ಆ್ಯಪ್ನಗರ

ದಕ್ಷಿಣ ಭಾರತಕ್ಕೆ ಮರಳಿದ 'ಪ್ರೀತ್ಸೋದ್‌ ತಪ್ಪಾ' ಖ್ಯಾತಿಯ ಶಿಲ್ಪಾ ಶೆಟ್ಟಿ!

ನಟಿ ಶಿಲ್ಪಾ ಶೆಟ್ಟಿ ಬಹುವರ್ಷಗಳ ನಂತರ ಮತ್ತೆ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಲಿಮ್‌ ಆ್ಯಂಡ್‌ ಬ್ಯೂಟಿಫುಲ್‌ ಆಗಿರುವ ಈ ನಟಿ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿರುವುದು ಅವರ ಅಭಿಮಾನಿಗಳಲ್ಲಿಸಂತಸ ಮೂಡಿಸಿದೆ.

Vijaya Karnataka Web 11 Jun 2020, 11:03 am
ಹಿಂದಿಯ ಜನಪ್ರಿಯ ಚಿತ್ರ 'ಅಂಧಾಧುನ್‌' ತೆಲುಗಿಗೆ ರಿಮೇಕ್‌ ಆಗಲಿದ್ದು, ಈ ಚಿತ್ರದಲ್ಲಿ ನಟಿಸಲು ಶಿಲ್ಪಾ ಸದ್ಯದಲ್ಲೇ ಸಹಿ ಮಾಡಲಿದ್ದಾರೆ ಎಂದಿದೆ ಚಿತ್ರತಂಡ. ಇಲ್ಲಿಯವರೆಗೆ ರಿಯಾಲಿಟಿ ಶೋ, ಯೋಗ ಮತ್ತಿತರ ಚಟುವಟಿಕೆಗಳಲ್ಲಿ ಬಿಝಿಯಾಗಿದ್ದ 45ರ ಹರೆಯದ ಶಿಲ್ಪಾ ಶೆಟ್ಟಿ ಮತ್ತೆ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
Vijaya Karnataka Web ದಕ್ಷಿಣ ಭಾರತಕ್ಕೆ ಮರಳಿದ ಪ್ರೀತ್ಸೋದ್‌ ತಪ್ಪಾ ಖ್ಯಾತಿಯ ಶಿಲ್ಪಾ ಶೆಟ್ಟಿ!


ಶಿಲ್ಪಾ ಶೆಟ್ಟಿ 'ಅಂಧಾಧುನ್‌' ಚಿತ್ರದಲ್ಲಿ ಟಬು ನಿರ್ವಹಿಸಿದ್ದ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ನಿರ್ದೇಶಕರು ಅವರ ಜತೆ ಮಾತನಾಡಿದ್ದು, ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂದಿವೆ ತಂಡದ ಮೂಲಗಳು. 'ವೆಂಕಟಾದ್ರಿ ಎಕ್ಸ್‌ಪ್ರೆಸ್‌' ಚಿತ್ರ ಖ್ಯಾತಿಯ ಮೆರ್ಲಪಕ ಗಾಂಧಿ ಈ ಚಿತ್ರ ನಿರ್ದೇಶನ ಮಾಡಲಿದ್ದು, ಆಯುಷ್ಮಾನ್‌ ಖುರಾನಾ ನಟಿಸಿದ್ದ ಪಾತ್ರದಲ್ಲಿ ನಿತಿನ್‌ ನಟಿಸುತ್ತಿದ್ದಾರೆ. ಫೆಬ್ರವರಿಯಲ್ಲೇ ಚಿತ್ರದ ಮುಹೂರ್ತ ಮಾಡಲಾಗಿದೆ. ಬಾಲಿವುಡ್‌ನಲ್ಲಿ ಅತಿ ದೊಡ್ಡ ಯಶಸ್ಸನ್ನು ಕಂಡ ಚಿತ್ರ 'ಅಂಧಾಧುನ್‌'. ಹಲವು ರಾಷ್ಟ್ರ ಪ್ರಶಸ್ತಿಗಳು ಈ ಚಿತ್ರಕ್ಕೆ ಲಭಿಸಿವೆ. ಗ್ರೇ ಶೇಡ್‌ನ ಈ ಚಿತ್ರದಲ್ಲಿ ಟಬು ಪಾತ್ರಕ್ಕೂ ಬಹಳ ಪ್ರಾಮುಖ್ಯತೆ ಇತ್ತು. ಈ ಚಿತ್ರ ಕನ್ನಡಕ್ಕೂ ಡಬ್‌ ಆಗುವ ಸಾಧ್ಯತೆಗಳಿವೆ.

ಶಿಶುಪಾಲನೆ ಕಷ್ಟವಾಯ್ತೆಂದ ಶಿಲ್ಪಾ
ಲಾಕ್‌ಡೌನ್‌ ಅವಧಿ ಮತ್ತು ಕೊರೊನಾ ಸೋಂಕು ಹರಡಿದ ಸುಮಾರು ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ನವಜಾತ ಶಿಶುವನ್ನು ಪಡೆದ ತಾಯಂದಿರು ಎದುರಿಸಿದ ಸಮಸ್ಯೆ ಅಷ್ಟಿಷ್ಟಲ್ಲ. ಈ ಅವಧಿ ತಾಯಿ ಮಗು ಒಟ್ಟಿಗಿರಲು ತುಂಬಾ ಸಹಾಯವಾಗಿದೆ ಎಂಬೊಂದು ಅಭಿಪ್ರಾಯವಿದ್ದರೂ ಪುಟ್ಟ ಮಕ್ಕಳ ಆರೋಗ್ಯದ ಸಮಸ್ಯೆ ಈ ಸಂದರ್ಭದಲ್ಲಿಎದುರಾಗಿದೆ. ಇದೇ ಸಮಯದಲ್ಲಿಎರಡನೆ ಮಗುವಿನ ತಾಯಿಯಾದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕೂಡ ಆ ಸಂಕಷ್ಟ ಕಾಲದಲ್ಲಿ ತಾವು ಎದುರಿಸಿದ ಕೆಲವು ಸಮಸ್ಯೆಗಳನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹಾಲಿನ ಪುಡಿ ಸಿಗಲಿಲ್ಲ
ಕಳೆದ ಫೆಬ್ರವರಿಯಲ್ಲಿ ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವನ್ನು ಪಡೆದ ಶಿಲ್ಪಾ ಶೆಟ್ಟಿಗೆ ತಮ್ಮ ಮಗುವಿಗೆ ಆ ಸಮಯದಲ್ಲಿ ಅಗತ್ಯವಿದ್ದ ಎದೆಹಾಲಿನ ಪೌಷ್ಟಿಕಾಂಶಗಳನ್ನು ಕೊಡಲು ಸಾಧ್ಯವಾಗಿಲ್ಲ ಎಂಬೊಂದು ಕೊರಗಿದೆ. 'ನಾನು ಎದೆಹಾಲು ಉಣಿಸಲು ಸಾಧ್ಯವಿಲ್ಲದ ಕಾರಣ ಎದೆಹಾಲಿನ ಪೋಷಕಾಂಶಗಳೇ ಇರುವ ಸೂಕ್ತ ಫಾರ್ಮುಲಾದ ಹಾಲು ಅಥವಾ ಹಾಲಿನ ಪುಡಿಯನ್ನು ಮಗುವಿಗೆ ಕೊಡಬೇಕಾಗುತ್ತದೆ. ಆದರೆ ಆ ಸಮಯದಲ್ಲಿ ಬೇರೆ ದೇಶಗಳಿಂದ ಅಂಥ ಉತ್ಪನ್ನಗಳ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದ ಕಾರಣ ನನ್ನ ಮಗುವಿಗೆ ಸೂಕ್ತವಾದ ಹಾಲಿನ ಪುಡಿಯೇ ಸಿಗಲಿಲ್ಲ. ಮಗು ಒಂದು ನಿರ್ದಿಷ್ಟ ಫಾರ್ಮುಲಾದ ಹಾಲಿಗೆ ಒಗ್ಗಿಕೊಂಡ ಮೇಲೆ ಅದನ್ನು ಬದಲಾಯಿಸುವುದು ಕೂಡ ಸರಿಯಾಗುವುದಿಲ್ಲ. ಇದನ್ನು ತಾಯಂದಿರು ಮಾತ್ರ ಅರ್ಥ ಮಾಡಿಕೊಳ್ಳಬಲ್ಲರು' ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ನವಜಾತ ಶಿಶುವಿಗೆ ಸೂಕ್ತ ಸಮಯದಲ್ಲಿಲಸಿಕೆ ಹಾಕಿಸಲು ವೈದ್ಯರ ಅಪಾಯಿಂಟ್‌ಮೆಂಟ್‌ ಕೂಡ ಸಿಗದೆ ಬಳಿಕ ಮನೆಗೇ ಬಂದು ಲಸಿಕೆ ಹಾಕಲು ವಿನಂತಿಸಿದೆ ಎಂದಿದ್ದಾರೆ ಅವರು.

ದರ್ಶನ್‌ ಸಿನಿಮಾ ಶೀರ್ಷಿಕೆ ಮೇಲೆ ಕಣ್ಣಿಟ್ಟ ಅನುಷ್ಕಾ ಶರ್ಮಾ! ಬೆಚ್ಚಿ ಬೀಳಿಸುತ್ತಾರೆ ಹುಷಾರ್‌!

ಮನೆಯ ಸುರಕ್ಷೆ
ಈ ಸಮಯದಲ್ಲಿ ಜನರು ತಮ್ಮ ಮನೆ ಮತ್ತು ಅಲ್ಲಿರುವ ವಸ್ತುಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಅದನ್ನು ಸೋಂಕು ರಹಿತ ಮತ್ತು ಸೂಕ್ತವಾಗಿ ಸ್ಯಾನಿಟೈಸ್‌ ಮಾಡಬೇಕಾಗಿತ್ತು. ನವಜಾತ ಶಿಶುವಿರುವ ಮನೆಯಲ್ಲಿಈ ಪ್ರಕ್ರಿಯೆ ತುಸು ಹೆಚ್ಚಿಗೆಯೇ ಮಾಡಬೇಕಾಗುತ್ತದೆ. ಶಿಲ್ಪಾ ಕೂಡ ಇದನ್ನು ಎದುರಿಸಿದ್ದು, 'ಮನೆಯೊಳಗೆ ಸಮಿಶಾಳ ಸುರಕ್ಷತೆಗೆ ನಾನು ತೆಗೆದುಕೊಂಡ ಎಚ್ಚರಿಕೆ ಅಷ್ಟಿಷ್ಟಲ್ಲ. ಈವರೆಗೂ ನಾನು ಆಕೆಯನ್ನು ಮನೆಯಿಂದ ಹೊರಗೆ ಹೋಗಲು ಬಿಟ್ಟಿಲ್ಲ. ಮನೆಯಂಗಳಕ್ಕೂ ಆಕೆ ಹೋಗದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದೇನೆ' ಎಂದಿದ್ದಾರೆ.

ಸಿನಿಮಾದಿಂದ ದೂರ ಉಳಿದಿದ್ದ ಶಾರುಖ್‌ ಖಾನ್‌ ಈಗ ಪತ್ರಕರ್ತನಾಗಿ ಎಂಟ್ರಿ!

ಕೋಟ್‌
ಸಾಂಕ್ರಾಮಿಕ ರೋಗದ ಸಮಯದಲ್ಲಿ ಶಿಶುಗಳನ್ನು ನೋಡಿಕೊಳ್ಳುವ ಕಷ್ಟವನ್ನು ಎದುರಿಸಿದವರಿಗೆ ಮಾತ್ರ ಅದರ ಸೂಕ್ಷ್ಮತೆ ಅರ್ಥವಾಗುತ್ತದೆ.

-ಶಿಲ್ಪಾ ಶೆಟ್ಟಿ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌