ಆ್ಯಪ್ನಗರ

'ಎಬಿಸಿಡಿ' ಸಿನಿಮಾ ನಿರ್ದೇಶಕ, ಪ್ರಖ್ಯಾತ ಕೊರಿಯೋಗ್ರಾಫರ್ ರೆಮೋ ಡಿಸೋಜಾಗೆ ಹೃದಯಾಘಾತ!

ಬಾಲಿವುಡ್‌ನ ಪ್ರಖ್ಯಾತ ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ, ಅನೇಕ ಡಾನ್ಸ್ ರಿಯಾಲಿಟಿ ಶೋಗಳ ಜಡ್ಜ್ ಆಗಿರುವ ರೆಮೋ ಡಿಸೋಜ ಅವರು ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

THE TIMES OF INDIA NEWS SERVICE 11 Dec 2020, 6:09 pm
ಬಾಲಿವುಡ್‌ನ ಪ್ರಖ್ಯಾತ ಕೊರಿಯೋಗ್ರಾಫರ್ ರೆಮೋ ಡಿಸೋಜ ಅವರು ಹೃದಯಾಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈ ನಗರದ ಆಸ್ಪತ್ರೆಯಲ್ಲಿ ರೆಮೋ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ನಿರ್ದೇಶಕರೂ ಆಗಿರುವ ರೆಮೋ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈಗ ಅವರ ಆರೋಗ್ಯ ಸ್ಥಿರವಾಗಿದೆ, ಅವರ ಜೊತೆ ಪತ್ನಿ ಲಿಜೆಲ್ ಇದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ರೆಮೋ ಅವರು angiography surgery ಒಳಪಟ್ಟಿದ್ದರು.
Vijaya Karnataka Web bollywood choreographer remo dsouza in icu suffers after heart attack
'ಎಬಿಸಿಡಿ' ಸಿನಿಮಾ ನಿರ್ದೇಶಕ, ಪ್ರಖ್ಯಾತ ಕೊರಿಯೋಗ್ರಾಫರ್ ರೆಮೋ ಡಿಸೋಜಾಗೆ ಹೃದಯಾಘಾತ!


ರೆಮೋ ಸಿನಿಮಾಗಳು ಯಾವುವು?
ಕೊರಿಯೋಗ್ರಾಫರ್ ಆಗಿದ್ದ ರೆಮೋ 'ಫಾಲ್ತು' ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. 'ಎಬಿಸಿಡಿ: ಎನಿಬಡಿ ಕ್ಯಾನ್ ಡ್ಯಾನ್ಸ್', 'ಎಬಿಸಿಡಿ 2', 'ರೇಸ್ 3', 'ಸ್ಟ್ರೀಟ್ ಡ್ಯಾನ್ಸರ್ ತ್ರಿಡಿ' ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. 'ಸ್ಟ್ರೀಟ್ ಡ್ಯಾನ್ಸರ್ ತ್ರಿಡಿ' ಚಿತ್ರದಲ್ಲಿ ವರುಣ್ ಧವನ್, ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಸಿನಿಮಾಗಳು ಡ್ಯಾನ್ಸ್‌ಗೆ ಸಂಬಂಧಪಟ್ಟಿರುವುದಾಗಿದೆ.

ಸಾಯುವ ಮುನ್ನ ರೆಮೋ ಬಳಿ ಆಸೆ ಹೇಳಿಕೊಂಡಿದ್ದ ಸರೋಜ್ ಖಾನ್!

ರಾಷ್ಟ್ರ ಪ್ರಶಸ್ತಿ ಪಡೆದಿರುವ ರೆಮೋ ಅವರು ಇತ್ತೀಚೆಗೆ ಕೊರಿಯೋಗ್ರಾಫರ್ ಸರೋಜ್ ಖಾನ್ ಅವರ ಕುರಿತು ಸಿನಿಮಾ ಮಾಡುವ ಬಯಕೆಯನ್ನು ಹೊರಹಾಕಿದ್ದರು. ಸರೋಜ್ ಖಾನ್ ಅವರು ರೆಮೋಗೆ ಈ ಹಿಂದೆ 'ನನ್ನ ಬಗ್ಗೆ ಬಯೋಪಿಕ್ ಮಾಡೋದಿದ್ರೆ ಅದನ್ನು ನೀವೆ ಮಾಡಿ. ನಿಮಗೆ ಡಾನ್ಸ್ ಜೊತೆಗೆ ಹೋರಾಟದ ಬಗ್ಗೆಯೂ ತಿಳುವಳಿಕೆ ಇದೆ' ಎಂದು ಹೇಳಿದ್ದರಂತೆ. ಕೆಲ ತಿಂಗಳುಗಳ ಹಿಂದೆ ಸರೋಜ್ ಖಾನ್ ಇಹಲೋಕ ತ್ಯಜಿಸಿದ್ದರು.

Also Read-ದಿಲೀಪ್ ಕುಮಾರ್ ಮೊಮ್ಮಗಳು ಬಾಲಿವುಡ್‌ಗೆ

ಡ್ಯಾನ್ಸ್ ರಿಯಾಲಿಟಿ ಶೋಗಳ ಜಡ್ಜ್ ಇವರು!

1995ರಿಂದ ಅನೇಕ ಹಿಂದಿ ಸಿನಿಮಾಗಳ ಹಾಡಿಗೆ ರೆಮೋ ನೃತ್ಯ ನಿರ್ದೇಶನ ಮಾಡಿದ್ದಾರೆ, ಕೆಲ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಡ್ಯಾನ್ಸ್‌ಗೆ ಸಂಬಂಧಪಟ್ಟ ಅನೇಕ ರಿಯಾಲಿಟಿ ಶೋಗಳ ಜಡ್ಜ್ ಆಗಿ ಕಾರ್ಯ ನಿರ್ವಹಿಸಿರುವ ಅವರು ಇಂದಿನ ಅನೇಕ ಯುವ ಡ್ಯಾನ್ಸರ್‌ಗಳ ಗುರು ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು 'ದಿ ಕಪಿಲ್ ಶರ್ಮಾ ಶೋ', 'ಬಿಗ್ ಬಾಸ್ 14'ರಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು.

Also Read-ನ್ಯೂ ಲುಕ್‌ನಲ್ಲಿ ಅರವಿಂದ ಸ್ವಾಮಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌