ಆ್ಯಪ್ನಗರ

ಮೊದಲ ದಿನ 10 ಲಕ್ಷ ಟಿಕೆಟ್‌ ಮಾರಾಟ; ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಅವೆಂಜರ್ಸ್'

2012ರಲ್ಲಿ ತೆರೆಗೆ ಬಂದ ದಿ ಅವೆಂಜರ್ಸ್‌ನ ನಾಲ್ಕನೇ ಅವತರಣಿಕೆಯಾದ ಈ ಕಾಮಿಕ್ಸ್‌ ಆಧಾರಿತ ಸಿನಿಮಾದ ಪ್ರೀ ಸೇಲ್‌ ಬುಕ್ಕಿಂಗ್‌ ಏ. 21ರಂದು ಆರಂಭವಾಗಿತ್ತು. ಪ್ರಮುಖ ಆನ್‌ಲೈನ್‌ ಬುಕ್ಕಿಂಗ್‌ ಸಂಸ್ಥೆ ಬುಕ್‌ಮೈ ಶೋದಲ್ಲಿ ಮೊದಲ ದಿನ 10 ಲಕ್ಷ ಟಿಕೆಟ್‌ ಮಾರಾಟವಾಗಿದೆ.

Vijaya Karnataka 24 Apr 2019, 7:43 pm
ಭಾರತದಲ್ಲಿ ಶುಕ್ರವಾರ ಬಿಡುಗಡೆಯಾಗಲಿರುವ ಹಾಲಿವುಡ್‌ ಸಿನಿಮಾ 'ಅವೆಂಜರ್ಸ್ ಎಂಡ್‌ಗೇಮ್‌' ಈಗ ದೇಶದೆಲ್ಲೆಡೆ ಭಾರೀ ಹವಾ ಎಬ್ಬಿಸಿದೆ. ಇದರ ಜ್ವರ ಎಷ್ಟಿದೆ ಎಂದರೆ ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟ ಆರಂಭವಾದ ಕೆಲವೇ ಗಂಟೆಗಳಲ್ಲಿ ಮೊದಲ ಎರಡು ದಿನಗಳ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಪ್ರೀ ರಿಲೀಸ್‌ ಗಳಿಕೆಯ ದಾಖಲೆಯನ್ನು ಬರೆದಿದೆ.
Vijaya Karnataka Web avengers


2012ರಲ್ಲಿ ತೆರೆಗೆ ಬಂದ ದಿ ಅವೆಂಜರ್ಸ್‌ನ ನಾಲ್ಕನೇ ಅವತರಣಿಕೆಯಾದ ಈ ಕಾಮಿಕ್ಸ್‌ ಆಧಾರಿತ ಸಿನಿಮಾದ ಪ್ರೀ ಸೇಲ್‌ ಬುಕ್ಕಿಂಗ್‌ ಏ. 21ರಂದು ಆರಂಭವಾಗಿತ್ತು. ಪ್ರಮುಖ ಆನ್‌ಲೈನ್‌ ಬುಕ್ಕಿಂಗ್‌ ಸಂಸ್ಥೆ ಬುಕ್‌ಮೈ ಶೋದಲ್ಲಿ ಮೊದಲ ದಿನ 10 ಲಕ್ಷ ಟಿಕೆಟ್‌ ಮಾರಾಟವಾಗಿದೆ. ಇದರ ತೀವ್ರತೆ ಎಷ್ಟಿತ್ತು ಎಂದರೆ ಪ್ರತಿ ಸೆಕೆಂಡಿಗೆ 18 ಟಿಕೆಟ್‌ಗಳು ಮಾರಾಟವಾಗಿದ್ದವು. ಅಷ್ಟೇ ಮಾರಾಟ ಆರಂಭವಾದ ಕೆಲವೇ ಕ್ಷಣಗಳಲ್ಲಿ ವೆಬ್‌ಸೈಟ್‌ ಕ್ರಾಶ್‌ ಆಗಿತ್ತು ಎನ್ನುವುದು ವಿಶೇಷ.

ಟಿಕೆಟ್‌ ಮಾರಾಟದ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆಯ ಕಡಿಮೆಯಿರುವುದು ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ. ಈ ಹಿಂದಿನ ಇನ್‌ಫಿನಿಟಿ ವಾರ್ಸ್‌ ಮತ್ತು ದಿ ಜಂಗಲ್‌ ಬುಕ್‌ನ ದಾಖಲೆಯನ್ನು ಗಳಿಕೆಯಲ್ಲಿ ಇದು ಮುರಿಯಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಅಮೆರಿಕದಲ್ಲಿ 500 ಡಾಲರ್‌ (ಸುಮಾರು 33,000 ಸಾವಿರ ರೂ.)ಗೆ ಮೊದಲ ಹಂತದಲ್ಲಿ ಟಿಕೆಟ್‌ ಆಫರ್‌ ಮಾಡಲಾಗಿತ್ತು. ಇದುದ ಕೂಡ ದಾಖಲೆಯಾಗಿದ್ದು, ತಕ್ಷಣವೇ ಲಕ್ಷಾಂತರ ಟಿಕೆಟ್‌ನ್ನು ಇಷ್ಟು ಮೊತ್ತ ತೆತ್ತು ಸಿನಿಮಾ ಪ್ರೇಮಿಗಳು ಖರೀದಿಸಿದ್ದಾರೆ. ಅಲ್ಲಿ ಇದು 645 ದಶ ಲಕ್ಷ ಡಾಲರ್‌ ಗಳಿಸುವ ನಿರೀಕ್ಷೆಯಿದೆ. ಆಂಟೋನಿ ರುಸೋ ಮತ್ತು ಜೋ ರುಸೋ ನಿರ್ದೇಶನದ ಈ ಚಿತ್ರಕ್ಕೆ ಅಮೆರಿಕದ ಪ್ರಮುಖ ಪತ್ರಿಕೆಗಳ ರಿವ್ಯೂನಲ್ಲಿ ನಾಲ್ಕಕ್ಕೆ ನಾಲ್ಕು ಸ್ಟಾರ್‌ ನೀಡಲಾಗಿದೆ.

ರಜನಿ ಸ್ಫೂರ್ತಿ : ಅವೆಂಜರ್ಸ್‌-ಎಂಡ್‌ ಗೇಮ್‌ನ ಹಿಂದಿನ ಅವತರಣಿಕೆ ಅವೆಂಜರ್ಸ್‌-ಏಜ್‌ ಆಫ್‌ ಅಲ್ಟ್ರಾನ್‌ಗೆæ ಸೂಪರ್‌ಸ್ಟಾರ್‌ ರಜನೀಕಾಂತ್‌ ಅಭಿನಯದ ರೊಬೋಟ್‌ ಸಿನಿಮಾವೇ ಸ್ಫೂರ್ತಿಯಂತೆ. ಈ ವಿಷಯವನ್ನು ಅವೆಂಜರ್ಸ್‌ನ ನಿರ್ದೇಶಕರಲ್ಲೊಬ್ಬರದಾ ಜೋ ರುಸೋ ಅವರೇ ಬಹಿರಂಗಪಡಿಸಿದ್ದಾರೆ.

'ಅವೆಂಜರ್ಸ್‌-ಏಜ್‌ ಆಫ್‌ ಅಲ್ಟ್ರಾನ್‌ನ ಕ್ಲೈಮ್ಯಾಕ್ಸ್‌ಗೆ ರೊಬೋಟ್‌ ಸಿನಿಮಾ ಬಹುತೇಕ ಸ್ಫೂರ್ತಿಯಾಗಿತ್ತು. ಕೊನೆಯ ದೃಶ್ಯದಲ್ಲಂತೂ ಎಲ್ಲಾ ಆಲ್ಟ್ರಾನ್‌ಗಳು ಹೊಡೆದಾಡುವ ದೃಶ್ಯವಿತ್ತು. ಇದನ್ನು ಎಡಿಟಿಂಗ್‌ ಟೇಬಲ್‌ನಲ್ಲಿ ಕಟ್‌ ಮಾಡಲಾಯಿತು. ಆದರೂ ಆ ದೃಶ್ಯ ರೊಬೋಟ್‌ನಿಂದ ನೇರವಾಗಿ ಪ್ರಭಾವಿತವಾಗಿತ್ತು' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌