ಆ್ಯಪ್ನಗರ

ಅರ್ಜುನ್ ಕಪೂರ್ ಹುಟ್ಟುಹಬ್ಬಕ್ಕೆ ಮಲೈಕಾ ಅರೋರಾ ಸ್ಪೆಷಲ್ ವಿಶ್!

ಬಾಲಿವುಡ್ ನಟ ಅರ್ಜನ್ ಕಪೂರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ಮಲೈಕಾ ಅರೋರಾ ಅವರು " ನನ್ನಕ್ರೇಜೀ... ಆತ್ಮೀಯ ಹಾಗೂ ವಂಡರ್‌ಫುಲ್ ಅರ್ಜನ್ ಕಪೂರ್ ಅವರಿಗೆ ಹುಟ್ಟಹಬ್ಬದ ಶುಭಾಶಯಗಳು.. ಲವ್ ಮತ್ತು ಸಂತೋಷವಿರಲಿ..." ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

TIMESOFINDIA.COM 27 Jun 2019, 9:23 pm
ಬಾಲಿವುಡ್ ನಟ ಅರ್ಜನ್ ಕಪೂರ್ ಅವರು ಇಂದು (27 ಜೂನ್) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಬಾಲಿವುಡ್ ತಾರೆಗಳು ಶುಭ ಹಾರೈಸಿದ್ದಾರೆ. ಅದರಲ್ಲೂ ನಟಿ ಹಾಗೂ ಮಾಡೆಲ್ ಮಲೈಕಾ ಅರೋರಾ ಅವರು ನಟ ಅರ್ಜನ್ ಕಪೂರ್ ಅವರಿಗೆ ಅಕ್ಕರೆಯಿಂದ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಶುಭ ಹಾರೈಸಿದ್ದಾರೆ.
Vijaya Karnataka Web malika2706


ಅರ್ಜನ್ ಕಪೂರ್ ಹಾಗೂ ಮಲೈಕಾ ಅರೋರಾ ಅವರಿಬ್ಬರು ಬೆಸ್ಟ್‌ ಫ್ರಂಡ್ಸ್ ಎಂಬುದು ಜಗತ್ತಿಗೆಲ್ಲ ಗೊತ್ತು. ಅವರಿಬ್ಬರೂ ಬಹಳ ಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅರ್ಜನ್ ಕಪೂರ್ ಮತ್ತು ಮಲೈಕಾ ಮದುವೆಯಾಗಲಿದ್ದಾರೆ ಎಂಬ ವದಂತಿ ಜೋರಾಗಿಯೇ ಹಬ್ಬಿತ್ತು. ಆದರೆ ಅವರಿಬ್ಬರೂ ತಾವು ಮದುವೆಯಾಗುತ್ತಿರುವ ಬಗ್ಗೆ ಹಬ್ಬಿರುವ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಆದರೆ ಅವರಿಬ್ಬರೂ ಇವತ್ತಿಗೂ ಡೇಟಿಂಗ್ ಮಾಡುವುದನ್ನು ಮುಂದುವರಿಸಿದ್ದಾರೆ ಎಂಬುದು ಸತ್ಯ ಸಂಗತಿ ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವ ಸಂಗತಿ.

ಬಾಲಿವುಡ್ ನಟ ಅರ್ಜನ್ ಕಪೂರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ಮಲೈಕಾ ಅರೋರಾ ಅವರು " ನನ್ನಕ್ರೇಜೀ... ಆತ್ಮೀಯ ಹಾಗೂ ವಂಡರ್‌ಫುಲ್ ಅರ್ಜನ್ ಕಪೂರ್ ಅವರಿಗೆ ಹುಟ್ಟಹಬ್ಬದ ಶುಭಾಶಯಗಳು.. ಲವ್ ಮತ್ತು ಸಂತೋಷವಿರಲಿ..." ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಒಟ್ಟಿನಲ್ಲಿ, ಅವರಿಬ್ಬರೂ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಇಬ್ಬರಲ್ಲಿ ಅನ್ಯೋನ್ಯತೆ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನಬಹುದು. ಅವರಿಬ್ಬರೂ ಭವಿಷ್ಯದಲ್ಲಿ ಮದುವೆಯಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈಗಲೂ ಆತ್ಮೀಯತೆಯಿಂದ ಇದ್ದಾರೆ ಎಂಬುದು ಗ್ಯಾರಂಟಿ ಎಂದು ಸೋಷಿಯಲ್ ಮೀಡಿಯಾ ಮಾತನಾಡಿಕೊಳ್ಳುತ್ತಿದೆ.
View this post on Instagram Happy bday my crazy,insanely funny n amazing @arjunkapoor ... love n happiness always A post shared by Malaika Arora (@malaikaaroraofficial) on Jun 26, 2019 at 9:42am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌