ಆ್ಯಪ್ನಗರ

ಬ್ರಿಟನ್ ಸೆನ್ಸಾರ್ ಮಂಡಳಿಯಿಂದ 'ಪದ್ಮಾವತಿ'ಗೆ ಗ್ರೀನ್ ಸಿಗ್ನಲ್

ಬಾಲಿವುಡ್‌ನ ಬಿಗ್ ಬಜೆಟ್ ಚಿತ್ರ 'ಪದ್ಮಾವತಿ' ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದು ಇಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ಬ್ರಿಟನ್ ಸೆನ್ಸಾರ್ ಮಂಡಳಿ ಮಾತ್ರ ಗ್ರೀನ್ ಸಿಗ್ನಲ್ ಕೊಟ್ಟಿದೆ.

TNN 23 Nov 2017, 3:25 pm
ಬಾಲಿವುಡ್‌ನ ಬಿಗ್ ಬಜೆಟ್ ಚಿತ್ರ 'ಪದ್ಮಾವತಿ' ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದು ಇಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ಬ್ರಿಟನ್ ಸೆನ್ಸಾರ್ ಮಂಡಳಿ ಮಾತ್ರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಒಂದೇ ಒಂದು ಕಟ್ ಇಲ್ಲದಂತೆ ಸಿನಿಮಾಗೆ ಪ್ರಮಾಣಪತ್ರ ನೀಡಿದೆ ಎಂದು ಎಎನ್‍ಐ ವರದಿ ಮಾಡಿದೆ.
Vijaya Karnataka Web british censor board certifies padmavati for dec 1 release in uk
ಬ್ರಿಟನ್ ಸೆನ್ಸಾರ್ ಮಂಡಳಿಯಿಂದ 'ಪದ್ಮಾವತಿ'ಗೆ ಗ್ರೀನ್ ಸಿಗ್ನಲ್


ಹಾಗಾಗಿ ಈ ಮೊದಲೇ ನಿರ್ಧರಿಸಿದಂತೆ ಪದ್ಮಾವತಿಯನ್ನು ಡಿಸೆಂಬರ್ 1ರಂದು ಬ್ರಿಟನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಭಾರತದಲ್ಲಿ ಈ ಸಿನಿಮಾ ಬಗ್ಗೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿಸಿನಿಮಾ ಸರ್ಟಿಫಿಕೇಷನ್ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಬ್ರಿಟನ್ ಸೆನ್ಸಾರ್ ಮಂಡಳಿಯನ್ನು ಭಾರತ ಕೋರಿತ್ತು. ಆದರೆ ಅವರ ವಿನಂತಿಯನ್ನು ಅಲ್ಲಿನ ಸೆನ್ಸಾರ್ ಮಂಡಳಿ ತಿರಸ್ಕರಿಸಿ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದೆ.

PADMAVATI (12A) moderate violence, injury detail https://t.co/2S1pF33WVN — BBFC (@BBFC) November 22, 2017 ಭಾರತದಲ್ಲಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದರೂ ಯುಕೆಯಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಚಿತ್ರತಂಡಕ್ಕೆ ಸ್ವಲ್ಪ ನಿರಾಳ ಅನ್ನಿಸಿದೆ. ಭಾರತದಲ್ಲಿ ಇನ್ನೂ ಪದ್ಮಾವತಿ ವಿವಾದ ತಣ್ಣಗಾಗಿಲ್ಲ. ಕೆಲವು ರಾಜ್ಯಗಳಲ್ಲಿ ಈ ಸಿನಿಮಾ ಮೇಲೆ ನಿಷೇಧ ಹೇರಲಾಗಿದೆ. ವಿವಾದ ತಣ್ಣಗಾದ ಬಳಿಕ 2018ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ರಯತ್ನ ಮಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌