ಆ್ಯಪ್ನಗರ

ಮದುವೆಯಾದಾಗ ಜಗತ್ತಿಗೇ ತಿಳಿಸುತ್ತೇನೆ: ನಟ ಅರ್ಜನ್ ಕಪೂರ್

"ನಾನು ಮದುವೆಯಾಗಿಲ್ಲ; ಒಮ್ಮೆ ನಾನು ಮದುವೆ ಆಗುವುದಾದರೆ ಅದನ್ನು ಮುಕ್ತವಾಗಿ ತಿಳಿಸುತ್ತೇನೆ. ನನ್ನ ಮದುವೆಯನ್ನು ಮುಚ್ಚಿಡುವ ಯಾವುದೇ ಅನಿವಾರ್ಯತೆ ನನಗಿಲ್ಲ. ಜನರಿಂದ ಅಡಗಿಸಿಡುವ ವಿಷಯವೂ ಅದಲ್ಲ. ನಾನು ಯಾವುದೇ ಸಂಗತಿಯನ್ನೂ ಅಡಗಿಸಿಡಲು ಪ್ರಯತ್ನಿಸುತ್ತಿಲ್ಲ. ಆದ್ದರಿಂದ ಮದುವೆ ವಿಷಯವನ್ನೇಕೆ ಅಡಗಿಸಿಡಲಿ" ಎಂದು ಅರ್ಜುನ್‌ ಪ್ರಶ್ನಿಸಿದ್ದಾರೆ.

Vijaya Karnataka Web 13 May 2019, 4:15 pm
ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ಸಖತ್ ಗರಂ ಆಗಿದ್ದಾರೆ. ನಟ ಅರ್ಜನ್ ಕಪೂರ್ ಅವರು ಮಲೈಕಾ ಅರೋರಾ ಅವರನ್ನು ಮದುವೆಯಾಗುತ್ತಾರೆ ಎಂಬ ವದಂತಿ ಬಹಳಷ್ಟು ದಿನಗಳಿಂದ ಹರಿದಾಡುತ್ತಿದೆ. ಈ ವದಂತಿಗಳನ್ನು ಮಾಧ್ಯಮಗಳು ಸಹಜವಾಗಿ ಪ್ರಕಟಿಸುತ್ತಿವೆ. ಆದರೆ, ತಾವು ಮದುವೆಯಾಗುವ ವದಂತಿಗಳನ್ನು ನಟ ಅರ್ಜುನ್‌ ಕಪೂರ್‌ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. "ನಾನು ಮದುವೆಯಾದಾಗ ಇಡೀ ಜಗತ್ತಿಗೇ ತಿಳಿಸುತ್ತೇನೆ" ಎಂದು ಅರ್ಜನ್ ಖಡಕ್‌ ಆಗಿ ಹೇಳಿದ್ದಾರೆ.

ನಟ ಅರ್ಜುನ್‌ ಕಪೂರ್‌ ಅವರು ಬಾಲಿವುಡ್ ನಟಿ-ಮಾಡೆಲ್ ಮಲೈಕಾ ಅರೋರಾ ಅವರನ್ನು ವಿವಾಹವಾಗಲು ಸಜ್ಜಾಗಿದ್ದಾರೆ ಎಂಬ ವದಂತಿಗಳು ಬಾಲಿವುಡ್‌ನಲ್ಲಿ ಬಹಳ ಕಾಲದಿಂದ ಹರಿದಾಡುತ್ತಿದೆ. ಈ ಬಗ್ಗೆ ಈಗಾಗಲೇ ನಟಿ ಮಲೈಕಾ ಸ್ಪಷ್ಟನೆ ಕೊಟ್ಟಿದ್ದು, ತಾವಿಬ್ಬರು ಜಸ್ಟ್ ಡೇಟಿಂಗ್ ಮಾಡುತ್ತಿದ್ದು, ಸದ್ಯಕ್ಕೆ ಮದುವೆಯಾಗುವ ಯಾವುದೇ ಯೋಚನೆ ಇಲ್ಲ ಎಂದಿದ್ದರು. ಇದೀಗ ಈ ಸುದ್ದಿಗೆ ನಟ ಅರ್ಜನ್ ತೀವ್ರ ಕೋಪಗೊಂಡಿದ್ದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

"ನಾನು ಮದುವೆಯಾಗಿಲ್ಲ; ಒಮ್ಮೆ ನಾನು ಮದುವೆ ಆಗುವುದಾದರೆ ಅದನ್ನು ಮುಕ್ತವಾಗಿ ತಿಳಿಸುತ್ತೇನೆ. ನನ್ನ ಮದುವೆಯನ್ನು ಮುಚ್ಚಿಡುವ ಯಾವುದೇ ಅನಿವಾರ್ಯತೆ ನನಗಿಲ್ಲ. ಜನರಿಂದ ಅಡಗಿಸಿಡುವ ವಿಷಯವೂ ಅದಲ್ಲ. ನಾನು ಯಾವುದೇ ಸಂಗತಿಯನ್ನೂ ಅಡಗಿಸಿಡಲು ಪ್ರಯತ್ನಿಸುತ್ತಿಲ್ಲ. ಆದ್ದರಿಂದ ಮದುವೆ ವಿಷಯವನ್ನೇಕೆ ಅಡಗಿಸಿಡಲಿ" ಎಂದು ಅರ್ಜುನ್‌ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲ, "ನಾನೀಗ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ಧೇನೆ. ಮದುವೆಯಾಗುವ ಹಂತಕ್ಕಿನ್ನೂ ನಾನು ಬಂದಿಲ್ಲ. ಅದ್ಯಾವಾಗ ಆ ಕಾಲ ಬರುತ್ತೋ ಆಗ ಖಂಡಿತ ನಾನು ಆ ಬಗ್ಗೆ ಯೋಚಿಸಿ ಮುಂದುವರೆಯುತ್ತೇನೆ. ಸದ್ಯಕ್ಕೆ ಇಂಥ ಸಂಗತಿಗಳ ಬಗ್ಗೆ ಹೆಚ್ಚು ಯೋಚಿಸಲು, ಮಾತನಾಡಲು ನನಗೆ ಸಮಯವಿಲ್ಲ" ಎಂದು 33 ವರ್ಷಗಳ ವಯಸ್ಸಿನ ನಟ ಅರ್ಜುನ್‌ ಕಪೂರ್‌ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌