ಆ್ಯಪ್ನಗರ

ಸಲ್ಮಾನ್ ಖಾನ್‌ಗೆ ಮದುವೆಯಾಗಲು ಸಮಯವಿಲ್ಲ ಎಂದ ತಂಗಿ ಅರ್ಪಿತಾ ಖಾನ್ ಗಂಡ ಆಯುಷ್ ಶರ್ಮಾ!

ನಟ ಸಲ್ಮಾನ್ ಖಾನ್ ಇಷ್ಟು ವರ್ಷವಾದರೂ ಬ್ಯಾಚುಲರ್ ಆಗಿಯೇ ಉಳಿದುಕೊಂಡಿದ್ದಾರೆ. ಅವರ ಮದುವೆ ಬಗ್ಗೆ ತಂಗಿ ಅರ್ಪಿತಾ ಖಾನ್ ಗಂಡ, ಅವರ ಬಾವ ಆಯುಷ್ ಶರ್ಮಾ ಮಾತನಾಡಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

TIMESOFINDIA.COM 29 Nov 2021, 5:05 pm

ಹೈಲೈಟ್ಸ್‌:


  • ಬಾಲಿವುಡ್ ನಟ ಸಲ್ಮಾನ್ ಖಾನ್‌ ಇನ್ನೂ ಮದುವೆ ಆಗಿಲ್ಲ ಯಾಕೆ?
  • Antim: The Final Truth ಸಿನಿಮಾದಲ್ಲಿ ಸಲ್ಮಾನ್ ಖಾನ್, ಆಯುಷ್ ಶರ್ಮಾ ನಟನೆ
  • ಸಲ್ಮಾನ್ ಖಾನ್ ಮದುವೆ ಬಗ್ಗೆ ಆಯುಷ್ ಶರ್ಮಾ ಹೇಳಿದ್ದೇನು?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web salman khan
ಬಾಲಿವುಡ್ ನಟ ಸಲ್ಮಾನ್ ಖಾನ್ ಇಂದು ಯಶಸ್ವಿ ನಟ, ಬಾಕ್ಸ್ ಆಫೀಸ್ ಸುಲ್ತಾನ, ವಿಶ್ವದಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆದರೆ ಮದುವೆ ಮಾತ್ರ ಆಗಿಲ್ಲ ಯಾಕೆ ಎಂಬ ಪ್ರಶ್ನೆ ಸದಾ ಕೇಳಿ ಬರುತ್ತಲಿರುತ್ತದೆ. ಈ ಪ್ರಶ್ನೆ ಎದುರಾದಾಗೆಲ್ಲ ಸಲ್ಮಾನ್ ಏನೇನೋ ಉತ್ತರ ಕೊಟ್ಟು ತಪ್ಪಿಸಿಕೊಳ್ಳುತ್ತಾರೆಯೇ ವಿನಃ ಸ್ಪಷ್ಟವಾದ ಉತ್ತರವೂ ಕೊಡೋದಿಲ್ಲ, ಮದುವೆಯೂ ಆಗೋದಿಲ್ಲ. ಈಗ ಅವರ ಮದುವೆ ಬಗ್ಗೆ ಅವರ ತಂಗಿ ಗಂಡ ಆಯುಷ್ ಶರ್ಮಾ ಮಾತನಾಡಿದ್ದಾರೆ.

'Antim: The Final Truth'

ಸಲ್ಮಾನ್ ಖಾನ್ ತಂಂಗಿ ಅರ್ಪಿತಾ ಖಾನ್ ಅವರನ್ನು ಆಯುಷ್ ಶರ್ಮಾ ಮದುವೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿವೆ. 'ಲವ್ ರಾತ್ರಿ' ಸಿನಿಮಾ ನಂತರ ಆಯುಷ್ ಅವರು ಸಲ್ಮಾನ್ ಖಾನ್ ಜೊತೆಗೆ ಮೊದಲ ಬಾರಿಗೆ 'Antim: The Final Truth' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಪ್ರಚಾರದ ವೇಳೆ ಆಯುಷ್ ಶರ್ಮಾಗೆ ಸಲ್ಮಾನ್ ಖಾನ್ ಮದುವೆ ಬಗ್ಗೆಯೂ ಪ್ರಶ್ನೆ ಎದುರಾಗಿದೆ.
ಆಯುಷ್, ಸಲ್ಮಾನ್ ಮದುವೆ ಬಗ್ಗೆ ಹೇಳಿದ್ದೇನು?
"ನಾನು ಸಲ್ಮಾನ್ ಖಾನ್ ಬಳಿ ಮದುವೆಯ ಟಾಪಿಕ್ ತೆಗೆಯೋದಿಲ್ಲ. ಅವರು ಕೆಲಸ ಮಾಡುವ ಪರಿ ನಾನು ನೋಡಿದಂತೆ ಹೇಳುವುದಾದರೆ ಅವರಿಗೆ ಮದುವೆಯಾಗಲು ಟೈಮ್ ಇಲ್ಲ. ಅವರು ಹೇಗಿದ್ದಾರೋ ಹಾಗೆಯೇ ನನಗೆ ಖುಷಿಯಿದೆ. ಸಲ್ಮಾನ್ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಆಯುಷ್ ಶರ್ಮಾ ಹೇಳಿದ್ದಾರೆ.

Antim; The Final Truth: ಅಭಿಮಾನಿಗಳ ಅತಿರೇಕದ ಸಂಭ್ರಮ ಕಂಡು ಬೇಸರ ಹೊರಹಾಕಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ತುಂಬ ಸಿಂಪಲ್ ಮನುಷ್ಯ: ಆಯುಷ್ ಶರ್ಮಾ

"ಸಲ್ಮಾನ್ ಇದ್ದಷ್ಟು ಸಿಂಪಲ್ ನಾನಿಲ್ಲ. ಸಲ್ಮಾನ್ ಮನೆ, ಜೀವನಶೈಲಿ, ಕೆಲಸ ಮಾಡುವ ಪರಿ ಕೂಡ ಸಿಂಪಲ್ ಆಗಿದೆ. 2-3 ವರ್ಷ ಹಳೆಯದಾದ ಫೋನ್‌ನ್ನು ಅವರು ಬಳಸುತ್ತಾರೆ. ಫೋನಗ ಬಗ್ಗೆಯೂ ಅವರಿಗೆ ಆಸಕ್ತಿ ಇಲ್ಲ. ಕಾರ್, ಬಟ್ಟೆ ಬಗ್ಗೆಯೂ ಅವರಿಗೆ ಒಲವಿಲ್ಲ. ಮನೆಯಲ್ಲಿ ಹೊಸದಾದ Gadgets ಇರಬೇಕು ಎಂಬುದು ಕೂಡ ಇಲ್ಲ. ಸಿನಿಮಾ ಅಂದ್ರೆ ಅವರಿಗೆ ತುಂಬ ಇಷ್ಟ. 2-3 ಗಂಟೆಗಳ ಕಾಲ ಅವರನ್ನು ಫ್ರೀ ಆಗಿ ಬಿಟ್ಟರೆ ಅವರು ಸಿನಿಮಾ ನೋಡುತ್ತಿರುತ್ತಾರೆ" ಎಂದು ಆಯುಷ್ ಶರ್ಮಾ ಅವರು ಸಲ್ಮಾನ್ ಖಾನ್ ಬಗ್ಗೆ ಹೇಳಿದ್ದಾರೆ.

ಹಸಿಬಿಸಿ ದೃಶ್ಯದ ಶೂಟಿಂಗ್; ನನ್ನ ಪತ್ನಿ, ಮಕ್ಕಳು ನೋಡುತ್ತಾರೆ ಎಂದ ಸಲ್ಮಾನ್ ಖಾನ್ ತಂಗಿ ಗಂಡ ಆಯುಷ್ ಶರ್ಮಾ

ಸಲ್ಮಾನ್ ಖಾನ್‌ಗೆ ಮದುವೆ ಆಗದಿರೋದೆ ಚಿಂತೆಯಾಗಿದೆ: ಮಹೇಶ್ ಮಂಜ್ರೇಕರ್

ಈ ಹಿಂದೆ 'Antim: The Final Truth' ಸಿನಿಮಾ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರು ಮಾತನಾಡಿ "ಸಲ್ಮಾನ್ ಖಾನ್ ನಗು ಹಿಂದೆ ಒಂದು ಏಕಾಂಗಿತನ ಇದೆ ಅಂತ ನನಗೆ ಅನಿಸಿದೆ. ಸಲ್ಮಾನ್ ಖಾನ್‌ಗೆ ಅಷ್ಟಾಗಿ ಯಾವುದೇ ಆಸೆಗಳಿಲ್ಲ. ಮುಂಬೈನಲ್ಲಿ ಒಂದು ಬೆಡ್‌ರೂಮ್ ಫ್ಲಾಟ್‌ನಲ್ಲಿ ಸಲ್ಮಾನ್ ಇರುತ್ತಾರೆ. ನಾನು ಹೋದಾಗಲೆಲ್ಲ ಅವನು ಡ್ರಾವಿಂಗ್ ರೂಮ್‌ನಲ್ಲಿರುವ ಸೋಫಾ ಮೇಲೆ ಮಲಗಿರುತ್ತಾನೆ. ಸಹಜವಾಗಿ ವ್ಯಕ್ತಿಯೊಬ್ಬ ಮಾತನಾಡಲಾಗದ್ದನ್ನು ನಾನು ಸಲ್ಮಾನ್ ಖಾನ್ ಬಳಿ ಮಾತನಾಡುವೆ. ಸಲ್ಮಾನ್ ಖಾನ್ ಮದುವೆಯಾಗದಿರೋದು ನನಗೆ ಚಿಂತೆಯಾಗಿದೆ. ನಾಳೆ ನಾನು ಸಲ್ಮಾನ್ ಮಗನನ್ನು ನೋಡಲು ಬಯಸುವೆ. ಸಲ್ಮಾನ್ ಈ ಮಾತನ್ನು ಅವನು ತಳ್ಳಿಹಾಕಿದರೂ ಕೂಡ ಅವನಿಗೆ ಯಾರಾದರೂ ಬೇಕು ಎಂದು ಬಯಸುವೆ" ಎಂದು ಹೇಳಿದ್ದರು.

ಸಾಕಷ್ಟು ನಟಿಯರ ಜೊತೆ ಸಲ್ಮಾನ್ ಖಾನ್ ಡೇಟ್ ಮಾಡಿದ್ರು!

ಸಲ್ಮಾನ್ ಖಾನ್‌ ಹೆಸರು ಸಾಕಷ್ಟು ನಟಿಯರ ಜೊತೆ ಥಳುಕು ಹಾಕಿಕೊಂಡಿತ್ತು. ಐಶ್ವರ್ಯಾ ರೈ, ಕತ್ರಿನಾ ಕೈಫ್‌ ಜೊತೆಯೂ ಸಲ್ಮಾನ್ ಡೇಟ್ ಮಾಡಿದ್ದರಂತೆ, ಈ ಹಿಂದೆಯೇ ಒಮ್ಮೆ ಸಲ್ಮಾನ್ ಮದುವೆ ತಯಾರಿ ಕೂಡ ನಡೆದಿತ್ತಂತೆ. ಇನ್ನು ಲೂಲಿಯಾ ವಂಟೂರ್ ಜೊತೆ ಸದ್ಯ ಸಲ್ಮಾನ್ ಹೆಸರು ಕೇಳಿಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌