ಆ್ಯಪ್ನಗರ

ಮತ್ತೊಂದು ಮಗು ಸದ್ಯಕ್ಕೆ ಬೇಡ: ಐಶ್ವರ್ಯಾ-ಅಭಿಷೇಕ್ ಹೇಳಿದ್ದು ನಿಜವೇ?

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ಪಂದನ್ನು ನೋಡಿದ ಬಹಳಷ್ಟು ಜನರಿಗೆ ಈ ಪ್ರಶ್ನೆ ಕಾಡತೊಡಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅದು ಭಾರೀ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಸ್ಟಾರ್ ದಂಪತಿಗಳಾದ ಐಶ್ವರ್ಯರೈ ಹಾಗೂ ಅವರ ಪತಿ ಅಭಿಷೇಕ್ ಬಚ್ಚನ್ ಅವರಿಬ್ಬರು ಗೋವಾ ಬೀಚ್‌ನಲ್ಲಿ ಸುತ್ತಾಡುತ್ತ ರಜೆಯ ಮಜಾ ಅನುಭವಿಸುತ್ತಿದ್ದರು.

TIMESOFINDIA.COM 25 Mar 2019, 12:08 pm
ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಎರಡನೇ ಬಾರಿ ಅಮ್ಮ ಎನಿಸಿಕೊಳ್ಳಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆ ಶುರುವಾಗಿತ್ತು. ಆದರೆ, ಈ ಸುದ್ದಿಯನ್ನು ಐಶ್ವರ್ಯಾ ರೈ ಮ್ಯಾನೇಜರ್ ತಳ್ಳಿಹಾಕಿದ್ದಾರೆ. ಅವರಿಬ್ಬರೂ ಏಕಾಂತದಲ್ಲಿ ಕೆಲವು ಕ್ಷಣಗಳನ್ನು ಕಳೆಯಲು ಗೋವಾಕ್ಕೆ ಹೋಗಿದ್ದರು. ಅಲ್ಲಿ ಬೀಚ್‌ನಲ್ಲಿ ಓಡಾಡುವಾಗ ಯಾರೋ ರಾಂಗ್‌ ಆಂಗಲ್‌ನಿಂದ ಫೋಟೋ ತೆಗೆದಿದ್ದಾರೆ ಅಷ್ಟೇ.
Vijaya Karnataka Web aishu2503


ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿಗಳು ಎರಡನೇ ಮಗು ಬಗ್ಗೆ ಆಸಕ್ತಿ ಹೊಂದಿಲ್ಲ. ಸದ್ಯಕ್ಕಂತೂ ಅವರಿಗೆ ಎರಡನೇ ಮಗುವನು ನಿರೀಕ್ಷೆ ಇಲ್ಲವೇ ಇಲ್ಲ. ಮುಂದೆ ಏನು ಎತ್ತ ಎಂದು ಅವರೇ ನಿರ್ಧಾರತ ಮಾಡುತ್ತಾರೆ. ಹಾಗೇನಾದರೂ ಹೊಸ ಸುದ್ದಿ ಇದ್ದರೆ ಅವರೇ ಮಾಧ್ಯಮಗಳಿಗೆ ಅಥವಾ ಸೋಷಿಯಲ್ ಮೀಡಿಯಾದಲ್ಲಿ ತಿಳಿಸುತ್ತಾರೆ. ಹೀಗಾಗಿ ಸದ್ಯಕ್ಕೆ ಯಾರೂ 'ಐಶ್ವರ್ಯಾ ರೈ ಅವರು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ' ಎಂಬ ಮಾತನ್ನು ನಂಬಬೇಡಿ ಎಂದು ಐಶೂ ಮ್ಯಾನೇಜರ್ ಸ್ಪಷ್ಟವಾಗಿ ಹೇಳಿದ್ದಾರೆ.

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ಪಂದನ್ನು ನೋಡಿದ ಬಹಳಷ್ಟು ಜನರಿಗೆ ಈ ಪ್ರಶ್ನೆ ಕಾಡತೊಡಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅದು ಭಾರೀ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಬಾಲಿವುಡ್ ಅಂಗಳದಲ್ಲಿ 'ಹೋಳಿ ಸಂಭ್ರಮ' ಮನೆ ಮಾಡಿದ್ದರೆ, ಸ್ಟಾರ್ ದಂಪತಿಗಳಾದ ಐಶ್ವರ್ಯರೈ ಹಾಗೂ ಅವರ ಪತಿ ಅಭಿಷೇಕ್ ಬಚ್ಚನ್ ಅವರಿಬ್ಬರು ಗೋವಾ ಬೀಚ್‌ನಲ್ಲಿ ಸುತ್ತಾಡುತ್ತ ರಜೆಯ ಮಜಾ ಅನುಭವಿಸುತ್ತಿದ್ದರು.

ಆ ವೇಳೆ, ಬೀಚ್ ನಲ್ಲಿ ಇಬ್ಬರು ಓಡಾಡುತ್ತಿದ್ದ ಫೋಟೋ ಒಂದು ಎಲ್ಲಿಂದಲೂ ಸೋಷಿಯಲ್ ಮೀಡಿಯಾಕ್ಕೆ ಹಾರಿ ಬಂದು ಅದೀಗ ಭಾರಿ ವೈರಲ್ ಆಗಿದೆ. ಫೋಟೋದಲ್ಲಿ ಶಾರ್ಟ್ಸ್ ಹಾಗೂ ಟೀ ಶರ್ಟ್ ಧರಿಸಿದ್ದ ಐಶ್ ಹೊಟ್ಟೆ ಸ್ವಲ್ಪ ಮುಂದೆ ಬಂದಂತೆ ಕಾಣುತ್ತಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು ಐಶ್ವರ್ಯಾ ರೈ ಮತ್ತೆ ಗರ್ಭಿಣಿ ಎಂದು ಸುದ್ದಿ ಹಬ್ಬಿಸಿದ್ದಾರೆ.

ಇತ್ತೀಚಿಗೆ ನಟಿ ಐಶ್ವರ್ಯಾ ರೈ ಅವರು ಅಳೆದು-ತೂಗಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮೊದಲಿನಂತೆ ಗ್ಲಾಮರ್ ಅಗತ್ಯವಿರುವ ಪಾತ್ರ ಒಪ್ಪಿಕೊಳ್ಳುಲು ಈಗ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇರಬಹುದು. ಇಷ್ಟರಲ್ಲೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹೊಸ ಚಿತ್ರದಲ್ಲಿ ಒಟ್ಟಿಗೇ ನಟಿಸಲಿದ್ದಾರೆ ಎನ್ನಲಾಗಿದೆ. ಅದೊಂದು 'ಸಾಹಿರ್ ಲುಧಿಯಾನ್ವಿ' ಅವರ 'ಬಯೋಪಿಕ್' ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌