ಆ್ಯಪ್ನಗರ

ಹುತಾತ್ಮ ಯೋಧನ ಕುಟುಂಬಕ್ಕೆ ಅಕ್ಷಯ್ ಕುಮಾರ್ ಧನ ಸಹಾಯ

ಭಾರತ್ ಕೆ ವೀರ್ ಮೂಲಕ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕುಟುಂಬಕ್ಕೆ ₹ 5 ಕೋಟಿ ದೇಣಿಕೆ ನೀಡುವುದಾಗಿ ಅಕ್ಷಯ್ ಕುಮಾರ್ ಭರವಸೆ ನೀಡಿದ್ದರು. ಈ ಮಹತ್ವದ ಕಾರ್ಯಕ್ಕೆ ಅಭಿಮಾನಿಗಳೂ ಕೈಜೋಡಿಸಬೇಕು ಎಂದು ಅಕ್ಷಯ್ ವಿನಂತಿಸಿಕೊಂಡಿದ್ದರು.

TIMESOFINDIA.COM 28 Feb 2019, 6:11 pm
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಮಾನವೀಯ ಗುಣವನ್ನು ಮೆರೆದಿದ್ದಾರೆ. ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧ ಭರತ್‌ಪುರದ ಜೀತ್ ರಾಮ್ ಗುರ್ಜಾರ್ ಅವರ ಪತ್ನಿಗೆ 15 ಲಕ್ಷ ರೂ.ಗಳನ್ನು ದಾನ ಮಾಡಿರುವುದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಡಿಐಜಿ ಜಗದೀಶ್ ನಾರಾಯಣ್ ಮೆನನ್ ತಿಳಿಸಿದ್ದಾರೆ.
Vijaya Karnataka Web akshay-kumar


ಆರ್ಥಿಕ ಸಹಾಯ ಮಾಡಿದ್ದಕ್ಕೆ ಅಕ್ಷಯ್ ಕುಮಾರ್‌ಗೆ ಹುತಾತ್ಮ ಯೋಧ ಜೀತ್ ರಾಮ್ ಗುರ್ಜಾರ್ ಅವರ ಸಹೋದರ ವಿಕ್ರಮ್ ಸಿಂಗ್ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಅವರ ಕುಟುಂಬ ತುಂಬಾ ಆರ್ಥಿಕ ಸಂಕಷ್ಟದಲ್ಲಿತ್ತು. ಸಹೋದರ ಮಾತ್ರ ಜೀವನಾಧಾರವಾಗಿದ್ದ. ಇದನ್ನು ತಿಳಿದು ಸ್ವತಃ ಅಕ್ಷಯ್ ಕುಮಾರ್ ಸಹಾಯ ಹಸ್ತ ಚಾಚಿದ್ದಾರೆ.

ಅವರ ತಂದೆತಾಯಿ, ಸಹೋದರನ ಪತ್ನಿ ಜತೆಗೆ ಇಬ್ಬರು ಹೆಣ್ಣುಮಕ್ಕಳು ಅವಲಂಬಿತರಾಗಿದ್ದಾರೆ. ಸದ್ಯಕ್ಕೆ ಇಬ್ಬರು ಹೆಣ್ಣುಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಿ ನಡೆಸಿದ್ದಾರೆ. ಹಾಗಾಗಿ ಹುತಾತ್ಮ ಯೋಧರ ಕುಟುಂಬ ತೀರ ಸಂಕಷ್ಟದಲ್ಲಿತ್ತು.

ಭಾರತ್ ಕೆ ವೀರ್ ಮೂಲಕ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕುಟುಂಬಕ್ಕೆ ₹ 5 ಕೋಟಿ ದೇಣಿಕೆ ನೀಡುವುದಾಗಿ ಅಕ್ಷಯ್ ಕುಮಾರ್ ಭರವಸೆ ನೀಡಿದ್ದರು. ಈ ಮಹತ್ವದ ಕಾರ್ಯಕ್ಕೆ ಅಭಿಮಾನಿಗಳೂ ಕೈಜೋಡಿಸಬೇಕು ಎಂದು ಅಕ್ಷಯ್ ವಿನಂತಿಸಿಕೊಂಡಿದ್ದರು.

"ಪುಲ್ವಾಮಾ ಘಟನೆ ಮರೆಯಲಾಗದು. ನಾವೆಲ್ಲಾ ಕೋಪಗೊಂಡಿದ್ದೇವೆ. ಈಗ ಸಮಯ ಬಂದಿದೆ. ಪುಲ್ವಾಮಾ ಹುತಾತ್ಮರಿಗೆ bharatkeveer.gov.in ಮೂಲಕ ದೇಣಿಗೆ ನೀಡಿ ಹುತಾತ್ಮ ಯೋಧರಿಗೆ ಈ ಮೂಲಕ ಗೌರವ ಸಲ್ಲಿಸೋಣ. ಇದು ಅಧಿಕೃತ ವೆಬ್‌ಸೈಟ್. ಫೇಕ್ ಖಾತೆಗಳಿಂದ ಮೋಸ ಹೋಗಬೇಡಿ" ಎಂದಿದ್ದರು.

ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವು ನೀಡಲು ಸ್ಥಾಪಿಸಲಾಗಿರುವ ಭಾರತ್‌ ಕೆ ವೀರ್ ನಿಧಿಗೆ ಇದುವರೆಗೆ 46 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಮಂದಿ ಭಾರತ್‌ ಕೆ ವೀರ್‌ ಟ್ರಸ್ಟ್‌ಗೆ ದೇಣಿಗೆ ನೀಡಿದ್ದಾರೆ.

ಇದುವರೆಗೂ 46 ಕೋಟಿ ರೂಪಾಯಿಗೂ ಅಧಿಕ ಹಣ ಸಂದಾಯವಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ಹೇಯ ಕೃತ್ಯದ ನಂತರ ಹುತಾತ್ಮ ಯೋಧರಿಗೆ ನೆರವು ನೀಡಲು ದೇಶದ ಎಲ್ಲೆಡೆಯಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಆದರೆ ದೇಣಿಗೆ ಹೆಸರಲ್ಲಿ ಕೆಲವರು ವಂಚನೆ ಮಾಡುವ ಸಾಧ್ಯತೆಗಳು ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವೇ ಈಗ ನಾಗರಿಕರಿಗೆ ದೇಣಿಗೆ ಸಲ್ಲಿಸಲು ವ್ಯವಸ್ಥೆ ಮಾಡಿದೆ.
ಭಾರತ್‌ ಕೆ ವೀರ್‌ ಎಂಬ ಟ್ರಸ್ಟ್‌ ಅನ್ನು ಆರಂಭಿಸಲಾಗಿದ್ದು, ಪ್ರಧಾನ ನಿರ್ದೇಶಕರು ಇದರ ನೇತೃತ್ವ ವಹಿಸುತ್ತಾರೆ.

ಈ ಟ್ರಸ್ಟ್‌ನಲ್ಲಿ ಸಂಗ್ರಹವಾಗುವ ದೇಣಿಗೆಗಳಿಂದ ಯೋಧರಿಗೆ ನೆರವು ನೀಡಲಾಗುವುದು. ಬಿಎಸ್‌ಎಫ್‌, ಸಿಆರ್‌ಪಿಎಫ್‌, ಸಿಐಎಸ್‌ಎಫ್‌, ಐಟಿಬಿಪಿ, ಎನ್‌ಎಸ್‌ಜಿ, ಎಸ್‌ಎಸ್‌ಬಿ, ಅಸ್ಸಾಂ ರೈಫಲ್ಸ್‌ನಲ್ಲಿರುವ ಯೋಧರು ಹಾಗೂ ಅವರ ಕುಟುಂಬದವರಿಗೆ ನೆರವು ನೀಡಲಾಗುವುದು. ಕಳೆದ ಕೆಲವು ದಿನಗಳಿಂದ bharatkeveer.gov.in ವೆಬ್‌ಸೈಟ್‌ಗೆ ಹಲವಾರು ಭೇಟಿ ನೀಡಿ ದೇಣಿಗೆಗಳನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌