ಆ್ಯಪ್ನಗರ

ರಿಯಾ ಚಕ್ರವರ್ತಿಗೆ ಕಳಿಸಿದ ಮೆಸೇಜ್‌ನಲ್ಲಿ ಅಕ್ಕನ ಮೇಲೆ ಆರೋಪ ಮಾಡಿದ್ದ ಸುಶಾಂತ್ ಸಿಂಗ್ ರಜಪೂತ್!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಗೆಳತಿ ರಿಯಾ ಚಕ್ರವರ್ತಿ ನಡುವಿನ ವಾಟ್ಸಪ್ ಸಂದೇಶದ ಸ್ಕ್ರೀನ್‌ಶಾಟ್ ಹೊರಗೆ ಬಿದ್ದಿದೆ. ಇದರಲ್ಲಿ ಸುಶಾಂತ್ ಯಾರ ಮೇಲೆ ಆರೋಪ ಮಾಡಿದ್ದರು?

Vijaya Karnataka Web 10 Aug 2020, 10:49 am
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನವಾಗಿ ಎರಡು ತಿಂಗಳಾಗುತ್ತ ಬಂತು. ಆದರೆ ಇಂದು ಕೂಡ ಇವರ ಸಾವಿನ ಕುರಿತಾಗಿ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಗಳು ಹೊರಬೀಳುತ್ತಲಿವೆ. ದಿನದಿಂದ ದಿನಕ್ಕೆ ಸುಶಾಂತ್ ಸಾವಿನ ಬಗ್ಗೆ ಅನುಮಾನ ಮೂಡಿಸುವ ಮಾಹಿತಿಗಳು ಜಗಜ್ಜಾಹೀರಾಗುತ್ತಿವೆ. ಸುಶಾಂತ್ ಸಾವಿನ ಕುರಿತಾಗಿ ತನಿಖೆಗೆ ಒಳಪಡುತ್ತಿರುವ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಅವರು ಸುಶಾಂತ್‌ ಜೊತೆಗಿನ ವಾಟ್ಸಪ್‌ ಸಂಭಾಷಣೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Vijaya Karnataka Web bollywood actress rhea chakraborty shared whatsapp messages with sushant singh rajput
ರಿಯಾ ಚಕ್ರವರ್ತಿಗೆ ಕಳಿಸಿದ ಮೆಸೇಜ್‌ನಲ್ಲಿ ಅಕ್ಕನ ಮೇಲೆ ಆರೋಪ ಮಾಡಿದ್ದ ಸುಶಾಂತ್ ಸಿಂಗ್ ರಜಪೂತ್!


ಸಹೋದರಿ ಮೇಲೆ ಆರೋಪ ಹೊರಿಸಿದ್ದ ಸುಶಾಂತ್ ಸಿಂಗ್ ರಜಪೂತ್

ಈ ವಾಟ್ಸಪ್ ಸಂದೇಶದಲ್ಲಿ ಸುಶಾಂತ್ ಸಹೋದರಿ ಅವರ ರೂಮ್‌ಮೇಟ್, ಫ್ರೆಂಡ್ ಸಿದ್ದಾರ್ಥ್ ಪಿಠಣಿ ಅವರನ್ನು ಕುಶಲತೆಯಿಂದ ಬಳಸಿಕೊಳ್ಳುತ್ತಿದ್ದಾರೆ ಎಂದು ಸುಶಾಂತ್ ತಿಳಿಸಿದ್ದರು. 'ನಿಮ್ಮ ಕುಟುಂಬದಲ್ಲಿ ಒಂದು ಆಕರ್ಷಣೆಯಿದೆ. ಶೋಯಿಕ್ ಸಹಾನುಭೂತಿ ಹೊಂದಿದ್ದಾನೆ. ನೀವೆಲ್ಲರೂ ನನ್ನವರು. ಒಳ್ಳೆಯ ಬದಲಾವಣೆ, ಜಾಗತಿಕವಾಗಿ ವಿಶ್ರಾಂತಿ ಪಡೆಯಲು ನೀವು ಕಾರಣ. ನಿಮ್ಮೆಲ್ಲರ ಸುತ್ತ ನಾನು ಇರುವುದು ತುಂಬ ಸಂತೋಷದ ವಿಷಯ. ನೀನು ನಗಬೇಕು. ನಕ್ಕಾಗ ನೀನು ಚೆನ್ನಾಗಿ ಕಾಣುತ್ತೀಯ. ನಾನೀಗ ನಿದ್ದೆ ಮಾಡಲು ಪ್ರಯತ್ನಪಡ್ತೀನಿ' ಎಂದು ಸುಶಾಂತ್ ರಿಯಾಗಿ ಸಂದೇಶ ಕಳಿಸಿದ್ದಾರೆ.

ಸುಶಾಂತ್ ಕಳಿಸಿದ್ದ ಸಂದೇಶದಲ್ಲಿ ಏನಿತ್ತು?
'ಅಮ್ಮ ಹೇಳಿಕೊಟ್ಟದ್ದಕ್ಕೆ ವಿರುದ್ಧವಾಗಿ ಸಹೋದರಿ ಹೋಗುತ್ತಿದ್ದಳು. ನಿಮ್ಮ ಅಹಂಕಾರದಿಂದ ಕುರುಡರಾಗಿದ್ದರೆ, ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ, ನಾನಂತೂ ಹೆದರೋದಿಲ್ಲ. ಇಲ್ಲಿಯವರೆಗೆ ವಿಶ್ವದಲ್ಲಿ ನಾನು ಏನು ಅಗತ್ಯ ಬದಲಾವಣೆ ತರಲು ಪ್ರಯತ್ನಪಟ್ಟಿದ್ದೇನೋ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ದೇವರು ಹಾಗೂ ಪ್ರಕೃತಿ ಯಾವುದು ಸರಿ ಎಂದು ನಿರ್ಧಾರ ಮಾಡಲಿ' ಎಂದು ಸುಶಾಂತ್ ಮೆಸೇಜ್ ಮಾಡಿದ್ದರು. ಅದರ ಜೊತೆಗೆ 'ನನ್ನ ಕಣ್ಣ ಮುಂದೆ ಅವಳು ಸಿದ್ದಾರ್ಥ್‌ಗೆ ಹೊಡೆದಿದ್ದಳು' ಎಂದು ಸಂದೇಶ ಕಳಿಸಿದ್ದರು.

Also Read-ಜಗಜ್ಜಾಹೀರಾಗಲಿದೆ ಸುಶಾಂತ್ ಸಿಂಗ್ ರಜಪೂತ್ ಅವರ 'ಸೂಸೈಡ್ ಆರ್ ಮರ್ಡರ್'‌ ರಹಸ್ಯ!

ರಿಯಾ ಬಳಿ ಇರುವ ಸುಶಾಂತ್ ವಸ್ತುಗಳು ಯಾವುವು?

ರಿಯಾ ಚಕ್ರವರ್ತಿ ಈ ಹಿಂದೆ ಹಂಚಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್ ಡೈರಿಯಲ್ಲಿ ರಿಯಾರನ್ನು, ಅವರ ಕುಟುಂಬವನ್ನು ಅವರ ಲೈಫ್‌ನಲ್ಲಿ ಹೊಂದಿರುವುದಕ್ಕೆ ಸಂತಸಪಟ್ಟಿದ್ದಾರೆ. ರಿಯಾ ಅವರು ಬಾಟಲ್ ಫೋಟೋವನ್ನು ಹಂಚಿಕೊಂಡಿದ್ದು, ಇದು ಸುಶಾಂತ್ ಅವರ ಬಳಿ ಇದೆ ಹೇಳಿದ್ದಾರೆ. ಕಳೆದ ಶುಕ್ರವಾರ ರಿಯಾ ಇಡಿ ಕಚೇರಿಗೆ ಭೇಟಿ ನೀಡಿದ್ದರು. ಸುಶಾಂತ್ ಖಾತೆಯಿಂದ ಹಣ ಪಡೆದಿರುವ ಬಗ್ಗೆ ರಿಯಾಗೆ ಪ್ರಶ್ನೆ ಕೇಳಲಾಗಿದೆ. ರಿಯಾ ಬಳಿ ಸುಶಾಂತ್ ಅವರ ಬಾಟಲ್, ಡೈರಿ ಮಾತ್ರ ಇದೆಯಂತೆ.

Also Read-ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣ: ವಿಧಿವಿಜ್ಞಾನ ತಜ್ಞರು ಬಯಲು ಮಾಡಿದ 4 ಸತ್ಯಗಳು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌