ಆ್ಯಪ್ನಗರ

​ಸಾಮಾನ್ಯನಂತೆ ಪಾಪಡ್‌ ಮಾರಿದ ಅಸಾಮಾನ್ಯ ನಟ!

ಹೀಗೆ ಸುಡು ಬಿಸಿಲಿನಲ್ಲಿ, ಸೈಕಲ್‌ ಏರಿ ರಸ್ತೆಯ ಮೇಲೆ ಪಾಪಡ್‌ ಮಾರುತ್ತಿರುವ ವ್ಯಕ್ತಿ ಬಾಲಿವುಡ್‌ನ ಖ್ಯಾತ ನಟ.

Vijaya Karnataka Web 22 Feb 2018, 3:07 pm
Vijaya Karnataka Web bollywood greek god sells papad on the streets
​ಸಾಮಾನ್ಯನಂತೆ ಪಾಪಡ್‌ ಮಾರಿದ ಅಸಾಮಾನ್ಯ ನಟ!
ಹೀಗೆ ಸುಡು ಬಿಸಿಲಿನಲ್ಲಿ, ಸೈಕಲ್‌ ಏರಿ ರಸ್ತೆಯ ಮೇಲೆ ಪಾಪಡ್‌ ಮಾರುತ್ತಿರುವ ವ್ಯಕ್ತಿ ಬಾಲಿವುಡ್‌ನ ಖ್ಯಾತ ನಟ. ಇವರನ್ನು ಬಾಲಿವುಡ್‌ನ ಗ್ರೀಕ್‌ ಗಾಡ್‌ ಎಂದು ಕರೆಯುತ್ತಾರೆ. ಅಯ್ಯೋ ದೇವರೆ ಹೃತಿಕ್‌ ರೋಷನ್‌ಗ್ಯಾಕೆ ಈ ಪರಿಸ್ಥಿತಿ ಬಂತು ಅಂದುಕೊಂಡಿರಾ?

ವಿಭಿನ್ನ ಪ್ರಯೋಗಗಳ ಮೂಲಕ ಬಾಲಿವುಡ್‌ ಸಿನಿ ರಸಿಕರ ಮನ ತಣಿಸಿದ ನಟರಲ್ಲಿ ಹೃತಿಕ್‌ ಕೂಡ ಒಬ್ಬರು. ತಮ್ಮ ಮುಂದಿನ ಚಿತ್ರ 'ಸೂಪರ್‌ 30'ಗಾಗಿ ಈ ಡಿ-ಗ್ಲಾಮ್‌ ಅವತಾರ ಎತ್ತಿದ್ದಾರೆ ಹೃತಿಕ್‌. ಈ ಚಿತ್ರಕ್ಕಾಗಿಯೇ ದೇಹದ ತೂಕ ಇಳಿಸಿಕೊಂಡು, 'ಇವರೇನಾ ಹ್ಯಾಂಡ್ಸಮ್‌ ಹಂಕ್‌ ಹೃತಿಕ್‌?' ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದಾರೆ. ಜೈಪುರ್‌ ಬೀದಿಗಳಲ್ಲಿ ಹೀಗೆ ಸಾಮಾನ್ಯನಂತೆ ಪಾಪಡ್‌ ಮಾರುತ್ತ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ ಅಸಾಮಾನ್ಯ ನಟ.

ಈಗಾಗಲೇ ಚಿತ್ರದ ಮೇಕಿಂಗ್‌ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಅದೇ ರೀತಿ ಹೃತಿಕ್‌ ಅವರ ಪರಕಾಯ ಪ್ರವೇಶವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಅಂದಹಾಗೆ 'ಸೂಪರ್‌ 30' ಚಿತ್ರದಲ್ಲಿ ಗಣಿತಶಾಸ್ತ್ರಜ್ಞ ಆನಂದ್‌ ಕುಮಾರ್ ಪಾತ್ರದಲ್ಲಿ ಹೃತಿಕ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಬಿಹಾರ ಮೂಲದವರಾದ ಆನಂದ್‌ ಕುಮಾರ್‌, ಎಂಜನಿಯರಿಂಗ್‌ ಆಸೆ ಹೊತ್ತ ಬಡ ಕುಟುಂಬದಿಂದ ಬಂದಂತಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದವರು. ಆನಂದ್‌ ಕುಮಾರ್‌ ಅವರಿಂದ ಜ್ಞಾನ ಸಂಪಾದಿಸಿದ 450 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌