ಆ್ಯಪ್ನಗರ

ಉದ್ಯಮಿಗೆ 24 ಲಕ್ಷ ರೂ. ಪಂಗನಾಮ : ಶಿಲ್ಪಾ, ಪತಿ ವಿರುದ್ಧ ಕೇಸ್‌

ಬೆಡ್‌ಶೀಟ್‌ ಉದ್ಯಮಿಯೊಬ್ಬರು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತವರ ಪತಿ ರಾಜ್‌ ಕುಂದ್ರಾ ಸೇರಿದಂತೆ ಬೆಸ್ಟ್‌ ಡೀಲ್‌ ಟಿವಿ ಚಾನೆಲ್‌ನ 3 ನಿರ್ದೇಶಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 28 Apr 2017, 1:53 pm
ಭಿವಂಡಿ: ಇಲ್ಲಿನ ಬೆಡ್‌ಶೀಟ್‌ ಉದ್ಯಮಿಯೊಬ್ಬರು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತವರ ಪತಿ ರಾಜ್‌ ಕುಂದ್ರಾ ಸೇರಿದಂತೆ ಬೆಸ್ಟ್‌ ಡೀಲ್‌ ಟಿವಿ ಚಾನೆಲ್‌ನ 3 ನಿರ್ದೇಶಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದಾರೆ. ತಮಗೆ ಈ ಐವರಿಂದ 24.12 ಲಕ್ಷ ರೂ. ವಂಚನೆಯಾಗಿದೆ ಎಂದು ಉದ್ಯಮಿ ರವಿ ಭಾಲೋಟಿಯಾ ಆರೋಪಿಸಿದ್ದಾರೆ.
Vijaya Karnataka Web businessman files case against shilpa shetty husband over rs 24 lakh unpaid dues
ಉದ್ಯಮಿಗೆ 24 ಲಕ್ಷ ರೂ. ಪಂಗನಾಮ : ಶಿಲ್ಪಾ, ಪತಿ ವಿರುದ್ಧ ಕೇಸ್‌


ಬೆಸ್ಟ್‌ ಡೀಲ್‌ ಟಿವಿ ಚಾನೆಲ್‌ ಒಂದು ಹೋಂ ಶಾಪಿಂಗ್‌ ಚಾನೆಲ್‌ ಆಗಿದ್ದು, ಶಿಲ್ಪಾ ಶೆಟ್ಟಿ ಮತ್ತವರ ಪತಿ ರಾಜ್‌ ಕುಂದ್ರಾ ಇದರ ಪಾಲುದಾರಿಕೆ ಹೊಂದಿರುವುದರಿಂದ ಅವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಉದ್ಯಮಿಯ ದೂರಿನ ಪ್ರಕಾರ ಬೆಸ್ಟ್‌ ಡೀಲ್‌ ಚಾನೆಲ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್‌ ಗರ್ಗ್‌ 2015ರ ಮೇ ತಿಂಗಳಲ್ಲಿ ತಮಗೆ ಕರೆ ಮಾಡಿ, ಚಾನಲ್‌ ಮೂಲಕ ಬೆಡ್‌ಶೀಟ್‌ಗಳನ್ನು ಮಾರುವಂತೆ ಕೇಳಿಕೊಂಡರು. ಕಂಪನಿಯ ನಿರ್ದೇಶಕರನ್ನು ಭೇಟಿ ಮಾಡಿದ ಬಳಿಕ ವ್ಯವಹಾರಕ್ಕೆ ಒಪ್ಪಿಗೆ ಸೂಚಿಸಿದ ರವಿ, ಚಾನೆಲ್‌ ಮೂಲಕ ತಮ್ಮ ಬೆಡ್‌ಶೀಟ್‌ಗಳನ್ನು ಮಾರಲು ಮುಂದಾದರು.

ಪ್ರಾರಂಭದಲ್ಲಿ ರವಿಗೆ ನೀಡಬೇಕಾದ ಹಣವನ್ನು ಅಚ್ಚುಕಟ್ಟಾಗಿಯೇ ಪಾವತಿಸಿದ ಚಾನೆಲ್‌, ನಂತರದ ದಿನಗಳಲ್ಲಿ ಬಾಕಿ ಹಣವನ್ನು ಉಳಿಸಿಕೊಂಡಿತು ಎಂದು ಆರೋಪಿಸಿದ್ದಾರೆ. ಒಟ್ಟು 24.12 ಲಕ್ಷ ರೂ. ಬಾಕಿ ಹಣವನ್ನು ನೀಡದೆ ವಂಚಿಸುವುದಲ್ಲದೇ, ಟಿವಿ ಚಾನೆಲ್‌ನ್ನು ತಮ್ಮ ಗಮನಕ್ಕೆ ತರದೆ ಮುಚ್ಚಲಾಗಿದೆ ಎಂದು ದೂರಿದ್ದಾರೆ.

ಸದ್ಯಕ್ಕೆ ಕೊಂಗೊನ್ ಪೊಲೀಸ್‌ ಠಾಣೆಯಲ್ಲಿ ಶಿಲ್ಪಾ ಶೆಟ್ಟಿ, ರಾಜ್‌ ಕುಂದ್ರಾ, ದರ್ಶಿತ್‌ ಶಾಹ್‌, ಉದಯ್‌ ಕೊಠಾರಿ ಮತ್ತು ವೇದಾಂತ್‌ ಬಲ್ಲಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌