ಆ್ಯಪ್ನಗರ

ಅಮಿತಾಭ್ ಬಚ್ಚನ್‌ಗೆ ಅನಾರೋಗ್ಯ: ಸಂಡೇ ದರ್ಶನ್ ಕ್ಯಾನ್ಸಲ್!

ಕಳೆದ 36 ವರ್ಷಗಳಿಂದಲೂ ಅಮಿತಾಭ್ ಮುಂಬೈನ ತಮ್ಮ ನಿವಾಸದಲ್ಲಿ ಭಾನುವಾರಗಳಂದು ತಪ್ಪದೇ ದರ್ಶನ ನೀಡುತ್ತಾರೆ. ಆದರೆ ನಿನ್ನೆ ದಿನ ಇದು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಬರೆದುಕೊಂಡಿದ್ದಾರೆ. ಆದರೆ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕಗೊಳ್ಳಬೇಕಿಲ್ಲ ಎಂದು ಸಹ ಅವರು ಹೇಳಿದ್ದಾರೆ.

Vijaya Karnataka Web 6 May 2019, 2:10 pm
ಬಾಲಿವುಡ್ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸ್ವತಃ ಅಬಿತಾಭ್ ಈ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಬಹಿರಂಗಗೊಳಿಸಿದ್ದಾರೆ. ಹೌದು, ನಟ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರು ಅವರಿಗೆ ವಿಶ್ರಾಂತಿಗೆ ಸೂಚಿಸಿದ್ದಾರೆ.
Vijaya Karnataka Web amitabh0605


ಅಮಿತಾಭ್ ಮೈ ಕೈ ನೋವು ಹಾಗೂ ಸುಸ್ತಿನಿಂದ ಬಳಲುತ್ತಿದ್ದು ಮುಂಬೈನ ತಮ್ಮ ಜಲ್ಸಾ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ನಿನ್ನೆ (ಭಾನುವಾರ, ಮೇ 05 ) ದಿನ ಅವರು ಅಭಿಮಾನಿಗಳನ್ನು ಭೇಟಿಯಾಗಲಿಲ್ಲ. ಪ್ರತಿ ಭಾನುವಾರದಂದು ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಸ್ವಗೃಹದಲ್ಲಿ ಬಂದ ಅಭಿಮಾನಿಗಳನ್ನು ಭೇಟಿಯಾಗಿಮಾತುಕತೆ ನಡೆಸುತ್ತಾರೆ. ಆದರೆ, ನಿನ್ನೆ ಅದು ಸಾಧ್ಯವಾಗಲಿಲ್ಲ.

ಕಳೆದ 36 ವರ್ಷಗಳಿಂದಲೂ ಅಮಿತಾಭ್ ಮುಂಬೈನ ತಮ್ಮ ನಿವಾಸದಲ್ಲಿ ಭಾನುವಾರಗಳಂದು ತಪ್ಪದೇ ದರ್ಶನ ನೀಡುತ್ತಾರೆ. ಆದರೆ ನಿನ್ನೆ ದಿನ ಇದು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಬರೆದುಕೊಂಡಿದ್ದಾರೆ. ಆದರೆ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕಗೊಳ್ಳಬೇಕಿಲ್ಲ ಎಂದು ಸಹ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ಎಪ್ಪತ್ತಕ್ಕೂ ಮೀರಿದ ವಯಸ್ಸಿನಲ್ಲೂ ಆರಾಮಾಗಿ ನಟಿಸಿಕೊಂಡಿದ್ದ ನಟ ಅಮಿತಾಭ್ ಅವರು ಇದೀಗ ಸ್ವಲ್ಪ ಖಾಯಿಲೆಗೆ ಬಿದ್ದಿದ್ದಾರೆ. ಆದರೆ ಅದೇನೂ ಅಂಥ ಸೀರಿಯಸ್ ಸಂಗತಿಯಾಗಿಲ್ಲ. ಈಗಲೂ ಯುವಕರು ಕೂಡ ನಾಚುವಂತೆ ಎನರ್ಜಿ ಉಳಿಸಿಕೊಂಡಿರುವ ನಟ ಅಮಿತಾಭ್ ಅದೆಷ್ಟೋ ಹೊಸ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎನ್ನಬಹುದು.

ಅಂದಹಾಗೆ, ನಟ ಅಮಿತಾಭ್ ಬಚ್ಚನ್ ಅವರು ಮಣಿರತ್ನಂ ನಿರ್ದೇಶನದ ಮುಂಬರುವ ತಮಿಳು ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಬಿಗ್ ಬಿ ಸೊಸೆ ಐಶ್ವರ್ಯ ರೈ ಸಹ ಆ ಚಿತ್ರದಲ್ಲಿ ನಟಿಸಲಿದ್ದಾರೆ. ಅದೊಂದು ಬಹುತಾರಾಗಣ ಹಾಗೂ ಬಿಗ್ ಬಜೆಟ್ ಚಿತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌