ಆ್ಯಪ್ನಗರ

ಲಾಕ್‌ಡೌನ್ ಟೈಮ್‌ನಲ್ಲಿ ಮದುವೆ, ಮಗು ಮಾಡಿಕೊಳ್ಳೋದರ ಬಗ್ಗೆ ಬೋಲ್ಡ್ ಉತ್ತರ ನೀಡಿದ ಕಾರ್ತಿಕ್ ಆರ್ಯನ್!

ನಟ ಕಾರ್ತಿಕ್ ಆರ್ಯನ್ ಅವರ ಲವ್, ಮದುವೆ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅಭಿಮಾನಿಯೋರ್ವರು ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್ಯನ್ ಮಗುವಿನ ಬಗ್ಗೆಯೂ ಮಾತನಾಡಿದ್ದಾರೆ.

Vijaya Karnataka Web 13 Jul 2020, 3:38 pm
ದೆಹಲಿ: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳ ಜೊತೆ ಮಾತನಾಡುವಾಗ ಕಾರ್ತಿಕ್ ಮದುವೆ, ಮಗು ಬಗ್ಗೆ ಬೋಲ್ಡ್ ಉತ್ತರ ನೀಡಿದ್ದಾರೆ.
Vijaya Karnataka Web bollywood actor kartik aaryan answers the question of lockdown marriage
ಲಾಕ್‌ಡೌನ್ ಟೈಮ್‌ನಲ್ಲಿ ಮದುವೆ, ಮಗು ಮಾಡಿಕೊಳ್ಳೋದರ ಬಗ್ಗೆ ಬೋಲ್ಡ್ ಉತ್ತರ ನೀಡಿದ ಕಾರ್ತಿಕ್ ಆರ್ಯನ್!


ಅಭಿಮಾನಿಗಳ ಪ್ರಶ್ನೆಗೆ ಕಾರ್ತಿಕ್ ಉತ್ತರ
ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಇದ್ದು ಜನರ ಮನಸ್ಥಿತಿ ಕೂಡ ಹಾಳಾಗಿದೆ. ಹಲವರಿಗೆ ಮನೆಯಲ್ಲಿ ಇರೋದು ಬೋರ್ ಬಂದಿದೆ. ಹೀಗಾಗಿ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕವಾದರೂ ಕೂಡ ಜನರನ್ನು ಆದಷ್ಟು ಮನರಂಜಿಸುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ, ಅಷ್ಟೇ ಅಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್, ಚಾಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಕಾರ್ತಿಕ್ ಉತ್ತರ ನೀಡಿದ್ದಾರೆ.

ಮದುವೆ ಬಗ್ಗೆ ಕಾರ್ತಿಕ್ ಹೇಳಿದ್ದೇನು?
ಟ್ವಿಟರ್‌ನಲ್ಲಿ ಕಾರ್ತಿಕ್ ಆರ್ಯನ್ ಮದುವೆ ಬಗ್ಗೆ ಅಭಿಮಾನಿಯೋರ್ವರು ಪ್ರಶ್ನಿಸಿದ್ದಾರೆ. 'ಇದು ಮದುವೆಯಾಗೋಕೆ ತುಂಬ ಒಳ್ಳೆಯ ಸಮಯ. ಏಕೆಂದರೆ ದುಡ್ಡು ಖರ್ಚಾಗುವುದಿಲ್ಲ' ಎಂದು ಆರ್ಯನ್ ಉತ್ತರ ನೀಡಿದ್ದಾರೆ. ಲಾಕ್‌ಡೌನ್‌ ಟೈಮ್‌ನಲ್ಲಿ 50 ಜನರಿಗಿಂತ ಜಾಸ್ತಿ ಜನರು ಮದುವೆಯಲ್ಲಿ ಭಾಗಿಯಾಗುವ ಹಾಗಿಲ್ಲ ಎಂಬ ನಿಯಮವಿದೆ. ಸಾಮಾನ್ಯ ಜನರೂ ಸೇರಿದಂತೆ ಸೆಲೆಬ್ರಿಟಿಗಳು ಕೂಡ ಲಾಕ್‌ಡೌನ್ ಟೈಮ್‌ನಲ್ಲಿ ಮದುವೆಯಾಗಿದ್ದಾರೆ. ನಟ ಕಾರ್ತಿಕ್ ಆರ್ಯನ್ ಅವರ ಅಫೇರ್ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಬಾಲಿವುಡ್‌ನ ಕೆಲ ಸೆಲೆಬ್ರಿಟಿಗಳ ಜೊತೆ ಕಾರ್ತಿಕ್ ಹೆಸರು ಕೇಳಿಬರುತ್ತಲೇ ಇರುತ್ತದೆ.

ಲಾಕ್‌ಡೌನ್ ಟೈಮ್‌ನಲ್ಲಿ ಕಾರ್ತಿಕ್ ಮದುವೆಯಾಗಲಿದ್ದಾರಾ?
ಲಾಕ್‌ಡೌನ್ ಟೈಮ್‌ನಲ್ಲಿ ನಿಮ್ಮ ಮದುವೆಯಾಗುತ್ತದೆ ಎಂದು ಚರ್ಚೆಯಾಗುತ್ತಿದೆ, ಇದು ನಿಜಾನಾ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಕಾರ್ತಿಕ್ ಆರ್ಯನ್, 'ಇದೇ ರೀತಿ ಲೆಕ್ಕಾಚಾರ ಹಾಕಿದರೆ ಲಾಕ್‌ಡೌನ್‌ನಲ್ಲಿ ನನಗೆ ಮಗು ಕೂಡ ಆಗುತ್ತದೆ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

Also Read-ಅವಕಾಶಕ್ಕಾಗಿ ನವಾಬ, ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಗೋಗರೆದಿದ್ದು ಯಾಕೆ?

ಕಾರ್ತಿಕ್ ಸಿನಿಮಾಗಳನ್ನು ಯಾವಾಗ ನೋಡಬಹುದು?

2019ರಲ್ಲಿ ಕಾರ್ತಿಕ್ ಆರ್ಯನ್ ನಟನೆಯ 'ಲುಕಾ ಚುಪ್ಕಿ', 'ಪತಿ ಪತ್ನಿ ಔರ್ ಓ' ಸಿನಿಮಾ ರಿಲೀಸ್ ಆಗಿತ್ತು. ಈ ವರ್ಷ ಕಾರ್ತಿಕ್ 'Bhool Bhulaiyaa 2', 'Dostana 2' ಚಿತ್ರದಲ್ಲಿ ನಟಿಸಿದ್ದು, ಇವೆರಡು ರಿಲೀಸ್ ಆಗಬೇಕಿದೆ. ಯಾವಾಗ ಈ ಸಿನಿಮಾಗಳನ್ನು ನೋಡಬಹುದು ಎಂದು ಅಭಿಮಾನಿಯೋರ್ವರು ಕೇಳಿದಾಗ ಕಾರ್ತಿಕ್, 'ವ್ಯಾಕ್ಸಿನ್ ರೆಡಿಯಾದರೆ ನನ್ನ ಸಿನಿಮಾವನ್ನು ನೀವು ಬೆಳ್ಳಿತೆರೆ ಮೇಲೆ ನೋಡಬಹುದು' ಎಂದು ಹೇಳಿದ್ದಾರೆ.

Also Read-ಸುಂದರಿ ಸಾರಾ ಅಲಿ ಖಾನ್ ಒಂದು ಕಾಲದಲ್ಲಿ ಇಷ್ಟು ದಢೂತಿ ಆಗಿದ್ದರು ಎಂದರೆ ನಂಬೋಕೆ ಸಾಧ್ಯವಿಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌