ಆ್ಯಪ್ನಗರ

ಸತತ ಪರಾಜಯ, 22 ಸಿನಿಮಾ ರೈಟ್ಸ್ ಮಾರಾಟ ಮಾಡಿಕೊಂಡ ಶಾರುಖ್!

ಸ್ವದೇಶ್, ಓಂ ಶಾಂತಿ ಓಂ, ದಿಲ್‍ವಾಲೆ, ಫಿರ್ ಭಿ ದಿಲ್ ಹೈ ಹಿಂದೂಸ್ಥಾನಿ, ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್, ಡಿಯರ್ ಜಿಂದಗಿ, ಪಹೇಲಿ, ಬಿಲ್ಲೂ, ಚಮತ್ಕಾರ್, ಅಂಜಾಮ್, ರಾಮ್ ಜಾನೆ ಚಿತ್ರಗಳಿರುವುದು ವಿಶೇಷ.

Times Now 11 Apr 2019, 5:22 pm
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ತಾನು ಅಭಿನಯಿಸಿರುವ 22 ಸಿನಿಮಾಗಳ ಸ್ಯಾಟಲೈಟ್ ಹಕ್ಕುಗಳನ್ನು ಟಿವಿ ವಾಹಿನಿಯೊಂದಕ್ಕೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸುಮಾರು 200 ಕೋಟಿ ರೂ.ಗಳಿಗೆ ಟಿವಿ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ ಎಂದಿವೆ ಮೂಲಗಳು.
Vijaya Karnataka Web srk


ಅವುಗಳಲ್ಲಿ ಸ್ವದೇಶ್, ಓಂ ಶಾಂತಿ ಓಂ, ದಿಲ್‍ವಾಲೆ, ಫಿರ್ ಭಿ ದಿಲ್ ಹೈ ಹಿಂದೂಸ್ಥಾನಿ, ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್, ಡಿಯರ್ ಜಿಂದಗಿ, ಪಹೇಲಿ, ಬಿಲ್ಲೂ, ಚಮತ್ಕಾರ್, ಅಂಜಾಮ್, ರಾಮ್ ಜಾನೆ ಚಿತ್ರಗಳಿರುವುದು ವಿಶೇಷ.

ಶಾರುಖ್ ನಟಿರುವ ಕೊನೆಯ ಮೂರು ಚಿತ್ರಗಳು (ರಯೀಸ್, ಬಜ್ ಹ್ಯಾರಿ ಮೆಟ್ ಸೆಜಲ್, ಝೀರೋ) ಬಾಕ್ಸ್ ಆಫೀಸ್‌ನಲ್ಲಿ ಘೋರ ಸೋಲುಂಡಿವೆ. ಇದರಿಂದ ಶಾರುಖ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೇನ್‍ಮೆಂಟ್ ಭಾರಿ ನಷ್ಟಕ್ಕೊಳಗಾಗಿದೆ ಎಂದಿವೆ ಮೂಲಗಳು. ಈ ಹಿನ್ನೆಲೆಯಲ್ಲಿ ಶಾರುಖ್ ತನ್ನ ಸಿನಿಮಾ ಸ್ಯಾಟಲೈಟ್ ಹಕ್ಕುಗಳನ್ನು ಮಾರಾಟ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಶೀಘ್ರದಲ್ಲೇ ಶಾರುಖ್ ತಮಿಳು ಚಿತ್ರೋದ್ಯಮಕ್ಕೆ ಅಡಿಯಿಡುವ ಸೂಚನೆ ನೀಡಿದ್ದಾರೆ. ಮಂಗಳವಾರ ಕಾಲಿವುಡ್ ನಿರ್ದೇಶಕ ಅಟ್ಲಿ ಕಚೇರಿಗೆ ಭೇಟಿ ನೀಡಿದ್ದಾರೆ. ಅಟ್ಲಿ ಹೇಳಿರುವ ಕಥೆಯಲ್ಲಿ ಎರಡು ಅವರಿಗೆ ಇಷ್ಟವಾಗಿಯಂತೆ. ಶೀಘ್ರದಲ್ಲೇ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಸದ್ಯಕ್ಕೆ ಅವರು ಐಪಿಎಲ್‌ನಲ್ಲಿ ಬಿಝಿಯಾಗಿ ಇದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿರುವ ಅವರು ಆಟಗಾರ ಮೇಲೆ ತನ್ನ ಚಿತ್ತ ಹರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌