ಆ್ಯಪ್ನಗರ

'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರಕ್ಕೆ ಕಾಂಗ್ರೆಸ್ ವಿರೋಧ: ಅನುಪಮ್‌ ಖೇರ್ ಹೇಳಿದ್ದೇನು ಗೊತ್ತಾ?

ಅನುಪಮ್‌ ಖೇರ್‌ ನಟನೆಯ ಬಹು ನಿರೀಕ್ಷಿತ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಟ್ರೇಲರ್‌ ಗುರುವಾರ ಬಿಡುಗಡೆಯಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಅಭಿನಯಿಸಿರುವ ಬಾಲಿವುಡ್‌ ಹಿರಿಯ ನಟ ಅನುಪಮ್ ಖೇರ್‌ ಈ ಚಿತ್ರದಲ್ಲಿ ಸಂಪೂರ್ಣವಾಗಿ ಮಾಜಿ ಪ್ರಧಾನಿಯಾಗಿ ರೂಪಾಂತರಗೊಂಡಿರುವುದಂತೆ ಕಾಣುತ್ತದೆ.

TIMESOFINDIA.COM 28 Dec 2018, 4:04 pm

ಹೈಲೈಟ್ಸ್‌:

  • 'ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ಚಿತ್ರಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ
  • ಐತಿಹಾಸಿಕ ಚಿತ್ರಗಳಲ್ಲಿ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದ ಅನುಪಮ್‌ ಖೇರ್‌
  • ಪುಸ್ತಕ ಬಿಡುಗಡೆಗೆ ಇರದ ವಿರೋಧ, ಚಿತ್ರಕ್ಕೆ ಯಾಕೆ ಎಂದು ಬಾಲಿವುಡ್‌ ನಟ ಪ್ರಶ್ನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಮುಂಬಯಿ: 'ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ಚಿತ್ರದ ಟ್ರೇಲರ್‌ ಬಿಡುಗಡೆಗೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರದ ನಟ ಅನುಪಮ್‌ ಖೇರ್‌, ''ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ'' ಎಂದಿದ್ದಾರೆ.
ಗುರುವಾರವಷ್ಟೇ ಬಿಡುಗಡೆಯಾದ 'ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ಚಿತ್ರ ಮನಮೋಹನ್‌ ಸಿಂಗ್‌ ಬಯೋಪಿಕ್‌ ಆಗಿದ್ದು, ನಟ ಅನುಪಮ್‌ ಖೇರ್‌ ಮಾಜಿ ಪ್ರಧಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ, ಚಿತ್ರದ ಟ್ರೇಲರ್‌ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದೂ ಕಾಂಗ್ರೆಸ್‌ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದೆ. ಮನಮೋಹನ್‌ ಸಿಂಗ್‌ ಸಹ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡಿದ್ದಾರೆ.


ಆದರೆ, ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅನುಪಮ್‌ ಖೇರ್‌, ''ಈ ಚಿತ್ರ 2004 - 2008 ರವರೆಗೆ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬರು ಬರೆದಿರುವ ಪುಸ್ತಕವನ್ನು ಆಧರಿಸಿ ಈ ಚಿತ್ರದ ನಿರ್ದೇಶನ ಮಾಡಲಾಗಿದೆ. ಅಲ್ಲದೆ, ಜಲಿಯಾನ್‌ ವಾಲಾ ಬಾಗ್ ಅಥವಾ ಹೋಲೋಕಾಸ್ಟ್‌ ಅಥವಾ ಇನ್ನಾವುದೇ ಐತಿಹಾಸಿಕ ಘಟನೆಗಳನ್ನು ಆಧರಿಸಿ ಚಿತ್ರ ಮಾಡಿದರೆ, ಅದರ ಇತಿಹಾಸ ಅಥವಾ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಇಲ್ಲೂ ಸಹ ಇದನ್ನೇ ಮಾಡಲಾಗಿದೆ'' ಎಂದು 63 ವರ್ಷದ ನಟ ತಿಳಿಸಿದ್ದಾರೆ.


''ಈ ಪುಸ್ತಕವನ್ನು ಅಂದಿನ ಪ್ರಧಾನಿಗೆ ಬಹಳ ಹತ್ತಿರವಿದ್ದ ವ್ಯಕ್ತಿಯೊಬ್ಬರು ಬರೆದಿದ್ದಾರೆ. ಅಲ್ಲದೆ, ಪುಸ್ತಕ ಬಿಡುಗಡೆ ಬಳಿಕವೂ ಜನ ಇದಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ, ಈಗ ಯಾಕೆ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿರುವುದು'' ಎಂದು ಅನುಪಮ್‌ ಖೇರ್‌ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಈ ಚಿತ್ರದಲ್ಲಿ ನಾನು ಒಬ್ಬ ನಟ ಅಷ್ಟೇ. ಇದಕ್ಕಾಗಿ ಬಹಳಷ್ಟು ಕಷ್ಟ ಪಟ್ಟಿದ್ದೇನೆ'' ಎಂದು ತಿಳಿಸಿದ್ದಾರೆ.

ಇನ್ನು, ''ಕಳೆದ ವರ್ಷ ಬಿಡುಗಡೆಯಾಗಿದ್ದ ಮಧುರ್ ಭಂಡಾರ್‌ಕರ್‌ ನಿರ್ದೇಶನದ ತುರ್ತು ಪರಿಸ್ಥಿತಿ ಬಗೆಗಿನ ಚಿತ್ರ 'ಇಂದು ಸರ್ಕಾರ್‌'ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆ ಚಿತ್ರ ಕೂಡ ಪುಸ್ತಕವನ್ನು ಆಧರಿಸಿದ್ದು'' ಎಂದು ತಮಗಾದ ನೋವನ್ನು ಬಾಲಿವುಡ್ ನಿರ್ದೇಶಕ ಮಧುರ್‌ ನೆನಪಿಸಿಕೊಂಡಿದ್ದಾರೆ.

'ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ಚಿತ್ರದ ಟ್ರೇಲರ್‌ ಬಿಡುಗಡೆಯಾದ ಬಳಿಕ ಈ ಚಿತ್ರಕ್ಕೆ ಮಹಾರಾಷ್ಟ್ರ ಯುವ ಕಾಂಗ್ರೆಸ್ ಘಟಕ ವಿರೋಧ ವ್ಯಕ್ತಪಡಿಸಿದ್ದು, ಚಿತ್ರ ಬಿಡುಗಡೆಗೂ ಮುನ್ನ ಪಕ್ಷದ ಮುಖಂಡರಿಗೆ ತೋರಿಸದಿದ್ದರೆ, ಚಿತ್ರವನ್ನು ತಡೆಯಲು ಬೇರೆ ಮಾರ್ಗ ಹಿಡಿಯುವುದಾಗಿ ಎಚ್ಚರಿಕೆ ನೀಡಿದ್ದರು. ಜತೆಗೆ, ಚಿತ್ರದ ಟ್ರೇಲರ್‌ನಲ್ಲಿರುವುದು ಸುಳ್ಳು ಎಂದೂ ತಗಾದೆ ತೆಗೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌