ಆ್ಯಪ್ನಗರ

'ಅರ್ಜುನ್‌ ರೆಡ್ಡಿ' ನಟಿ ಶಾಲಿನಿ ಪಾಂಡೆ ಮತ್ತು ಆಮೀರ್‌ ಖಾನ್‌ ಮಗನ ಬಗ್ಗೆ ಕೇಳಿಬಂತು ಗುಸು ಗುಸು!

ದಕ್ಷಿಣ ಭಾರತದಲ್ಲಿ ಫೇಮಸ್‌ ಆಗಿರುವ ನಟಿ ಶಾಲಿನಿ ಪಾಂಡೆ ಅವರಿಗೂ ಬಾಲಿವುಡ್‌ಗೆ ಇನ್ನಷ್ಟೇ ಕಾಲಿಡಬೇಕಿರುವ ಆಮೀರ್‌ ಖಾನ್‌ ಪುತ್ರ ಜುನೈದ್‌ ಖಾನ್‌ಗೂ ಏನು ಸಂಬಂಧ? ಇಬ್ಬರ ಬಗ್ಗೆ ಕೇಳಿಬಂದ ಗಾಸಿಪ್‌ ಏನು? ಈ ಲೇಖನದಲ್ಲಿದೆ ಉತ್ತರ.

Vijaya Karnataka Web 8 Dec 2020, 10:16 pm
ಬಾಲಿವುಡ್‌ನ ಅನುಭವಿ ನಟ ಆಮೀರ್‌ ಖಾನ್‌ ಅವರ ಮೊದಲ ಪುತ್ರ ಜುನೈದ್‌ ಖಾನ್‌ ಬಣ್ಣದ ಲೋಕಕ್ಕೆ ಪ್ರವೇಶಿಸುವ ಬಗ್ಗೆ ಅನೇಕ ಅಂತೆ-ಕಂತೆಗಳು ಕೇಳಿಬರುತ್ತಲೇ ಇವೆ. ರಾಣಿ ಮುಖರ್ಜಿ ನಟಿಸಿದ್ದ 'ಹಿಚ್ಕಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಿದ್ದಾರ್ಥ್‌ ಮಲ್ಹೋತ್ರಾ ಅವರು ಜುನೈದ್‌ರ ಮೊದಲ ಚಿತ್ರಕ್ಕೆ ಆ್ಯಕ್ಷನ್‌-ಕಟ್ ಹೇಳುತ್ತಾರೆ ಎನ್ನಲಾಗಿದೆ. ಇದೇ ಚಿತ್ರಕ್ಕಾಗಿ ನಟಿ ಶಾಲಿನಿ ಪಾಂಡೆ ಹೆಸರು ಕೂಡ ಕೇಳಿಬರುತ್ತಿದೆ.
Vijaya Karnataka Web ಶಾಲಿನಿ ಪಾಂಡೆ  ಆಮೀರ್‌ ಖಾನ್‌


'ಅರ್ಜುನ್‌ ರೆಡ್ಡಿ' ಮನದರಸಿ ಶಾಲಿನಿ
ವಿಜಯ್‌ ದೇವರಕೊಂಡ ಜೊತೆ 'ಅರ್ಜುನ್‌ ರೆಡ್ಡಿ' ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡವರು ನಟಿ ಶಾಲಿನಿ ಪಾಂಡೆ. ಈಗ ಅವರಿಗೆ ಬಾಲಿವುಡ್‌ ಸಿನಿಮಾಗಳಿಂದಲೂ ಆಫರ್‌ಗಳು ಬರುತ್ತಿವೆ. ರಣವೀರ್‌ ಸಿಂಗ್‌ ನಾಯಕತ್ವದ 'ಜಯೇಶ್‌ ಬಾಯ್‌ ಜೋರ್ದಾರ್‌' ಚಿತ್ರಕ್ಕೆ ಶಾಲಿನಿ ನಾಯಕಿ. ಅದರ ಜೊತೆಗೆ ಜುನೈದ್‌ ನಟಿಸುವ ಮೊದಲ ಸಿನಿಮಾಗೂ ಅವರೇ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.

ಶಾಲಿನಿ ಕೈಯಲ್ಲಿವೆ 3 ಬಾಲಿವುಡ್‌ ಸಿನಿಮಾ!
'ಅರ್ಜುನ್‌ ರೆಡ್ಡಿ' ಸಿನಿಮಾದಿಂದ ಸಿಕ್ಕ ಭಾರಿ ಜನಪ್ರಿಯತೆಯ ಕಾರಣದಿಂದ ಶಾಲಿನಿ ಪಾಂಡೆ ಬಾಲಿವುಡ್‌ನಲ್ಲಿ ಮೂರು ಸಿನಿಮಾಗಳಿಗೆ ಆಯ್ಕೆ ಆಗಿದ್ದಾರೆ. ವಿಶೇಷ ಏನೆಂದರೆ ಅವರು ಸಹಿ ಮಾಡಿರುವ ಮೂರು ಸಿನಿಮಾಗಳು ಕೂಡ 'ಯಶ್‌ ರಾಜ್‌ ಫಿಲ್ಸ್ಮ್‌' ಬ್ಯಾನರ್‌ನಲ್ಲಿ ತಯಾರಾಗಲಿವೆ. ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಲೇ ಅವರಿಗೆ ಇಂಥ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ.

also read: ತಂದೆಗೆ ಫಿಟ್ನೆಸ್‌ ಪಾಠ ಹೇಳಿಕೊಡಲು ಬಂದ ಟ್ರೇನರ್‌ ಜೊತೆ ಆಮೀರ್‌ ಖಾನ್‌ ಪುತ್ರಿಯ ಪ್ರೀತಿ-ಪ್ರೇಮ?

ಆಮೀರ್‌ ಪುತ್ರನ ಮೇಲಿದೆ ನಿರೀಕ್ಷೆ
ನಟ ಆಮೀರ್‌ ಖಾನ್‌ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಮಗ ಜುನೈದ್ ಖಾನ್‌ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದು, ಅವರ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. 'ಯಶ್‌ ರಾಜ್‌ ಫಿಲ್ಸ್ಮ್‌' ಮೂಲಕ ಅವರು ರಂಗಪ್ರವೇಶ ಮಾಡುವುದಿಲ್ಲ ಎಂದು ಕೆಲವು ಕಡೆ ಗಾಸಿಪ್‌ ಹಬ್ಬಿತ್ತು. ಆದರೆ ಅವರು ಈ ಬ್ಯಾನರ್‌ನಲ್ಲೇ ಮೊದಲ ಸಿನಿಮಾ ಮಾಡುತ್ತಾರೆ ಎಂಬುದು ಬಲ್ಲ ಮೂಲಗಳಿಂದ ಖಚಿತ ಆಗಿದೆ. ಅತ್ತ, ಆಮೀರ್‌ ಪುತ್ರಿ ಇರಾ ಖಾನ್‌ ಸೋಶಿಯಲ್‌ ಮೀಡಿಯಾದಲ್ಲಿ ವೈಯಕ್ತಿಕ ಕಾರಣದಿಂದ ಸುದ್ದಿ ಆಗುತ್ತಿದ್ದಾರೆ.

also read: ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯಿಬಿಟ್ಟ ಆಮೀರ್ ಖಾನ್ ಮಗಳು ಇರಾ ಖಾನ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌