ಆ್ಯಪ್ನಗರ

ದಾಖಲೆ ಬರೆದ 'ಬಾಹುಬಲಿ 2' ಮೋಷನ್‌ ಪೋಸ್ಟರ್‌

ಎಸ್‌.ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರ ಹುಟ್ಟುಹಾಕಿರುವ ಕ್ರೇಜ್‌ ಅಷ್ಟಿಷ್ಟಲ್ಲ.

ವಿಕ ಸುದ್ದಿಲೋಕ 28 Feb 2017, 2:41 pm
ಎಸ್‌.ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರ ಹುಟ್ಟುಹಾಕಿರುವ ಕ್ರೇಜ್‌ ಅಷ್ಟಿಷ್ಟಲ್ಲ. ಅದಕ್ಕೆ ಸಾಕ್ಷಿ ಮಹಾ ಶಿವರಾತ್ರಿಯಂದು ಬಿಡುಗಡೆಯಾದ ಹೊಸ ಮೋಷನ್‌ ಪೋಸ್ಟರ್.
Vijaya Karnataka Web baahubali 2 motion poster made a new record
ದಾಖಲೆ ಬರೆದ 'ಬಾಹುಬಲಿ 2' ಮೋಷನ್‌ ಪೋಸ್ಟರ್‌


Presenting you the India's Most Viewed and Likes Motion Poster - #Baahubali2 !!!#Prabhas @BaahubaliMovie 👏 pic.twitter.com/7AfEmj1b0N — Prabhas (@PrabhasRaju) February 27, 2017 ನಟ ಪ್ರಭಾಸ್‌ ಆನೆಯ ಸೊಂಡಿಲಿನ ಮೇಲೆ ನಿಂತಿರುವ ಈ ಪೋಸ್ಟರ್‌ ಟ್ವಿಟ್ಟರ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ಅದರ ಜತೆ ಹೊಸ ದಾಖಲೆಗಳಿಗೂ ಕಾರಣವಾಗಿರುವುದು ಮತ್ತೊಂದು ವಿಶೇಷದ ಸಂಗತಿ. ಈ ಮೋಷನ್‌ ಪೋಸ್ಟರ್‌ ರಿಲೀಸ್‌ ಆದ 76 ಗಂಟೆಗಳಲ್ಲಿ 60 ಲಕ್ಷ ಜನ ವೀಕ್ಷಿಸಿದ್ದಾರಂತೆ.

ಟಾಲಿವುಡ್‌ ಚಿತ್ರರಂಗವಷ್ಟೇ ಅಲ್ಲ ಬಾರತ ಚಿತ್ರರಂಗದಲ್ಲೂ ಹೊಸ ದಾಖಲೆ ನಿರ್ಮಿಸಿದೆಯಂತೆ ಈ ಪೋಸ್ಟರ್‌. ಬರೀ ಮೂರೇ ದಿನದಲ್ಲಿ 60 ಲಕ್ಷ ಜನ ವೀಕ್ಷಿಸಿದ ಮೊದಲ ಟಾಲಿವುಡ್‌ ಮೋಷನ್‌ ಪೋಸ್ಟರ್‌ ಇದಾಗಿದೆ. ಅಷ್ಟೇ ಅಲ್ಲದೆ ಅತಿ ಹೆಚ್ಚು ಲೈಕ್ಸ್‌ ಪಡೆದ ಭಾರತದ ಮೊದಲ ಮೋಷನ್‌ ಪೋಸ್ಟರ್‌ ಕೂಡ ಆಗಿರುವುದು ನಿಜಕ್ಕೂ ಗ್ರೇಟ್‌.

ಈ ಸಂತಸವನ್ನು ಬಾಹುಬಲಿ ಚಿತ್ರದ ನಾಯಕ ಪ್ರಭಾಸ್‌ ತಮ್ಮ ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ಮೊದಲು ತೆರೆಕಂಡ 'ಬಾಹುಬಲಿ' ಚಿತ್ರದ ಮುಂದುವರಿದ ಭಾಗವೇ 'ಬಾಹುಬಲಿ 2'. ಪ್ರಭಾಸ್‌, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಭಾಟಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರ ಏಪ್ರೀಲ್‌ನಲ್ಲಿ ಬಿಡುಗಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌