ಆ್ಯಪ್ನಗರ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್

ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Vijaya Karnataka Web 11 Jun 2021, 3:13 pm

ಹೈಲೈಟ್ಸ್‌:

  • ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್
  • ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದ ದಿಲೀಪ್ ಕುಮಾರ್
  • ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ದಿಲೀಪ್ ಕುಮಾರ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bollywood actor dilip kumar discharged from hospital
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್
ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಕಳೆದ ಭಾನುವಾರ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದ ದಿಲೀಪ್ ಕುಮಾರ್ ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಧನ್ಯವಾದ ತಿಳಿಸಿದ ಸೈರಾ ಬಾನು
''ದಿಲೀಪ್ ಕುಮಾರ್ ಗುಣಮುಖರಾಗಿದ್ದಾರೆ. ನಮಗೆ ಖುಷಿ ಇದೆ. ಶ್ವಾಸಕೋಶದಲ್ಲಿ ಶೇಕರಣೆಗೊಂಡಿದ್ದ ದ್ರವವನ್ನು ತೆಗೆಯಲಾಗಿದೆ. ಈಗ ಮನೆಗೆ ತೆರಳುತ್ತಿದ್ದೇವೆ. ಎಲ್ಲರ ಪ್ರಾರ್ಥನೆಗೆ ನನ್ನ ತುಂಬು ಹೃದಯದ ಧನ್ಯವಾದಗಳು'' ಎಂದು ಆಸ್ಪತ್ರೆಯಿಂದ ಹೊರಡುವ ಮುನ್ನ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ತಿಳಿಸಿದರು.

ದಿಲೀಪ್ ಕುಮಾರ್ ಅವರಿಗೆ ಡಾ.ನಿತಿನ್ ಗೋಖಲೆ, ಡಾ.ಜಲೀಲ್ ಪಾರ್ಕರ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ದಿಲೀಪ್ ಕುಮಾರ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವೈದ್ಯರಿಗೆ ಫೈಸಲ್ ಫಾರೂಖಿ ಧನ್ಯವಾದ ತಿಳಿಸಿದ್ದಾರೆ.

ಆಕ್ಸಿಜನ್ ಸಪೋರ್ಟ್‌ನಲ್ಲಿರುವ ದಿಲೀಪ್ ಕುಮಾರ್ ಆರೋಗ್ಯ ಸ್ಥಿತಿ ಹೇಗಿದೆ?
ದಿಲೀಪ್ ಕುಮಾರ್ ಕುಟುಂಬದ ಆಪ್ತರಾಗಿರುವ ಫೈಸಲ್ ಫಾರೂಖಿ, ''ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಯ ಫಲವಾಗಿ ದಿಲೀಪ್ ಸಾಬ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಡಾ.ಗೋಖಲೆ, ಪಾರ್ಕರ್, ಡಾ.ಅರುಣ್ ಶಾ ಮತ್ತು ಇಡೀ ತಂಡಕ್ಕೆ ಧನ್ಯವಾದಗಳು'' ಎಂದು ದಿಲೀಪ್ ಕುಮಾರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಫೈಸಲ್ ಫಾರೂಖಿ ಟ್ವೀಟ್ ಮಾಡಿದ್ದಾರೆ.

98 ವರ್ಷ ವಯಸ್ಸಿನ ನಟ ದಿಲೀಪ್ ಕುಮಾರ್ ಬಣ್ಣದ ಬದುಕಿಗೆ ಕಾಲಿಟ್ಟಿದ್ದು 1944ರಲ್ಲಿ. 'ಕೊಹಿನೂರ್', 'ಮುಘಲ್-ಎ-ಆಜಾಮ್', 'ದೇವ್‌ದಾಸ್', 'ನಯಾ ದೌರ್', 'ರಾಮ್ ಔರ್ ಶ್ಯಾಮ್' ಮುಂತಾದ ಚಿತ್ರಗಳಲ್ಲಿ ದಿಲೀಪ್ ಕುಮಾರ್ ಅಭಿನಯಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌