ಆ್ಯಪ್ನಗರ

ಅಪ್ಪನಿಲ್ಲದ ಮನೆಯಲ್ಲಿ ಜೀವನ ಬಹಳ ಕಷ್ಟ: ಕತ್ರಿನಾ ಕೈಫ್

ನಮ್ಮ ಜೀವನದಲ್ಲಿ ಆಗಿರುವ ಘಟನೆಗಳಿಗೆ ನಾವೆಲ್ಲರೂ ಒಂದಲ್ಲ ಮತ್ತೊಂದು ರೀತಿಯಲ್ಲಿ ಹೊಣೆಗಾರರೇ ಆಗಿರುತ್ತವೆ. ನಾನೇ ನನ್ನ ಜೀವನದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ಹೋಗಲಿಲ್ಲ. ಹೀಗಾಗಿ ಸಹಜವಾಗಿಯೇ ಎಲ್ಲೋ ಒಂದು ಕಡೆ ನನ್ನ ಜೀವನ ತಾಳ ತಪ್ಪಿದಂತಾಯಿತು. ನಾವು ಬ್ಯಾಲೆನ್ಸ್ ಮಾಡದಿದ್ದರೆ ಬ್ಯಾಲೆನ್ಸ್ ತಪ್ಪುವುದು ಸಹಜ ತಾನೇ?

TIMESOFINDIA.COM 31 May 2019, 12:49 pm
ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಭಾರತ್ ಚಿತ್ರದ ಶೂಟಿಂಗ್‌ನಲ್ಲಿ ಸದ್ಯ ಭಾರಿ ಎಂಬಷ್ಟು ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ನಾಯಕತ್ವದ ಭಾರತ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಕತ್ರಿನಾ ಕೈಫ್ ಅವರು ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಹಿರಂಗಗೊಳಿಸಿದ್ದಾರೆ. ಅಪ್ಪನಿಲ್ಲದ ಮನೆಯ ಹೆಣ್ಣುಮಕ್ಕಳ ಮನಸ್ಥಿತಿಯನ್ನು ಅವರು ಈ ಮೂಲಕ ಜಗಜ್ಜಾಹೀರು ಮಾಡಿದ್ದಾರೆ ಎನ್ನಬಹುದು. 'ಗಂಡು ದಿಕ್ಕಿಲ್ಲದ ಮನೆ' ಎಂಬಂಥ ಪರಿಸರದಲ್ಲಿ ಬೆಳೆದ ಹೆಣ್ಣುಮಕ್ಕಳಿಗೆ ಹೇಗೆಲ್ಲ ಅನ್ನಿಸುತ್ತದೆ ಎಂದು ಕತ್ರಿನಾ ತಮ್ಮದೇ ಮಾತುಗಳಲ್ಲಿ ಹೇಳಿದ್ದಾರೆ.
Vijaya Karnataka Web katrina3105


"ಯಾವುದೇ ಹೆಣ್ಣುಮಗಳಾದರೂ ಸಹ ತನಗೆ ಮಗುವಾದ ಸಮಯದಲ್ಲಿ ಅಪ್ಪನ ಸಾನಿಧ್ಯ ಬಯಸುತ್ತಾಳೆ. ಅದು ಹುಟ್ಟಿದ ಮಗುವಿಗೆ ಮಾತ್ರವಲ್ಲ, ಹೆತ್ತ ತಾಯಿಗೂ ಸಹ ಅಪ್ಪನ ಅಗತ್ಯ ಕಾಡುತ್ತದೆ. ಕೆಲವೊಂದು ಫ್ಯಾಮಿಲಿಗಳಲ್ಲಿ ದುರದೃಷ್ಟವಶಾತ್ ಎಂಬಂತೆ ಅಪ್ಪ ಎಂಬ ಜೀವ ಹತ್ತಿರ ಇಲ್ಲದಿದ್ದರೆ ಅವರಿಗೆ ಈ 'ಅಪ್ಪ' ಎಂಬ ಶಬ್ಧದ ಮಹತ್ವ ಅರಿವಾಗುತ್ತದೆ. ಯಾವುದೇ ಮಗುವಿನ ತಾಯಿಗೂ ಅಪ್ಪನ ಆಸರೆ ಎಷ್ಟು ಮುಖ್ಯವಾಗುತ್ತದೆ ಎಂಬುದು ಪ್ರಬುದ್ಧವಾಗಿ ಯೋಚಿಸುವ ಎಲ್ಲರಿಗೂ ಗೊತ್ತು. ಮಕ್ಕಳನ್ನು ತುಂಬಾ ಪ್ರೀತಿಸುವ ಅಪ್ಪ ಎಂಬ ಗಂಡು ಜೀವ ಇರಲೇಬೇಕು" ಎಂದಿದ್ದಾರೆ ನಟಿ ಕತ್ರಿನಾ ಕೈಫ್.

ಇನ್ನು, ತಮ್ಮ ಸ್ವಂತ ಕುಟುಂಬದ ಬಗ್ಗೆ ಹೇಳಿಕೊಂಡಿರುವ ನಟಿ ಕತ್ರಿನಾ ಕೈಫ್ "ಆರು ಹೆಣ್ಣುಮಕ್ಕಳು ಹಾಗೂ ಒಬ್ಬ ಸಹೋದರನೊಂದಿಗೆ ಹುಟ್ಟಿ ಬೆಳೆದ ಕುಟುಂಬ ನಮ್ಮದು. ನಾನು ಯಾವಾಗಲೂ ಬಹಳಷ್ಟು ಅಂತರ್ಮಖಿ. ನನ್ನಷ್ಟಕ್ಕೇ ನಾನು ಇದ್ದುಬಿಡುವಂಥವಳು. ಆದರೆ ನನಗೆ ಎಲ್ಲರ ಮೇಲೂ ಹೆಚ್ಚು ಅಕ್ಕರೆ, ಕಾಳಜಿ ತೋರಿಸುವ ಮನೋಭಾವನೆಯಿದೆ. ನನಗೆ ಅಚ್ಚರಿ ಎನಿಸುವ ಸಂಗತಿ ಎಂದರೆ, ನಾನು ಅದು ಹೇಗೆ ನಟಿಯಾದೆ ಎಂಬುದು! ಏಕೆಂದರೆ, ನಟಿಯಾಗಲು ನಾನು ಯಾವತ್ತೂ ಯಾವುದೇ ರೀತಿಯಲ್ಲೂ ಪ್ರಯತನ ಮಾಡಿರಲಿಲ್ಲ" ಎಂದಿದ್ದಾರೆ.

ನಟ ರಣ್‌ಬೀರ್ ಕಪೂರ್ ಅವರೊಡನೆ ಆದ ಲವ್ ಬ್ರೇಕಪ್‌ ಬಗ್ಗೆ ಮಾತನಾಡಿದ ಕತ್ರಿನಾ "ನಮ್ಮ ಜೀವನದಲ್ಲಿ ಆಗಿರುವ ಘಟನೆಗಳಿಗೆ ನಾವೆಲ್ಲರೂ ಒಂದಲ್ಲ ಮತ್ತೊಂದು ರೀತಿಯಲ್ಲಿ ಹೊಣೆಗಾರರೇ ಆಗಿರುತ್ತವೆ. ನಾನೇ ನನ್ನ ಜೀವನದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ಹೋಗಲಿಲ್ಲ. ಹೀಗಾಗಿ ಸಹಜವಾಗಿಯೇ ಎಲ್ಲೋ ಒಂದು ಕಡೆ ನನ್ನ ಜೀವನ ತಾಳ ತಪ್ಪಿದಂತಾಯಿತು. ನಾವು ಬ್ಯಾಲೆನ್ಸ್ ಮಾಡದಿದ್ದರೆ ಬ್ಯಾಲೆನ್ಸ್ ತಪ್ಪುವುದು ಸಹಜ ತಾನೇ? ನನ್ನ ವಿಷಯದಲ್ಲೂ ಅದೇ ಆಗಿದೆ. ಅಂದುಕೊಂಡಂತೆ ನಡೆಯಲಿಲ್ಲ ಎನ್ನುವುದಕ್ಕಿಂತ ನಾನು ಅದನ್ನು ಅಷ್ಟು ತೀವ್ರವಾಗಿ ಅಂದುಕೊಂಡೇ ಇರಲಿಲ್ಲ ಎನ್ನಬಹುದು" ಎಂದಿದ್ದಾರೆ ನಟಿ ಕತ್ರಿನಾ ಕೈಫ್.

ಅಂದಹಾಗೆ, ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಭಾರತ್' ಚಿತ್ರದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್, ದಿಶಾ ಪಠಾಣಿ, ಸುನಿಲ್ ಗ್ರೋವರ್, ಜಾಕಿ ಶ್ರಾಫ್ ಮತ್ತು ಟಬು ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಜೂನ್ 5, 2019ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌