ಆ್ಯಪ್ನಗರ

ಪ್ರಭಾಸ್ 'ಸಾಹೋ' ಚಿತ್ರದಲ್ಲಿ ಬಳಸಿದ ಬೈಕ್ ಬೆಲೆ 'ಓಹೋ' ಅಂತೀರ!

ಸಾಹೋ ಚಿತ್ರದಲ್ಲಿ ಬಹಳ ಗಮನ ಸೆಳೆಯುತ್ತಿರುವುದು ಪ್ರಭಾಸ್ ಬೈಕ್. ಪ್ರಭಾಸ್ ಈ ಚಿತ್ರದಲ್ಲಿ ದುಬಾರಿ ಬೈಕ್ ಬಳಸಿದ್ದು, ಅದರ ಬೆಲೆ 10.55 ಲಕ್ಷ ಅಂತೆ. ಪ್ರಭಾಸ್ ಗಾಗಿ ಈ ಬೈಕ್‌ಗೆ ಸ್ಪೆಷಲ್ ಟಚ್ ನೀಡಿದ್ದು, ಕಥೆಗೆ ಮತ್ತು ಚಿತ್ರಕ್ಕೆ ತಕ್ಕಂತೆ ಮೇಕ್ ಓವರ್ ಮಾಡಲಾಗಿದೆ. ಅಂದಹಾಗೆ, ಈ ಬೈಕಿನ ಹೆಸರು 'ಟ್ರಿಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್.

Vijaya Karnataka Web 4 Apr 2019, 5:59 pm
ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ನಂತರ ನಟ ಪ್ರಭಾಸ್ 'ಸಾಹೋ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರದ ಶೂಟಿಂಗ್ ಮುಗಿದಿದ್ದು, ನಟ ಪ್ರಭಾಸ್ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾ ಅತಿ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಕೇವಲ ಒಂದು ಆಕ್ಷನ್ ದೃಶ್ಯಕ್ಕಾಗಿಯೇ 100 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಕರಣ್ ಜೋಹರ್, ವಂಶಿ ಕೃಷ್ಣ ರೆಡ್ಡಿ, ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.
Vijaya Karnataka Web prabas0404


ತೆಲುಗು ಮತ್ತು ಹಿಂದಿಯಲ್ಲಿ ತೆರೆಗೆ ಬರಲಿರುವ ಈ ಸಿನಿಮಾ ಹಾಲಿವುಡ್ ರೇಂಜ್‌ನಲ್ಲಿ ತಯಾರಾಗಿದೆ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಅದ್ದೂರಿ ನಿರ್ಮಾಣದ ಟೀಸರ್, ಮೇಕಿಂಗ್ ದೃಶ್ಯಗಳು ಸಿನಿಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿವೆ. ಹೀಗೆ, ಪ್ರತಿಯೊಂದು ವಿಷ್ಯದಲ್ಲೂ ಸದ್ದು ಮಾಡ್ತಿರುವ ಸಾಹೋ ಈಗ ಬೈಕ್ ವಿಚಾರದಲ್ಲಿ ಭಾರಿ ಚರ್ಚೆಯಾಗ್ತಿದೆ.

ಹೌದು, ಸಾಹೋ ಚಿತ್ರದಲ್ಲಿ ಬಹಳ ಗಮನ ಸೆಳೆಯುತ್ತಿರುವುದು ಪ್ರಭಾಸ್ ಬೈಕ್. ಪ್ರಭಾಸ್ ಈ ಚಿತ್ರದಲ್ಲಿ ದುಬಾರಿ ಬೈಕ್ ಬಳಸಿದ್ದು, ಅದರ ಬೆಲೆ 10.55 ಲಕ್ಷ ಅಂತೆ. ಪ್ರಭಾಸ್ ಗಾಗಿ ಈ ಬೈಕ್‌ಗೆ ಸ್ಪೆಷಲ್ ಟಚ್ ನೀಡಿದ್ದು, ಕಥೆಗೆ ಮತ್ತು ಚಿತ್ರಕ್ಕೆ ತಕ್ಕಂತೆ ಮೇಕ್ ಓವರ್ ಮಾಡಲಾಗಿದೆ. ಅಂದಹಾಗೆ, ಈ ಬೈಕಿನ ಹೆಸರು 'ಟ್ರಿಂಪ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್.
ಈ ಬೈಕ್ ಬೆಲೆ 10.55 ಲಕ್ಷಗಳು ಎನ್ನಲಾಗಿದೆ. ಆನ್ ರೋಡ್ ಬೆಲೆ ಹೆಚ್ಚು ಕಡಿಮೆ 11 ಲಕ್ಷ ದಾಟಬಹುದು. 776 ಸಿಸಿ ತ್ರಿ ಸಿಲಿಂಡರ್ ಇಂಜಿನ್ ಹೊಂದಿರುವ ಈ ಬೈಕ್ ಅತಿ ಹೆಚ್ಚು ಪವರ್ ಹೊಂದಿದೆ. ಡ್ಯುಯಲ್ ಡಿಸ್ಕ್ ಬ್ರೇಕ್ ಆಯ್ಕೆ ಇರುವ ಈ ಬೈಕ್ 166 ಕೆಜಿ ತೂಕ ಇದೆ.

ಈ ಬೈಕ್ ಬಳಕೆ ಮಾಡಿರುವ ಆಕ್ಷನ್ ದೃಶ್ಯವೂ ಸೇರಿದಂತೆ, ಈ ಚಿತ್ರದ ಆಕ್ಷನ್ ಸೀನ್‌ಗೆ ಬರೋಬ್ಬರಿ 100 ಕೋಟಿ ಋಉ. ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು 300 ಕೋಟಿ ಬಿಗ್ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಿದ್ದು, ಆಕ್ಷನ್ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆಯಂತೆ. ಇನ್ನು, ಈ ಚಿತ್ರದ ಇಂಟರ್‌ವಲ್ ದೃಶ್ಯಕ್ಕೆ ಬರೊಬ್ಬರಿ 30 ಕೋಟಿ ಖರ್ಚು ಮಾಡಲಾಗಿದೆಯಂತೆ. ಈ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡಿದ್ದಾರೆ. ಚಿತ್ರವು ಆಗಸ್ಟ್ 15 ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ ಎನ್ನಲಾಗಿದೆ.

ಸಾಹೋ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದು, ನೀಲ್ ನಿತೀನ್ ಮುಖೇಶ್, ಅರುಣ್ ವಿಜಯ್, ಜಾಕಿ ಶ್ರಾಫ್, ಮಂದಿರಾ ಬೇಡಿ, ಆದಿತ್ಯ ಶ್ರೀಸ್ತವ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌