ಆ್ಯಪ್ನಗರ

ಬಾಹುಬಲಿ ಬಲ್ಲಾಳದೇವನಿಗೆ ಜೈಹೋ ಎಂದ ಜಪಾನ್ ಅಭಿಮಾನಿಗಳು

ಟಾಲಿವುಡ್ ನಟ ರಾಣಾ ದಗ್ಗುಬಾಟಿಗೆ ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಜಪಾನ್‌ನ ಅಭಿಮಾನಿಗಳು ಇತ್ತೀಚೆಗೆ ರಾಣಾರ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.

Vijaya Karnataka Web 16 Dec 2019, 5:53 pm
'ಬಾಹುಬಲಿ' ಸಿನಿಮಾದ ಬಲ್ಲಾಳದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿಗೆ ಅಭಿಮಾನಿಗಳು ಕೇವಲ ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಸಾಕಷ್ಟು ಸಂಖೆಯಲ್ಲಿದ್ದಾರೆ. ಬಾಹುಬಲಿ ಸಿನಿಮಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಇದು ಎಷ್ಟರ ಮಟ್ಟಿಗೆ ಎಂದರೆ ಜಪಾನ್‌ನಲ್ಲೂ ರಾಣಾಗೆ ಅಭಿಮಾನಿ ದೇವರುಗಳು ಹುಟ್ಟಿಕೊಂಡಿದ್ದಾರೆ.
Vijaya Karnataka Web ರಾಣ ದಗ್ಗುಬಾಟಿ


ಎಸ್ ಎಸ್ ರಾಜಮೌಳಿ, ಪ್ರಭಾಸ್ ಜೊತೆಗೆ ಈಗ ರಾಣಾ ದಗ್ಗುಬಾಟಿಯನ್ನೂ ತಾವು ಆರಾಧಿಸುವ ನಟನ ಪಟ್ಟಿಯಲ್ಲಿ ಸ್ಥಾನ ನೀಡಿದ್ದಾರೆ. ರಾಣಾ ಇತ್ತೀಚೆಗೆ ಜಪಾನ್‍ಗೆ ಭೇಟಿ ನೀಡಿ ಅಲ್ಲಿನ ಅಭಿಮಾನಿಗಳನ್ನು ಭೇಟಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಜಪಾನ್ ಅಭಿಮಾನಿಗಳು ರಾಣಾ ದಗ್ಗುಬಾಟಿಯ 35ನೇ ಹುಟ್ಟುಹಬ್ಬವನ್ನು ಜಪಾನ್‌ನಲ್ಲಿ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ರಾಣಾ ಫೋಟೋಗಳು, ಕಟೌಟ್‌ಗಳನ್ನು ಕೊಠಡಿಯೊಂದರಲ್ಲಿ ಅಲಂಕರಿಸಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತೆಗೆಯಲಾದ ಫೋಟೋಗಳನ್ನು ಜಪಾನ್ ಅಭಿಮಾನಿಗಳು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿರುವ ರಾಣಾ ಆ ಟ್ವೀಟ್‍ ಲೈಕ್ ಮಾಡಿದ್ದಾರೆ. ಜಪಾನ್ ಅಭಿಮಾನಿಗಳ ಟ್ವೀಟ್, ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ನನಗೆ ಬಲಗಣ್ಣು ಕಾಣುವುದಿಲ್ಲ: ರಾಣಾ ದಗ್ಗುಬಾಟಿ

ರಾಣಾ ಕಳೆದ ವರ್ಷ ಎನ್‍ಟಿಆರ್ ಬಯೋಪಿಕ್‌ನಲ್ಲಿ ಅಭಿನಯಿಸಿದ್ದರು. ಬಾಲಿವುಡ್ ಸಿನಿಮಾ ಹೌಸ್‍ಫುಲ್ 4ರಲ್ಲೂ ರಂಜಿಸಿದ್ದಾರೆ. ಸದ್ಯಕ್ಕೆ ಅವರು ವಿರಾಟಪರ್ವಂ ಹಾಗೂ 1945 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ರಾಣಾಗೆ ಕಿಡ್ನಿ ಸಮಸ್ಯೆ ಇದೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿತ್ತು. ಇದಕ್ಕಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಹೇಳಲಾಗಿತ್ತು. ರಾಣಾ ಬ್ರಾಂಡ್ ಒಂದರ ಪ್ರಚಾರಕ್ಕಾಗಿ ಲೇಟೆಸ್ಟ್ ಫೋಟೋ ಒಂದನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಕಂಗಾಲಾಗಿದ್ದರು.

ಭಾಷೆಗಳನ್ನು ಮೀರಿನಿಂತ ಬಾಹುಬಲಿ
"ರಾಣಾ ದಗ್ಗುಬಾಟಿಗೆ ಏನಾಗಿದೆ?" ಎಂದು ಅಭಿಮಾನಿಗಳು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳಿದ್ದರು. ರಾಣ ದಗ್ಗುಬಾಟಿ ಸಾಕಷ್ಟು ತೂಕ ಕಳೆದುಕೊಂಡಿದ್ದು ಫೋಟೋದಲ್ಲಿ ತೆಳ್ಳಗೆ ಕಾಣುತ್ತಿರುವುದೇ ಈ ಅನುಮಾನಗಳಿಗೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌