ಆ್ಯಪ್ನಗರ

ಬಾಲಿವುಡ್ ದಾಖಲೆ ಗಳಿಕೆ ಸಿನಿಮಾಗಳ ಸಾಲಿಗೆ ಹೃತಿಕ್ 'ಸೂಪರ್ 30'

ಬಾಲಿವುಡ್ ಸ್ಟಾರ್ ನಟ ಹೃತಿಕ್ ನಾಯಕತ್ವದ 'ಸೂಪರ್ 30' ಚಿತ್ರವು ರಿಲೀಸ್‌ಗಿಂತ ಮೊದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಬಿಡುಗಡೆ ಬಳಿಕ ಸಹ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 'ಸೂಪರ್' ಎನ್ನುವ ಗಳಿಕೆ ದಾಖಲಿಸಿದೆ. ಎರಡು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಹೃತಿಕ್ ರೋಶನ್ ನಾಯಕತ್ವದ 'ಕಾಬಿಲ್' ಚಿತ್ರದ ಗಳಿಕೆಯನ್ನು ಮೊದಲ ದಿನದಂದೇ ಈ 'ಸೂಪರ್ 30' ಚಿತ್ರವು ಬ್ರೇಕ್ ಮಾಡಿದೆ.

Vijaya Karnataka Web 7 Aug 2019, 11:42 am
ಬಾಲಿವುಡ್ ಸೂಪರ್ ಡ್ಯಾನ್ಸರ್ ಮತ್ತು ಸ್ಟಾರ್ ಟನ ಹೃತಿಕ್ ರೋಷನ್ ಬರೋಬ್ಬರಿ 2 ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲು ಬಂದಿದ್ದಾರೆ. 2017ರಲ್ಲಿ ತೆರೆಕಂಡಿದ್ದ 'ಕಾಬಿಲ್' ಚಿತ್ರದ ಬಳಿಕ ಹೃತಿಕ್ ರೋಶನ್ ಚಿತ್ರವು ತೆರೆಗೆ ಬಂದಿರಲಿಲ್ಲ. ಹೃತಿಕ್ ಅಭಿಮಾನಿಗಳು ಕಾತರದಿಂದ ಕಾದು ಕಾದು ಸುಸ್ತಾಗಿದ್ದರು ಎನ್ನಬಹುದು. ಕಳೆದ ತಿಂಗಳು (ಜುಲೈ 12, 2019) ಬಿಡುಗಡೆಯಾಗಿರುವ ಹೃತಿಕ್ ನಾಯಕತ್ವದ 'ಸೂಪರ್ 30' ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಮಾಲ್ ಮಾಡಿದೆ.
Vijaya Karnataka Web hrithik0708


ಹೃತಿಕ್ ನಾಯಕತ್ವದ 'ಸೂಪರ್ 30' ಚಿತ್ರವು ರಿಲೀಸ್‌ಗಿಂತ ಮೊದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಬಿಡುಗಡೆ ಬಳಿಕ ಸಹ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 'ಸೂಪರ್' ಎನ್ನುವ ಗಳಿಕೆ ದಾಖಲಿಸಿದೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ. ಆದರೆ, ಸದ್ಯಕ್ಕೆ ಬಾಲಿವುಡ್‌ನಲ್ಲಿ ಟಾಲಿವುಡ್‌ ಸಿನಿಮಾ 'ಅರ್ಜುನ್ ರೆಡ್ಡಿ' ರೀಮೇಕ್ 'ಕಬೀರ್ ಸಿಂಗ್' ಚಿತ್ರದ ಹವಾ ಇರುವುದರಿಂದ 'ಸೂಪರ್ 30' ಚಿತ್ರಕ್ಕೆ ಅದಕ್ಕಿಂತ ಕಡಿಮೆ ಯಶಸ್ಸು ಎನ್ನಬಹುದು.

ಬಿಡುಗಡೆಯಾದ ಮೊದಲ ದಿನ ಸೂಪರ್ 30 ಸಿನಿಮಾ ಸುಮಾರು 11.83 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಬಾಲಿವುಡ್ ಬಾಕ್ಸ್ ಆಫೀಸ್ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡುವ ಮೂಲಕ ಈ ಚಿತ್ರದ ಯಶಸ್ಸನ್ನು ದೃಢೀಕರಿಸಿದ್ದಾರೆ. ಈಗಾಗಲೇ ಈ ಚಿತ್ರದ ಗಳಿಕೆ ಬರೋಬ್ಬರಿ 175 ಕೋಟಿ ದಾಟಿದ್ದು, ಈಗಲೂ ಚಿತ್ರದ ಕ್ರೇಜ್ ಹಾಗೇ ಇದ್ದು ಎಲ್ಲಾ ಕಡೆ ಹೌಸ್‌ಫುಲ್ ಪ್ರದಶ್ನ ಕಾಣುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಸಹ 'ಸೂಪರ್ 30' ಚಿತ್ರವು ಕಮಾಲ್ ಮಾಡಿದೆ.

ಎರಡು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಹೃತಿಕ್ ರೋಶನ್ ನಾಯಕತ್ವದ 'ಕಾಬಿಲ್' ಚಿತ್ರದ ಗಳಿಕೆಯನ್ನು ಮೊದಲ ದಿನದಂದೇ ಈ 'ಸೂಪರ್ 30' ಚಿತ್ರವು ಬ್ರೇಕ್ ಮಾಡಿದೆ. ಕಾಬಿಲ್ ಸಿನಿಮಾ ಮೊದಲ ದಿನ 10.43 ಕೋಟಿ ಗಳಿಸಿತ್ತು. ಆದರೆ ಸೂಪರ್ 30 ಅದಕ್ಕಿಂತ ಒಂದೂವರೆ ಕೋಟಿ ಹೆಚ್ಚು ಬಾಚಿಕೊಂಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ವಾರಾಂತ್ಯದಲ್ಲಿ ಈ ಚಿತ್ರವು ಭಾರೀ ಗಳಿಕೆ ದಾಖಲಿಸುತ್ತಿರುವುದನ್ನು ನೋಡಿದರೆ ಈ ಚಿತ್ರವು ಸದ್ಯದಲ್ಲೇ 200 ಕೋಟಿ ಗಳಿಸಲಿದೆ ಎಂದು ಧಾರಾಳವಾಗಿ ಹೇಳಬಹುದು.

ಹೃತಿಕ್ ರೋಶನ್ ನಾಯಕತ್ವದ ಈ ಚಿತ್ರವು ಪಾಟ್ನಾ ಮೂಲದ ಗಣಿತ ಶಾಸ್ತ್ರಜ್ಞ ಆನಂದ್ ಕುಮಾರ್ ಅವರ ಜೀವನ ಆಧಾರಿತ ಕಥೆಯಾಗಿದ್ದು, ಈ ಚಿತ್ರವನ್ನು 115 ಕೋಟಿ ರೂ. ಬಜೆಟ್‌ ಮೂಲಕ ತೆರೆಗೆ ತರಲಾಗಿದೆ. ಈಗಾಗಲೇ ಚಿತ್ರವು 175 ಕೋಟಿ ಗಳಿಕೆ ಮೀರುವ ಮೂಲಕ ಹೃತಿಕ್ ಹಾಗೂ ಚಿತ್ರತಂಡದವರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌