ಆ್ಯಪ್ನಗರ

ಅನುಷ್ಕಾಗೆ ಪಕ್ಕದ ಮನೆಯವರ ಕಾಟ

ನಮ್ಮ ನೆರೆಹೊರೆಯವರು ಕೆಲವೊಮ್ಮೆ ನಿಜವಾಗಿಯೂ ನಮಗೆ ಹೊರೆಯಾಗಿ ಬಿಡುತ್ತಾರೆ ಎನ್ನುವುದಕ್ಕೆ ವಿರಾಚ್‌ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ತಾಜಾ ಉದಾಹರಣೆ. ಬಾಲಿವುಡ್‌ನ ಬಾಕ್ಸ್‌ ಆಫೀಸ್‌ ಕ್ವೀನ್‌ಗೆ ನೆರೆಯವನೊಬ್ಬ ಹೊರೆಯಾಗಿ ಪರಿಣಮಿಸಿದ್ದಾನೆ.

Vijaya Karnataka Web 12 Apr 2017, 4:42 am
ನಮ್ಮ ನೆರೆಹೊರೆಯವರು ಕೆಲವೊಮ್ಮೆ ನಿಜವಾಗಿಯೂ ನಮಗೆ ಹೊರೆಯಾಗಿ ಬಿಡುತ್ತಾರೆ ಎನ್ನುವುದಕ್ಕೆ ವಿರಾಚ್‌ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ತಾಜಾ ಉದಾಹರಣೆ. ಬಾಲಿವುಡ್‌ನ ಬಾಕ್ಸ್‌ ಆಫೀಸ್‌ ಕ್ವೀನ್‌ಗೆ ನೆರೆಯವನೊಬ್ಬ ಹೊರೆಯಾಗಿ ಪರಿಣಮಿಸಿದ್ದಾನೆ.
Vijaya Karnataka Web anushka sharma facing problem
ಅನುಷ್ಕಾಗೆ ಪಕ್ಕದ ಮನೆಯವರ ಕಾಟ


ಮುಂಬಯಿನ ವೆರ್ಸೋವಾದಲ್ಲಿರುವ ಬದ್ರಿನಾಥ್‌ ಟವರ್‌ನ 20ನೇ ಮಹಡಿಯಲ್ಲಿ ವಾಸವಾಗಿರುವ ಅನುಷ್ಕಾ ಶರ್ಮಾ ಅಕ್ರಮವಾಗಿ ವಿದ್ಯುತ್‌ ಜಂಕ್ಷ ನ್‌ ಬಾಕ್ಸ್‌ನ್ನು ಹೊಂದಿದ್ದಾರೆಂದು ಅದೇ ಕಟ್ಟಡದ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಅನುಷ್ಕಾ ವಾಸಿಸುತ್ತಿರುವ ಕಟ್ಟಡದ 16 ಮತ್ತು 17ನೇ ಮಹಡಿಯ ನಿವಾಸಿ ಹಾಗೂ ಮಾಜಿ ಕಾರ್ಯದರ್ಶಿಯೂ ಆಗಿರುವ ಸುನೀಲ್‌ ಬಾತ್ರಾ, ಶರ್ಮಾ ಕುಟುಂಬಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.

ಈ ಕುರಿತು ಮುಂಬಯಿ ಮಹಾನಗರ ಪಾಲಿಕೆಗೆ ಪತ್ರವನ್ನೂ ಬರೆದಿರುವ ಬಾತ್ರಾ, ಅನುಷ್ಕಾ ಶರ್ಮಾ ಕಟ್ಟಡದ ಕೆಲವು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ. ತಾವು ಬರೆದ ಪತ್ರಕ್ಕೆ ಮಹಾನಗರ ಪಾಲಿಕೆ ಸ್ಪಂದಿಸಿದ್ದು, ಅನುಷ್ಕಾ ಶರ್ಮಾರಿಗೆ ಪತ್ರ ಬರೆದು ವಿದ್ಯುತ್‌ ಜಂಕ್ಷ ನ್‌ ಬಾಕ್ಸ್‌ನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ ಎಂದು ಬಾತ್ರಾ ಮುಂಬಯಿ ಮಿರರ್‌ಗೆ ತಿಳಿಸಿದ್ದಾರೆ.

ಆದರೆ ಅನುಷ್ಕಾ ಶರ್ಮಾ ವಕ್ತಾರರು ಮಾತ್ರ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಅನುಷ್ಕಾ ಶರ್ಮಾ ವಾಸಿಸುತ್ತಿರುವ ಮಹಡಿಯಲ್ಲಿ ಯಾವುದೇ ಅಕ್ರಮ ವಿದ್ಯುತ್‌ ಜಂಕ್ಷ ನ್‌ ಬಾಕ್ಸ್‌ ಇಲ್ಲ ಎಂದು ಹೇಳಿದ್ದಾರೆ. ಈಗ ಇರುವ ಜಂಕ್ಷ ನ್‌ ಬಾಕ್ಸ್‌ ಅನುಮತಿ ಪಡೆದ ನಂತರವಷ್ಟೇ ಅಳವಡಿಸಲಾಗಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌