ್ಲಿ ಮೈ ಮರೆತು ನಿಂತಿರುವ ತನ್ನ ಫೋಟೋವೊಂದನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಈ ಫೋಟೋಗೆ ಸನ್ನಿ ಮಾರ್ನಿಂಗ್‌ ಇನ್‌ ಮ್ಯಾರಕೇಶ್‌ ಎಂಬ ಕ್ಯಾಪ್ಷನ್‌ ಕೊಟ್ಟಿದ್ದಾರೆ.
Vijaya Karnataka Web amy jackson-4


ಆ್ಯಮಿಯ ಇತರೆಲ್ಲಾ ಫೋಟೋಗಳಂತೆ ಈ ಬೇಬಿ ಮೂನ್‌ ಫೋಟೊ ಕೂಡಾ ವೈರಲ್‌ ಆಗಿದ್ದು, ಇದರಲ್ಲೂ ಆಕೆ ಸೂಪರ್‌ ಹಾಟ್‌ ಆಗಿ ಕಾಣುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. ಕಳೆದ ವಾರ ಅವರು ತನ್ನ ಪ್ರೆಗ್ನೆನ್ಸಿ ಅಪ್‌ಡೇಟ್‌ ಕುರಿತ ಮಾಹಿತಿ ಮತ್ತು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡು, ತಾನೀಗ 22 ವಾರಗಳ ಗರ್ಭಿಣಿ. ಬೇಬಿ ಪಿ ಗ್ರೋಯಿಂಗ್‌ ಆ್ಯಂಡ್‌ ಗ್ರೋಯಿಂಗ್‌ ಎಂದು ಬರೆದುಕೊಂಡಿದ್ದಾರೆ. ಆ್ಯಮಿ ಇತ್ತೀಚೆಗಷ್ಟೇ ತನ್ನ ಬಾಯ್‌ಫ್ರೆಂಡ್‌ ಜಾರ್ಜ್‌ ಪನಯಿಟೊ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌