ಆ್ಯಪ್ನಗರ

ಬ್ರಾಡ್ಲಿ ಕೂಪರ್‌ಗೆ ಹೊಸ ಗರ್ಲ್‌ಫ್ರೆಂಡ್ ಜೆನ್ನಿಫರ್‌ ಗಾರ್ನರ್‌

ಜಗತ್ತಿನಲ್ಲೇ ಅತ್ಯಧಿಕ ಸಂಬಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ಹಾಲಿವುಡ್ ನಟ ಬ್ರಾಡ್ಲಿ ಕೂಪರ್‌ಗೆ ಈಗ ಹೊಸ ಗರ್ಲ್‌ಫ್ರೆಂಡ್ ಸಿಕ್ಕಿದ್ದಾರೆ. ಇವರಿಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಇದೆ ಎಂಬ ಸುದ್ದಿ ಹಾಲಿವುಡ್‌ನಲ್ಲಿ ಹರಿದಾಡುತ್ತಿದೆ.

Vijaya Karnataka 22 Aug 2019, 11:12 am
ಹಾಲಿವುಡ್‌ ನಟ ಬ್ರಾಡ್ಲಿ ಕೂಪರ್‌ಗೆ ಹೊಸ ಗರ್ಲ್ಫ್ರೆಂಡ್‌ ಸಿಕ್ಕಿದ್ದಾರಂತೆ. ಅವರ ಹೆಸರೀಗ ಹಾಲಿವುಡ್‌ ನಟಿ ಜೆನಿಫರ್‌ ಗಾರ್ನರ್‌ ಜೊತೆಗೆ ಕೇಳಿಬರುತ್ತಿದೆ. ಇವರಿಬ್ಬರು ಪರಸ್ಪರ ಸ್ನೇಹಿತರಾಗಿದ್ದರೂ ಈಗ ಇವರಿಬ್ಬರ ಮಧ್ಯೆ ಸ್ನೇಹಕ್ಕಿಂತಲೂ ಮಿಗಿಲಾದ ಸಂಬಂಧವಿದೆ ಎಂದು ವರದಿಯಾಗಿದೆ.
Vijaya Karnataka Web bradley cooper


ಕೂಪರ್‌ ಮತ್ತು ಗಾರ್ನರ್‌ ಈಗ ಅನೇಕ ಕಡೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈವರೆಗೆ ಕೂಪರ್‌ ಅವರು ಗಾಯಕಿ ಲೇಡಿ ಗಾಗಾ ಜೊತೆ ಡೇಟಿಂಗ್‌ನಲ್ಲಿದ್ದರು. ಇದೀಗ ಜೆನಿಫರ್‌ ಗಾರ್ನರ್‌ರಿಂದಾಗಿ ಇವರಿಬ್ಬರ ಸಂಬಂಧ ಬ್ರೇಕಪ್‌ ಆಗುವ ಸಾಧ್ಯತೆ ಇದೆ.

ಅಕಾಡೆಮಿ ಅವಾರ್ಡ್ಸ್, ಟೋನಿ ಅವಾರ್ಡ್ಸ್ ಹಾಗೂ ಗ್ರ್ಯಾಮಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಹಾಲಿವುಡ್ ನಟ ಬ್ರಾಡ್ಲಿ ಕೂಪರ್ ಜಗತ್ತಿನಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಎನ್ನಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌