ಆ್ಯಪ್ನಗರ

'ನೆಪೊಟಿಸಂ ಗುಂಪಿಗೆ ನನ್ನ ಮಗನನ್ನು ಸೇರಿಸಬೇಡಿ'! ನೇರವಾಗಿ ಎಚ್ಚರಿಕೆ ನೀಡಿದ ಸ್ಟಾರ್‌ ನಟನ ತಾಯಿ!

ನೆಪೊಟಿಸಂ ಬಿರುಗಾಳಿ ಎಲ್ಲೆಡೆ ಜೋರಾಗಿದೆ. ಈ ವಿವಾದದಲ್ಲಿ ನಟ ಟೈಗರ್‌ ಶ್ರಾಫ್‌ ಹೆಸರು ಕೇಳಿಬಂದಿದೆ. ಅದಕ್ಕೆ ಅವರ ತಾಯಿ ಆಯೆಶಾ ಶ್ರಾಫ್‌ ಖಡಕ್‌ ಆಗಿ ತಿರುಗೇಟು ನೀಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

Vijaya Karnataka Web 27 Jul 2020, 5:59 pm
ಎಲ್ಲ ಭಾಷೆಯ ಚಿತ್ರರಂಗದಲ್ಲೂ ನೆಪೊಟಿಸಂ ಎಂಬ ಪದ ದೊಡ್ಡದಾಗಿ ಸೌಂಡು ಮಾಡುತ್ತಿದೆ. ಅಂದರೆ, ಸ್ವಜನ ಪಕ್ಷಪಾತದ ಬಗ್ಗೆ ಪರ-ವಿರೋಧ ಜೋರಾಗಿದೆ. ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದ ಕಲಾವಿದರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತವೆ ಎಂಬ ಆರೋಪ ಮಾಡುತ್ತಿದ್ದಾರೆ ಅನೇಕರು. ಬಾಲಿವುಡ್‌ನಲ್ಲಂತೂ ಈ ಕೆಸರೆರೆಚಾಟ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ.
Vijaya Karnataka Web anurag kashyap drags tiger shroff name into nepotism debate
'ನೆಪೊಟಿಸಂ ಗುಂಪಿಗೆ ನನ್ನ ಮಗನನ್ನು ಸೇರಿಸಬೇಡಿ'! ನೇರವಾಗಿ ಎಚ್ಚರಿಕೆ ನೀಡಿದ ಸ್ಟಾರ್‌ ನಟನ ತಾಯಿ!


ಹಿಂದಿ ಚಿತ್ರರಂಗದಲ್ಲಿ ನಟ ಟೈಗರ್‌ ಶ್ರಾಫ್‌ ಸಖತ್‌ ಜನಪ್ರಿಯತೆ ಗಳಿಸಿದ್ದಾರೆ. ಸಾಹಸ ಪ್ರಧಾನ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದಾರೆ. ಅವರ ತಂದೆ ಜಾಕಿ ಶ್ರಾಫ್‌ ಕೂಡ ಖ್ಯಾತ ನಟರು. ಹಾಗಾದರೆ ಟೈಗರ್‌ ಕೂಡ ನೆಪೊಟಿಸಂನ ಫಲಾನುಭವಿಯೇ? ಇಂಥ ಒಂದು ಅನುಮಾನದ ಪ್ರಶ್ನೆ ಸೋಶಿಯಲ್‌ ಮೀಡಿಯಾದಲ್ಲಿ ಹೆಡೆ ಎತ್ತಿದೆ. ಆದರೆ ಅದನ್ನು ಆ ಕೂಡಲೇ ಬಗ್ಗು ಬಡಿದಿದ್ದಾರೆ ಟೈಗರ್‌ ತಾಯಿ ಆಯೆಶಾ ಶ್ರಾಫ್‌.

ಇಷ್ಟಕ್ಕೆಲ್ಲ ಕಾರಣ ಆಗಿರುವುದು ನಿರ್ದೇಶಕ ಅನುರಾಗ್‌ ಕಶ್ಯಪ್‌ ಮಾಡಿದ ಒಂದೇ ಒಂದು ಟ್ವೀಟ್‌. 'ರಾಷ್ಟ್ರೀಯ ಮಾಧ್ಯಮದವರು ಮತ್ತು ವೀಕ್ಷಕರು ಕೂಡ ನೆಪೊಟಿಸಂ ಅನ್ನು ಪೋಷಿಸುತ್ತಾರೆ. ಹಾಗಾಗಿಯೇ ಸೈಫ್‌ ಅಲಿ ಖಾನ್‌ ಪುತ್ರ ತೈಮೂರ್‌ ಅಲಿ ಖಾನ್‌ ಹೆಚ್ಚು ಸುದ್ದಿ ಆಗುತ್ತಾನೆ. ಅವನನ್ನು ನೋಡಲು ಜನ ಬಯಸುತ್ತಾರೆ ಎಂಬುದಾದರೆ ಇದು ವೀಕ್ಷಕರ ನೆಪೊಟಿಸಂ ಅಲ್ಲವೇ?' ಎಂಬರ್ಥದಲ್ಲಿ ಅನುರಾಗ್‌ ಟ್ವೀಟ್‌ ಮಾಡಿದ್ದರು. ಅದರಲ್ಲಿ ತೈಮೂರ್‌ ಜೊತೆ ಟೈಗರ್‌ ಶ್ರಾಫ್‌ ಫೋಟೋ ಬಳಕೆ ಆಗಿತ್ತು.

also read: ನೆಪೊಟಿಸಂ ಎಂದರೆ ಏನು? ಸರಿಯಾಗಿ ವಿವರಿಸಿ ಹೇಳಿದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಹಿನಾ ಖಾನ್‌!

ಈ ಟ್ವೀಟ್‌ ಕಣ್ಣಿಗೆ ಕಾಣುತ್ತಿದ್ದಂತೆಯೇ ಟೈಗರ್‌ ಶ್ರಾಫ್‌ ತಾಯಿ ಆಯೆಶಾ ಗರಂ ಆಗಿದ್ದಾರೆ. 'ನನ್ನ ಮಗನನ್ನು ಇದರಲ್ಲಿ ಸಿಕ್ಕಿಹಾಕಿಸಬೇಡಿ. ಅವನು ಬೆಳೆದಿರುವುದು ಸಂಪೂರ್ಣ ಸ್ವಂತ ಪರಿಶ್ರಮದಿಂದ' ಎಂದು ಅವರು ಪ್ರತಿಕ್ರಿಯೆ ನೀಡಿದರು. ಕೂಡಲೇ ಎಚ್ಚೆತ್ತುಕೊಂಡ ಅನುರಾಗ್‌ ಕ್ಷಮೆ ಕೂಡ ಕೇಳಿದ್ದಾರೆ! 'ಕ್ಷಮಿಸಿ ಆಯೆಶಾ... ಮಾಧ್ಯಮದವರು ತೈಮೂರ್‌ನ ಹಿಂದೆ ಹೇಗೆ ಓಡುತ್ತಾರೆ ಎಂಬುದನ್ನು ಹೇಳುವುದು ನನ್ನ ಉದ್ದೇಶ ಆಗಿತ್ತು ಅಷ್ಟೇ. ನಿಮಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಇರಲಿ' ಎಂದು ಅನುರಾಗ್‌ ಕಶ್ಯಪ್‌ ಟ್ವೀಟ್‌ ಮಾಡಿದ್ದಾರೆ.

also read: ಅಲ್ಲು ಅರ್ಜುನ್ ಪುತ್ರ ಅಯಾನ್ ಮುದ್ದಾದ ಮನವಿಗೆ ಕರಗಿದ ಟೈಗರ್ ಶ್ರಾಫ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌