ಆ್ಯಪ್ನಗರ

ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಬ್ರಿಟ್ನಿ ಸ್ಪಿಯರ್ಸ್‌

ತಮ್ಮ ತಂದೆಯ ಅನಾರೋಗ್ಯದಿಂದಾಗಿ ಮಾನಸಿಕವಾಗಿ ತೀವ್ರ ಕುಗ್ಗಿ ಹೋಗಿದ್ದ ಪಾಪ್‌ ತಾರೆ ಬ್ರಿಟ್ನಿ ...

Vijaya Karnataka 5 Apr 2019, 5:00 am
ತಮ್ಮ ತಂದೆಯ ಅನಾರೋಗ್ಯದಿಂದಾಗಿ ಮಾನಸಿಕವಾಗಿ ತೀವ್ರ ಕುಗ್ಗಿ ಹೋಗಿದ್ದ ಪಾಪ್‌ ತಾರೆ ಬ್ರಿಟ್ನಿ ಸ್ಪಿಯರ್ಸ್‌ ಇದೀಗ ಮಾನಸಿಕ ಆರೋಗ್ಯವರ್ಧನೆಗಾಗಿ ಚಿಕಿತ್ಸೆಗೆ ಮೊರೆ ಹೋಗಿದ್ದಾರೆ. ಅವರ ತಂದೆ ಜೇಮಿ ಸ್ಪಿಯರ್ಸ್‌ ಇತ್ತೀಚೆಗೆ ಉದರಕ್ಕೆ ಸಂಬಂಧಿಸಿದ ಕಾಯಿಲೆಯೊಂದಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಮಯದಲ್ಲಿ ತೀವ್ರ ಮಾನಸಿಕ ಒತ್ತಡ ಎದುರಿಸಿದ್ದ ಅವರು ತಮ್ಮ ಕೆಲಸಕ್ಕೂ ಸ್ವಲ್ಪ ಕಾಲ ಬ್ರೇಕ್‌ ನೀಡಿದ್ದರು.
Vijaya Karnataka Web britney spears goes treatment for mental health
ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಬ್ರಿಟ್ನಿ ಸ್ಪಿಯರ್ಸ್‌


ಇದೀಗ ಅವರು ಈ ಒತ್ತಡದಿಂದ ಹೊರಬರಲು 30 ದಿನಗಳ ಅವಧಿಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರಂತೆ. ಈ ಕುರಿತು ಟ್ವೀಟ್‌ ಮಾಡಿರುವ ಬ್ರಿಟ್ನಿ, ನನಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಲು ನಿರ್ಧರಿಸಿದ್ದೇನೆ. ಪ್ರತಿಯೊಬ್ಬರು ತಮಗಾಗಿ ಸ್ವಲ್ಪ ಟೈಮ್‌ ಕೊಡಬೇಕು. ನಾನು ಕೂಡಾ ಅದನ್ನೇ ಮಾಡುತ್ತಿದ್ದೇನೆ ಎಂದು ಬರೆದುಕೊಂಡು, ಫಾಲ್‌ ಇನ್‌ ಲವ್‌ ವಿದ್‌ ಟೇಕಿಂಗ್‌ ಕೇರ್‌ ಆಫ್‌ ಯುವರ್‌ಸೆಲ್ಫ್‌, ಮೈಂಡ್‌, ಬಾಡಿ, ಸ್ಪಿರಿಟ್‌ ಎಂಬ ವಾಕ್ಯವಿರುವ ಫೋಟೊವನ್ನು ಪೋಸ್ಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌